ಚಾಮರಾಜನಗರ: ಕಾರ್ಮಿಕ ದಿನಾಚರಣೆ ಅಂಗವಾಗಿ ಜಿಲ್ಲಾ ದಿನಸಿ ಮತ್ತು ಜವಳಿ ಅಂಗಡಿಗಳ ಕೂಲಿ ಕಾರ್ಮಿಕ ರ ಸಂಘದ ವತಿಯಿಂದ ನಗರದ 18ನೇ ವಾರ್ಡ್ ನ ಉಪ್ಪಾರ ಬೀದಿಯ
1ನೇ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಸಿಹಿ ವಿತರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಚೆನ್ನಶೆಟ್ಟಿ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಪ್ರತಿ ವರ್ಷವೂ ಕಾರ್ಮಿಕ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿಯೂ ಅಂಗನವಾಡಿ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು , ಸಿಹಿ ವಿತರಿಸುವ ಮೂಲಕ ನಮ್ಮ ಸಂಘದ ವತಿಯಿಂದ ಆಚರಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯ ಕರ್ತೆ ರಾಜೇಶ್ವರಿ, ಸಹಾಯಕಿರಾದ ರತ್ನಮ್ಮ, ಮಹದೇವಮ್ಮ ಇತರರು ಹಾಜರಿದ್ದರು.