ಬಸವ, ಅಂಬೇಡ್ಕರ್, ಬಾಬೂಜಿ ಅವರ ಆದರ್ಶಗಳು ಸಾರ್ಥಕ ಬದುಕಿಗೆ ಆಧಾರಸ್ತಂಭ: ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಸಮಾನತೆಗಾಗಿ ಶ್ರಮಿಸಿದ ಜಗಜ್ಯೋತಿ ಬಸವೇಶ್ವರರು, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕ‌ರವರು ಹಾಗೂ ಹಸಿರುಕ್ರಾಂತಿಯ ಹರಿಕಾರ ಡಾ.ಬಾಬುಜಗಜೀವನರಾಂ ಅವರು ತತ್ವಗಳು, ಮೌಲ್ಯಗಳು ಸಾರ್ಥಕ ಬದುಕಿಗೆ ಆಧಾರಸ್ತಂಭ’ಗಳಾಗಿವೆ ಎಂದು ಜಿಲ್ಲಾಧಿಕಾರಿ. ಶ್ರೀರೂಪ ಹೇಳಿದರು.
ನಗರದ ರೋಟರಿ ಭವನದಲ್ಲಿ ‌ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕ ಹಾಗೂ ರೋಟರಿ ಸಂಸ್ಥೆಯ ಸಹಕಾರದಲ್ಲಿ ನಡೆದ  ಜಗಜ್ಯೋತಿ ಬಸವೇಶ್ವರರು, ಡಾ.ಬಿ.ಆರ್.ಅಂಬೇಡ್ಕರ್ ರವರ ಹಾಗೂ ಮಾಜಿ.ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
  ಬಸವೇಶ್ವರರು, ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬುಜಗಜೀವನರಾಂ ಮೂವರು ಮಹಾನ್ ಮಾನವಾತಾವಾದಿಗಳಾಗಿದ್ದು, ಸಮಾಜಕ್ಕೆ, ದೇಶಕ್ಕೆ ತಮ್ಮದೆಯಾದ ಕೊಡುಗೆಗಳನ್ನು ನೀಡಿದ್ದಾರೆ. ಬಸವೇಶ್ವರರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸರ್ವರಿಗೂ ಅವಕಾಶ ಕಲ್ಪಿಸಿಕೊಡುವ ಮೂಲಕ ಸಮಾನತೆಗಾಗಿ ಶ್ರಮಿಸಿದರು. ಅದೇ ರೀತಿಯಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಾಲ್ಯದಲ್ಲಿ ತುಂಬಾ ಸಂಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿ ದೇಶ, ವಿದೇಶಗಳಲ್ಲಿ ವ್ಯಾಸಂಗ ಮಾಡಿ. ಅಪಾರ ವಿದ್ವತ್‌ ಗಳಸಿ ಸಂವಿಧಾನ ಬರೆದು ದೇಶದಲ್ಲಿ ವಾಸ ಮಾಡುವ ಪ್ರತಿ ನಾಗರಿಕನೂ ಸಮಾನತೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
  ಭಾರತ ಮಾಜಿ ಉಪಪ್ರಧಾನಿ, ಹಸಿರುಕ್ರಾಂತಿಯ ಹರಿಕಾರರಾದ ಡಾ.ಬಾಬುಜಗಜೀವನರಾಂ ಅವರು ಶೋಷಿತರ ಪರಧ್ವನಿಯಾಗಿ ಭಾರತ ಸರ್ಕಾರದಲ್ಲಿ ಅತಿ ಸುದೀರ್ಘ ಕಾಲ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ ಎಂದರು. ಈ ಮೂವರು ಮಹನೀಯರ ತತ್ತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
  ಡಿವೈಎಸ್ ಪಿ ಸ್ನೇಹರಾಜ್ ಮಾತನಾಡಿ ಚಿಕ್ಕಚಿಕ್ಕ ವಿಷಯಗಳಿಗೆ ಪ್ರಾಣ ಕಳೆದುಕೊಳ್ಳುವುದು, ಮನೆಬಿಟ್ಟು ಹೋಗುವುದು, ಪೋಷಕರಿಗೆ ಬ್ಲಾಕ್‌ಮೇಲ್ ಮಾಡುವಂತದ್ದು, ಚಿಕ್ಕಮಕ್ಕಳಲ್ಲಿ ತುಂಬಾ ಕಾಣಿಸುತ್ತದೆ. ಅದನ್ನು ಬಿಟ್ಟು ಮಕ್ಕಳೇ ಎಲ್ಲರೂ ಮುಂದಕ್ಕೆ ಬರಬೇಕಾದರೆ
ವಿದ್ಯಾರ್ಥಿಗಳ ಜೀವನದಲ್ಲಿ ಎಂತಹವೇ ಕಷ್ಣವೇ ಬರಲಿ ಅದನ್ನು ಮೆಟ್ಟಿನಿಲ್ಲುವ ಧೈರ್ಯವನ್ನು ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಾಮುಲ್ ವ್ಯವಸ್ಥಾಪಕ ನಿರ್ದೇಶಕ  ಕೆ.ರಾಜಕುಮಾರ್ ಪುಷ್ಷಾರ್ಚನೆ ಮಾಡಿ ಮಾತನಾಡಿ,ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ತುಂಬಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆಗಾಗಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು ಮಹನೀಯರ ಸಂದೇಶಗಳನ್ನು ತಿಳಿದುಕೊಂಡು ಚೆನ್ನಾಗಿ ಓದುವ ಮೂಲಕ ನಿಮ್ಮ ಪೋಷಕರಿಗೆ ಒಳ್ಳೆಯ ಹೆಸರು ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದರು.
   ಕನ್ನಡ ಮಹಾಸಭಾದ ಚಾ.ರಂ.ಶ್ರೀನಿವಾಸಗೌಡ ಪ್ರಸ್ತಾವಿಕವಾಗಿ ಮಾತನಾಡಿ, ಅಖಿಲ ಕರ್ನಾಟಕ ಕನ್ನಡ ಮಹಾಸಭಾವು ಕನ್ನಡ ನಾಡು, ನುಡಿ,ಜಲ ಸಂರಕ್ಷಣೆಗಾಗಿ ಹೋರಾಟ ಮಾಡುವ ಜೊತೆಗೆ ರಾಷ್ಟ್ರನಾಯಕರು, ಮಹನೀಯರ ಜಯಂತಿಗಳು, ಪ್ರತಿಭಾ ಪುರಸ್ಕಾರಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗಿದೆ ಎಂದರು.
ಸನ್ಮಾನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಬಿ.ಎಸ್.ರಾಜು, ಮುಖ್ಯ ಶಿಕ್ಷಕ ಕೆ.ಎನ್.ಪ್ರಮೋದ್ ಚಂದನ್ , ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಗುರುಲಿಂಗಮ್ಮ, ಕರ್ನಾಟಕ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಚಾ.ಸಿ.ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
  ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಪರಶುರಾಮ ಎಂ.ಛಲವಾದಿ, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ವಕೀಲ ನಾಗಾರ್ಜುನ ಪೃಥ್ವಿ, ಮಹಾಸಭಾದ ಜಿಲ್ಲಾಧ್ಯಕ್ಷ ಲೋಕೇಶ್ ಹೊಮ್ಮ, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು,ನಿಜಧ್ವನಿಗೋವಿಂದರಾಜು, ಶ್ರೀಗಂಧ ಕನ್ನಡ ಯುವ ವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್ ಕಹಳೆ, ರಾಚಪ್ಪ, ಮುತ್ತಿಗೆ ಗೋವಿಂದರಾಜು, ಮಹೇಶ್ ಗೌಡ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *