ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಜನಪದ ಕಾವ್ಯದ ಅಮೂಲ್ಯ ಸಂಪತ್ತಿನ ಕೇಂದ್ರ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಪ್ರಸಿದ್ದ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟಕ್ಕೆ ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಜನಪದ ಕಾವ್ಯದ ಅಮೂಲ್ಯ ಸಂಪತ್ತಿನ ಕೇಂದ್ರವಾಗಿದೆ. ಪ್ರಕೃತಿ, ಪ್ರಾಣಿ-ಪಕ್ಷಿಗಳಿಗೆ ಎಷ್ಟು ವೈವಿಧ್ಯಮಯವಾಗಿದೆಯೋ ಹಾಗೆಯೇ ಪೌರಾಣಿಕವಾಗಿ ಬಿಳಿಗಿರಂಗನಾಥ ಹಾಗೂ ಸೋಲಿಗರ ಅವಿನಾಭಾವ ಸಂಬಂಧಕ್ಕೆ ಮಹತ್ವವಿದೆಯೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಬಿಳಿಗಿರಂಗನಾಥ ಸ್ವಾಮಿ ಆಧ್ಯಾತ್ಮಿಕ ಮತ್ತು ಜಾನಪದ ಮಹತ್ವ ಕುರಿತು ಮಾತನಾಡುತ್ತ ಬಿಳಿಗಿರಿ ರಂಗನ ಬೆಟ್ಟ ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಮತ್ತು ಆಯುರ್ವೇದ ಸಸ್ಯ ರಾಶಿಗೆ ಜಗತ್ತಿಗೆ ಪ್ರಸಿದ್ಧಿ ಯಾಗಿದೆ. ಹಾಗೆಯೇ ಇಲ್ಲಿನ ಸೋಲಿಗರ ಜೀವನ ಮೌಲ್ಯಗಳು ಚಿಂತನೆಗಳು ಅವರ ವಿಶಿಷ್ಟ ಜನಪದ ಚಿಂತನೆಗಳು ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಸ್ವತಃ ಭಗವಂತನಾದ ಬಿಳಿಗಿರಂಗನಾಥನನ್ನು ಭಾವನ ಸಂಬಂಧದಲ್ಲಿ ಕಾಣುವ ಮೂಲಕ ಅಪರೂಪದ ಭಗವಂತ ಮತ್ತು ಮಾನವ ಅವಿನಾಭಾವ ಸಂಬಂಧ ಪ್ರೀತಿ,ವಿಶ್ವಾಸ ಹಾಗೂ ಬಾಂಧವ್ಯದ ಪ್ರತೀಕವಾಗಿ ಇಂದಿಗೂ ಜನ ಮಾನಸದಲ್ಲಿ ಉಳಿದಿದೆ. ರಂಗನಾಥ ಸೋಲಿಗರ ಕುಸುಮಾಲೆಯನ್ನು ವಿವಾಹವಾಗುವ ಅತ್ಯಮೂಲ್ಯ ಜನಪದ ಕಾವ್ಯಗಳು ಮನೆ ಮಾತಾಗಿವೆ. ಸೋಲಿಗ ಸಂಸ್ಕೃತಿಯನ್ನು ಗೌರವಿಸುವ ಹಾಗೂ ಅದರ ಮಹತ್ವವನ್ನು ತಿಳಿಯುವ ಕಾರ್ಯವನ್ನು ಯುವ ಜನಾಂಗ ಮಾಡಬೇಕು. ಬಿಳಿಗಿರಿರಂಗನ ಬೆಟ್ಟ ಚಾಮರಾಜನಗರದ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಪ್ರಸಿದ್ಧ ಜನಪದ ಕಲಾವಿದರಾದ ರವಿಚಂದ್ರ ಪ್ರಸಾದ್ ಕಹಳೆರವರು ಬಿಳಿಗಿರಿರಂಗನಾಥ ಸ್ವಾಮಿಯ ಅಮೂಲ್ಯ ಬಹುಪರಾಕ್ ಅನ್ನು ಹೇಳುವ ಮೂಲಕ ಬಿಳಿಗಿರಂಗನಾಥ ಸ್ವಾಮಿಯ ಜೀವನವನ್ನು ರಸವತ್ತಾಗಿ ವಿವರಿಸಿದರು. ಸೋಲಿಗ ಸುಂದರಿ ಕುಸುಮಾಲೆಯನ್ನು ರಂಗನಾಥ ವಿವಾಹವಾದ ಹಾಗೂ ಆಕೆಯ ಪ್ರೀತಿಗಾಗಿ ಭಗವಂತನ ವಿವಿಧ ಲೀಲೆಗಳ ಮಹತ್ವ ಸಾರುವ ಪದ್ಯವನ್ನು ಹಾಡುವ ಮೂಲಕ ವಿವರಿಸಿ ಜನಪದ ಸಾಹಿತ್ಯದ ಚಿಂತನೆಯನ್ನು ವಿವರಿಸಿದರು. ಜಾಗಟೆ ಮತ್ತು ಶಂಕವನ್ನುಊದುವ ಮೂಲಕ ಕಾರ್ಯಕ್ರಮವನ್ನು ರವಿಚಂದ್ರಪ್ರಸಾದ್ ಉದ್ಘಾಟಿಸಿ ದರು.

ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಧರ್ಮದ ತಳಹದಿಯನ್ನು ಉಳಿಸಿ ಬೆಳೆಸೋಣ. ಕನ್ನಡ ಸಾಹಿತ್ಯ ಪರಿಷತ್ತು ಮೊಟ್ಟಮೊದಲ ಬಾರಿಗೆ ಬೆಳಗೆರೆ ರಂಗ ಹಾಗೂ ಜನಪದ ಸಾಹಿತ್ಯ ಕುರಿತು ವಿಚಾರಧಾರೆಯನ್ನು ಮಂಡಿಸಲು ಅವಕಾಶ ಮಾಡಿರುವುದು ಉತ್ತಮವಾದ ಕಾರ್ಯವಾಗಿದೆ. ಸಾಹಿತ್ಯ ಮತ್ತು ಜನಪದದ ಮೌಲ್ಯಗಳನ್ನು ತಿಳಿಯುವುದು ಬಹಳ ಮುಖ್ಯವಾದದ್ದು. ಪ್ರಾಕೃತಿಕವಾಗಿ ಎಷ್ಟು ಸೌಂದರ್ಯವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಬಿಳಿಗಿರಿರಂಗ ಕಾವ್ಯ ದೇಶವಿದೇಶಗಳಲ್ಲಿ ಪ್ರಚಲಿತವಾ ಗಿದೆ. ಟಿಪ್ಪು ಸುಲ್ತಾನ್ ದಾಳಿಯಿಂದ ಬೆಟ್ಟವನ್ನು ಉಳಿಸಿದ ಕೀರ್ತಿ ದಿವಾನ್ ಪೂರ್ಣಯ್ಯ ನವರಿಗೆ ಸಲ್ಲುತ್ತದೆ ಎಂದರು.
ಬಿಳಿಗಿರಂಗನ ಹಾಡುಗಳ ಗೀತ ಗಾಯನ ಮನಸ್ಸನ್ನು ಸಂತೋಷಪಡಿಸಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಾಪುರುಷೋತ್ತಮ್ ಮೂರು ವರ್ಷಗಳ ಕಾಲ ಬಿಳಿಗಿರಿರಂಗನ ಬೆಟ್ಟದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿತ್ತು ಅದು ನಮ್ಮ ಪುಣ್ಯ. ಬಿಳಿಗಿರಿ ರಂಗನ ಜಾತ್ರೆಯ ಸಂದರ್ಭದಲ್ಲಿ ಅದರ ಪೂರ್ಣ ಇತಿಹಾಸ ಸಂಸ್ಕೃತಿ ಮತ್ತು ಜನಪದ ವಿಚಾರಧಾರೆಗಳನ್ನು ತಿಳಿಯುವ ಕಾರ್ಯ ಆಗಿರುವುದು ಬಹಳ ಸಂತೋಷವೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ,ಬಿಕೆ ಆರಾಧ್ಯ, ರಾಜಗೋಪಾಲ್, ಮಂಜುನಾಥ್ ಸರಸ್ವತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *