- ಬಿಎಲ್ ಓ, ಎಸ್ ಐ ಆರ್ ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸಲು ಎ.ನಾಗಮಣಿ ಆಗ್ರಹ
ಚಾಮರಾಜನಗರ : ಸ್ಕೀಮ್ ನೌಕರರ ಕರಾಳ ದಿನಾಚರಣೆ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿ ನೌಕರರು, ಬಿಸಿಯೂಟದ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ, ಬಿಸಿಯೂಟದ ಅಧ್ಯಕ್ಷೆ ನಾಗಸುಂದ್ರಮ್ಮ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತದ ಮುಂಭಾಗಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಮಾತನಾಡಿ, ರಾಜ್ಯ ಸರ್ಕಾರ ಚುನಾವಣೆ ಭರವಸೆಯಂತೆ 2026-ಮಾರ್ಚ್ 23-24ರ ಸಭೆಯ ಚರ್ಚೆಯಂತೆ 15000 ಕಾರ್ಯಕರ್ತೆ 10,000 ಸಹಾಯಕಿಗೆ ಜಾರಿ ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್ ಕೆಜಿ, ಯುಕೆಜಿ ವಿಸ್ತರಣೆ ಆಗಬೇಕು.2026 ಮಾರ್ಚ್ -24 ರ ಸಭೆಯ ತೀರ್ಮಾನದಂತೆ 10.000 ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಪ್ರಾರಂಭಿಸಲು ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
3-6 ವರ್ಷದ ಮಕ್ಕಳಿಗೆ ಆರಂಭಿಕ ಬಾಲ್ಯ ಆರೈಕೆ, ಶಿಕ್ಷಣ ಮತ್ತು ಅಭಿವೃದ್ಧಿ ಹಕ್ಕನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು. 2011ರಿಂದ ನಿವೃತ್ತ ಆದವರಿಗೆ ಗ್ರಾಚ್ಯುಟಿ ಪಾವತಿಸಬೇಕು. 3-6 ವರ್ಷದ ಮಕ್ಕಳಿಗೆ ಸಮವಸ್ತ್ರ ಪುಸ್ತಕಗಳು, ಆಟಿಕೆಗಳನ್ನು ಒದಗಿಸಬೇಕು.
3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲಾ ಅಂಗನವಾಡಿಗಳನ್ನು ಅಂಗನವಾಡಿ – ಕಮ್ – ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.
ಬಿಎಲ್ ಓ, ಎಸ್ ಐ ಆರ್ ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸಬೇಕು. ಅಂಗನವಾಡಿ ನೌಕರರನ್ನು ಬಿಎಲ್‌ಓ ಕೆಲಸದಿಂದ ಸಂಪೂರ್ಣ ಕೈಬಿಡಬೇಕು. 50 ವರ್ಷ ಮೇಲಟವರನ್ನು. ಸಹಾಯಕಿ ಇಲ್ಲದಿದ್ದಾರೆ. ಎಲ್ ಕೆಜಿ, ಯುಕೆಜಿಗೆ ಆಯ್ಕೆಯಾದ. ತೀವ್ರ ಖಾಯಿಲೆ ಇರುವವರನ್ನು ಬಿಎಲ್ ಓ ಯಿಂದ ಬಿಡುಗಡೆ ಮಾಡಬೇಕು ಇಲಾಖೇತರ ಯಾವುದೇ ಕೆಲಸಗಳನ್ನು ನೀಡಬಾರದು.’ಪೋಷಣ್ ಟ್ರ್ಯಾಕರ್’ ಹೆಸರಿನಲ್ಲಿ ಕಿರುಕುಳ ನಿಲ್ಲಿಸಬೇಕು. ಮೊಬೈಲ್, ಡೇಟಾ ಹಾಗೂ ನಿರ್ವಹಣಾ ವೆಚ್ಚಗಳನ್ನು ಮರುಪಾವತಿಸಬೇಕು ಎಂದು ಆಗ್ರಹಿಸಿದರು.
ಡಿಜಿಟಲೀಕರಣವನ್ನು ಮೇಲ್ವಿಚಾರಣೆ ಅಥವಾ ಕಿರುಕುಳದ ಸಾಧನವಾಗಿ ಬಳಸಬಾರದು. ಡಿಜಿಟಲ್ ಕೆಲಸಕ್ಕಾಗಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‌ಗಳು ಮತ್ತು ಡೇಟಾ ಪ್ಯಾಕ್‌ಗಳನ್ನು ಒದಗಿಸಬೇಕು.
FRS ಮತ್ತು E-KYC ಕಡ್ಡಾಯ ಎನ್ನುವುದನ್ನು ಹಿಂಪಡೆಯಬೇಕು. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಮೂಲಸೌಕರ್ಯ, ಗ್ಯಾಸ್ ಸಂಪರ್ಕ, ಅಡುಗೆ ಆಧುನಿಕ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಸಲಕರಣೆಗಳು ಹಾಗೂ ಕಾರ್ಯನಿರ್ವಹಿಸುವ ಕೇಂದ್ರಗಳ ಬಾಡಿಗೆಯನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೆಚ್ಚಿಸಬೇಕು. ಮಹಾನಗರಗಳಲ್ಲಿ ಕನಿಷ್ಠ 15,000, ನಗರ ಪ್ರದೇಶಗಳಲ್ಲಿ 10,000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 15.000 ಬಾಡಿಗೆ ನೀಡಬೇಕು.ಉತ್ತಮ ಗುಣಮಟ್ಟದ ಸ್ಥಳೀಯ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಒದಗಿಸಬೇಕು. ವೈದ್ಯಕೀಯ ಪರೀಕ್ಷೆಗೊಳಪಡದ ‘ಫೋರ್ಟಿಫೈಡ್’ ಆಹಾರ ಸರಬರಾಜು ಮಾಡಬಾರದು. ತಾಜಾ ಸ್ಥಳೀಯ ಆಹಾರವನ್ನು ಒದಗಿಸಬೇಕು. ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅಧಿಕೃತ ಸಭೆಗಳಿಗೆ ಹಾಜರಾಗುವಾಗ TA/DA ಯನ್ನು ಸರ್ಕಾರಿ ನೌಕರರ ಡಿ ಗುಂಪಿನವರಿಗೆ ಕೊಡುವ ಮೊತ್ತವನ್ನು ಪಾವತಿಸಬೇಕು. ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಖಾಯಂಗೊಳಿಸಬೇಕು ಖಾಯಂಗೊಳಿಸುವವರೆಗೆ 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಖಜಾಂಚಿ ಭಾಗ್ಯಮ್ಮ, ಚಾಮರಾಜನಗರ ತಾಲೂಕು ಕಾರ್ಯದರ್ಶಿ ಶಾಹೇದಬಾನು, ಖಜಾಂಚಿ ಗುರುಮಲ್ಲಮ್ಮ,
,ಗುಂಡ್ಲುಪೇಟೆ ತಾಲೂಕು ಅಧ್ಯಕ್ಷೆ ಗುರುಲಿಂಗಮ್ಮ, ಕಾರ್ಯದರ್ಶಿ ದೇವಮ್ಮ, ಖಜಾಂಚಿ ಸುಮಿತ್ರ, ಯಳಂದೂರು ತಾಲೂಕು ಅಧ್ಯಕ್ಷೆ ಮೀನಾಕ್ಷಿ, ಕಾರ್ಯದರ್ಶಿ ಭಾಗ್ಯ, ಸಂತೇಮರಹಳ್ಳಿ ಅಧ್ಯಕ್ಷೆ ಪಾರ್ವತಮ್ಮ, ಖಜಾಂಚಿ ಜಯಮಾಲ, ಕೊಳ್ಳೇಗಾಲ ಅಧ್ಯಕ್ಷೆ ಶಾಂತಮ್ಮ ಬಿಸಿಯೂಟ ಅಧ್ಯಕ್ಷೆ ನಾಗಸುಂದ್ರಮ್ಮ, ಕಾರ್ಯದರ್ಶಿ ನಾಗಮ್ಮ, ಉಪಾಧ್ಯಕ್ಷೆ ಗೌರಮ್ಮ ಕಾರ್ಯಕರ್ತೆಯರು ಭಾಗವಹಿಸಿದ್ದರು.