ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ ಅವರ ತಾಯಿ ರಂಗಮ್ಮ(75) ನಿಧನರಾದರು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ರಂಗಮ್ಮ ಅವರು ಶುಕ್ರವಾರ ತಡರಾತ್ರಿ ಚಾಮರಾಜನಗರದ ಅಂಚೆ ಕಚೇರಿ ಹಿಂಭಾಗದ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ ಸೇರಿದಂತೆ ಮತ್ತೊಬ್ಬ ಮಗ ಹಾಗೂ ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಶನಿವಾರ ನಗರದ ಸಂತೆಮರಹಳ್ಳಿ ಸರ್ಕಲ್ ಸಮೀಪದ ಉಪ್ಪಾರರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.