ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನೋಡಲ್ ಅಧಿಕಾರಿಗಳ ನೇಮಕ

ಚಾಮರಾಜನಗರ: ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹಾಗೂ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಉಸ್ತುವಾರಿಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಗ್ರಾಮವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.  

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಸಚಿವರು ಜಲ್ ಜೀವನ್ ಮಿಷನ್ ಯೋಜನೆಯನ್ನು ಅನುμÁ್ಠನಗೊಳಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ಕಂಡುಬರುವ ಗ್ರಾಮಗಳನ್ನು ಗುರುತಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕುಡಿಯುವ ನೀರನ್ನು ಬಗೆಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದ್ದರು. 

ಸಚಿವರ ಸೂಚನೆಯಂತೆ ಜಲ್ ಜೀವನ್ ಮಿಷನ್ ಯೋಜನೆಯನ್ನು ಅನುμÁ್ಠನಗೊಳಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.

ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿಯ ಹೊಸದೊಡ್ಡಿ, ಎಂ.ಜಿ.ದೊಡ್ಡಿ ಗ್ರಾಮಗಳಿಗೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು, ದಿನ್ನಹಳ್ಳಿ ಗ್ರಾಮ ಪಂಚಾಯಿತಿಯ ಗೊಲ್ಲರದಿಂಬ ಗ್ರಾಮ ಹಾಗೂ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿಯ ಮಂಚಾಪುರ ಗ್ರಾಮಕ್ಕೆ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕರು, ಮೀಣ್ಯಂ ಗ್ರಾಮ ಪಂಚಾಯಿತಿಯ ಕಳಕೋಬೆದೊಡ್ಡಿ, ಸಣ್ಣಪೊನ್ನೆಗೌಡನದೊಡ್ಡಿ ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ.ಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಹೂಗ್ಯಂ ಗ್ರಾಮ ಪಂಚಾಯಿತಿಯ ಜಲ್ಲಿಪಾಳ್ಯ, ಹೂಗ್ಯಂ ಹೊಸ ಸೈಟ್, ಕೊಟ್ಟನಮೂಲೆ ಗ್ರಾಮಗಳಿಗೆ ಕೊಳ್ಳೇಗಾಲ ತಾಲೂಕಿನ ಚೆಸ್ಕಾಂ ನ ಕಾರ್ಯಪಾಲಕ ಅಭಿಯಂತರರು, ಕೂಡ್ಲೂರು, ನೆಲ್ಲೂರು ಗ್ರಾಮಗಳಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ಬಿದರಳ್ಳಿ (ಕೀನಪ್ಪನದೊಡ್ಡಿ), ಕೊಂಬೈನಗರ ಗ್ರಾಮಗಳಿಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು, ಶಿಲುಬೆನಗರ, ಹುಣಸೇಮರದದೊಡ್ಡಿ ಗ್ರಾಮಗಳಿಗೆ ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. 

ಏರಿಕಾಡು, ದೊರೆಸ್ವಾಮಿಮೇಡು, ಸಂದನಪಾಳ್ಯ ಗ್ರಾಮಗಳಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಕರಟ್ಟುಕೋಯಿಲ್, ಸುಳ್ಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಚ್ಚಪ್ಪನದೊಡ್ಡಿ ಗ್ರಾಮಗಳಿಗೆ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು, ಮಣಗಳ್ಳಿ ಗ್ರಾಮ ಪಂಚಾಯಿತಿಯ ಬೈರನತ್ತ, ಎಲ್ಲೇಮಾಳ, ಚಂಗವಾಡಿ ಗ್ರಾಮಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಎಲ್ಲೇಮಾಳ ಗ್ರಾಮ ಪಂಚಾಯಿತಿಯ ಬೂದುಗುಪ್ಪೆ, ಎಂ.ಟಿ.ದೊಡ್ಡಿ, ಬಿ.ಎಂ.ಹಳ್ಳಿ ಗ್ರಾಮಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು, ಕೆಂಚಯ್ಯನದೊಡ್ಡಿ, ಚಿಗತಾಪುರ ಗ್ರಾಮಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು, ಪೆÇನ್ನಾಚಿ ಗ್ರಾಮ ಪಂಚಾಯಿತಿಯ ಆಸೂರು ಗ್ರಾಮಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ದೊಡ್ಡಲಾತ್ತೂರು ಗ್ರಾಮ ಪಂಚಾಯಿತಿಯ ದೊಡ್ಡಲಾತ್ತೂರು, ಕೆಂಪಯ್ಯನಹಟ್ಟಿ ಗ್ರಾಮಗಳಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. 

ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿಯ ಗೊರಸಾಣೆ, ಕೊಕ್ಕಬೋರೆ, ತೋಕೆರೆ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಕುರಟ್ಟಿಹೊಸೂರು ಗ್ರಾಮ ಪಂಚಾಯಿತಿಯ ದೇವೇಂದ್ರಕಾಳಶೆಟ್ಟಿದೊಡ್ಡಿ, ಎಲ್.ಪಿ.ಎಸ್.ಸಿ. ವಿಲೇಜ್, ಎಲ್.ಪಿ.ಎಸ್.ಡಿ.ವಿಲೇಜ್ ಗ್ರಾಮಗಳಿಗೆ ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಹುತ್ತೂರು ಗ್ರಾಮ ಪಂಚಾಯಿತಿಯ ಸೊಪ್ಪಿನಗುಡ್ಡೆ, ಹುತ್ತೂರು, ಹುತ್ತೂರು ಗ್ರಾಮಗಳಿಗೆ ಜಿಲ್ಲಾ ಆಯುμï ಅಧಿಕಾರಿ, ಕರಿಯಪ್ಪನದೊಡ್ಡಿ, ಗೂಳ್ಯದಬಯಲು ಗ್ರಾಮಗಳಿಗೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು, ಮಂದೆಬಯಲು, ಮಸಿಯಾಬೋವಿದೊಡ್ಡಿ ಗ್ರಾಮಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಅಜ್ಜೀಪುರ ಗ್ರಾಮ ಪಂಚಾಯಿತಿಯ ದೊಮ್ಮನಗದ್ದೆ, ವಡ್ಡರದೊಡ್ಡಿ ಗ್ರಾಮಗಳಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ರಾಮಾಪುರ ಗ್ರಾಮ ಪಂಚಾಯಿತಿಯ ಮಾಮರದೊಡ್ಡಿ ಗ್ರಾಮಕ್ಕೆ ರೇμÉ್ಮ ಇಲಾಖೆಯ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. 

ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮಪಂಚಾಯಿತಿಯ ಎತ್ತೇಗೌಡನದೊಡ್ಡಿ, ಕೊತ್ತಲವಾಡಿ ಗ್ರಾಮಪಂಚಾಯಿತಿಯ ಉಗನೇದಹುಂಡಿ ಗ್ರಾಮಗಳಿಗೆ ಡಿ. ದೇವರಾಜು ಅರಸ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಯಳಂದೂರು ತಾಲೂಕಿನ ಅಗರ ಗ್ರಾಮಪಂಚಾಯಿತಿಯ ಅಗರ ಗ್ರಾಮಕ್ಕೆ ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

Leave a Reply

Your email address will not be published. Required fields are marked *