ಕಾರ್ಮಿಕರು ದೇಶದ ಸಂಪತ್ತು, ಬೆನ್ನೆಲುಬು:  ನಾಗು ರಮೇಶ್

  • ಕರುನಾಡ ಕಾರ್ಮಿಕರ ವೇದಿಕೆ ವತಿಯಿಂದ ಕಾರ್ಮಿಕರ ದಿನಾಚರಣೆ, 10 ಮಂದಿ ಕಾರ್ಮಿಕರಿಗೆ ಸೇಪ್ಟಿ ಕಿಟ್ ವಿತರಣೆ

ಚಾಮರಾಜನಗರ: ಕರುನಾಡ ಕಾರ್ಮಿಕರ ವೇದಿಕೆ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ನಗರದ ಐಎಲ್ ಸಿ ರಸ್ತೆಯಲ್ಲಿರುವ ನಂದಿಭವನದ ಸಮೀಪದಲ್ಲಿರುವ ಕರುನಾಡ ಕಾರ್ಮಿಕರ ವೇದಿಕೆ ಕಚೇರಿಯಲ್ಲಿ ನಡೆದ ಕಾರ್ಮಿಕ ದಿನಾಚರಣೆಯಲ್ಲಿ 10 ಮಂದಿಗೆ ಸೇಪ್ಟಿ ಕಿಟ್ ವಿತರಿಸಲಾಯಿತು.
ಕಾರ್ಮಿಕರಿಗೆ ಸೇಪ್ಟಿ ಕಿಟ್ ವಿತರಿಸಿದ ಮಹಿಳಾ ಘಟಕ ಅಧ್ಯಕ್ಷೆ ನಾಗು ರಮೇಶ್ ಮಾತನಾಡಿ, ಕಾರ್ಮಿಕರು ದೇಶದ ನಿಜವಾದ ಸಂಪತ್ತು ಮತ್ತು ಬೆನ್ನೆಲುಬು. ದೇಶದ ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ನಿರ್ಮಾಣ ಮತ್ತು ಉತ್ಪಾದನಾ ರಂಗದಲ್ಲಿ ಕಾರ್ಮಿಕರ ಶ್ರಮ ಅಪಾರವಾಗಿದೆ ಎಂದರು. ಕಾರ್ಮಿಕ ದಿನಾಚರಣೆಯ ಅಂಗವಾಗಿ ನಮ್ಮ ಸಂಘಟನೆ ಯ ವತಿಯಿಂದ 10ಮಂದಿ ಕಾರ್ಮಿಕರಿಗೆ ಸೇಪ್ಟಿ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕ  ಪರ ಹೆಚ್ಚಿನ ಕಾರ್ಯಕ್ರಮ ರೂಪಿಸಲಾಗುತ್ತದೆ. ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆ ಜಿಲ್ಲಾಧ್ಯಕ್ಷ ಆರ್.ಕುಮಾರ್ ಮಾತನಾಡಿ,ಕಾರ್ಮಿಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಇಡೀ ದೇಶದ ಪ್ರಗತಿಯು ಕಾರ್ಮಿಕರ ಶ್ರಮದ ಮೇಲೆ ಅವಲಂಬಿತವಾಗಿದೆ ಎಂದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರವು ಸಾಮಾಜಿಕ ಭದ್ರತೆ, ಅಪಘಾತ ವಿಮೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಜಿಲ್ಲೆಯ  ಅರ್ಹ ಕಾರ್ಮಿಕರಿಗೆ ತಲುಪಿಸಲು ಸಂಘ ಕೆಲಸ ಮಾಡುತ್ತದೆ.
ಕಾರ್ಮಿಕರ ಶ್ರಮ ಮತ್ತು ತ್ಯಾಗವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರುನಾಡ ಕಾರ್ಮಿಕ ವೇದಿಕೆಯ ಮಹಿಳಾ ಘಟಕ ಉಪಾಧ್ಯಕ್ಷೆ ಎನ್.ರೂಪ ಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ಆರ್.ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದ್,  ಖಜಾಂಚಿ  ಬಸವರಾಜು, ಸಂಘಟನಾ ಕಾರ್ಯದರ್ಶಿ ಸಚಿನ್, ರುದ್ರ, ಕುಮಾರ್, ಸುನೀಲ್, ಮಹೇಶ್, ಹೊನ್ನಪ್ಪ, ರಾಮಚಂದ್ರ, ಮಹೇಶ್ ಇತರರು.

Leave a Reply

Your email address will not be published. Required fields are marked *