ಜು.12 ರಂದು ಸಿದ್ದನಹುಂಡಿ ಗ್ರಾಮದಲ್ಲಿ ಶ್ರೀವೈ.ರಾಮಕೃಷ್ಣ ಬಡಾವಣೆ ಉದ್ಘಾಟನೆ : ವಕೀಲ ಬೂದಿತಿಟ್ಟುರಾಜೇಂದ್ರ

  • ಚಾಮರಾಜನಗರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ

ಚಾಮರಾಜನಗರ: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಸಲೆ ಹೋಬಳಿಯ ಸಿದ್ದನಹುಂಡಿ ಗ್ರಾಮದಲ್ಲಿ ಜು.12 ರಂದು ಶ್ರೀವೈ.ರಾಮಕೃಷ್ಣ ಬಡಾವಣೆ ಹಾಗೂ ಮಾರ್ಗಗಳ ಫಲಕ ಉದ್ಘಾಟನೆಯಾಗಲಿದೆ ಎಂದು
ಒಳ ಮೀಸಲಾತಿ ಹೋರಾಟ ಮತ್ತು ಜಾಗೃತಿ ಸಮಿತಿ ಕಾನೂನು ಸಲಹೆಗಾರ ಮತ್ತು ವಕೀಲ
ವಕೀಲ ಬೂದಿತಿಟ್ಟು ರಾಜೇಂದ್ರ ಹೇಳಿದರು.
   ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ  ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟನೆ ಮಾಡಲಿದ್ದು ಶಾಸಕ ಎಚ್‌.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ಸುನೀಲ್ ಬೋಸ್, ಮಾಜಿ ಕೇಂದ್ರ ಸಚಿವ ಎ.ನಾರಾಯ ಣಸ್ವಾಮಿ, ಮಾಜಿ ಸಚಿವರಾದ ಎಚ್.ಆಂಜನೇಯ, ಎಂ.ಶಿವಣ್ಣ, ಮಾಜಿ ಎಂ ಪಿ ಬಿ.ಎನ್.ಚಂದ್ರಪ್ಪ, ಎಂಎಲ್‌ಸಿಗಳಾದ ಡಾ.ತಿಮ್ಮಯ್ಯ, ಸುದಾಮದಾಸ್, ಮಾಜಿ ಎಂಎಲ್‌ಸಿ ಧರ್ಮಸೇನಾ, ಲೋಕಸೇವಾ ಆಯೋಗದ ಸದಸ್ಯ ಎಚ್.ಗೋವಿಂದಯ್ಯ,  ಜಮೀನು ದಾನಿ
ವೈ.ರಾಮಕೃಷ್ಣ ಅವರ ಪುತ್ರ ಆರ್.ಲೋಕೇಶ್ ಭಾಗವಹಿಸಲಿದ್ದಾರೆ ಎಂದರು.
ವೈ.ರಾಮಕೃಷ್ಣ ಅವರು 6 ಬಾರಿ ಶಾಸಕರಾಗಿ, 4 ಬಾರಿ ಸಚಿವರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇವರು ಸಿದ್ದನಹುಂಡಿಯಲ್ಲಿ 10 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದು ಇದನ್ನು ನಿರಾಶ್ರಿತರಿಗೆ ಉಚಿತವಾಗಿ ನೀಡಿದ್ದರು. ಪ್ರಸ್ತುತ ಈ ಜಾಗದಲ್ಲಿ 230-250 ಕುಟುಂಬಗಳು ವಾಸ ಮಾಡುತ್ತಿವೆ ಎಂದು ತಿಳಿಸಿದರು.ವೈ.ರಾಮಕೃಷ್ಣ ಅವರ ನೆನಪಿನಾರ್ಥವಾಗಿ ವೈ.ರಾಮಕೃಷ್ಣ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಬಡಾವಣೆಯಲ್ಲಿ 5 ಮಾರ್ಗಗಳ ಹೆಸರು ಇಡಲಾಗಿದೆ. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ  ಚಾಮರಾಜನಗರ ಜಿಲ್ಲೆಯಿಂದ
ಹೆಚ್ಚಿನ ಸಂಖ್ಯೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘ- ಸಂಸ್ಥೆಗಳ ಹಾಗೂ ಡಾ ಬಾಬುಜಗಜೀವನರಾಂ ಸಂಘ- ಸಂಸ್ಥೆಗಳ ಪ್ರಮುಖರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ
ದಸಂಸ ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ, ಮುಖಂಡರಾದ ಪಿ.ಶಿವಮಲ್ಲು, ಮಾದಪ್ಪ, ರಾಜು ಹಾಜರಿದ್ದರು.

Leave a Reply

Your email address will not be published. Required fields are marked *