ಕಡಬಮ್‌ ಎಂ.ರಮೇಶ್‌ ಅವರ `ಸಾರ್ಥಕ ಬದುಕು’ ಆತ್ಮಕಥನ ಬಿಡುಗಡೆಗೊಳಿಸಿದ ಸುತ್ತೂರು ಶ್ರೀ

  • ಮನೋರೋಗ ನಿರ್ಲಕ್ಷಿಸದೇ ಗುರುತಿಸಿ ಚಿಕಿತ್ಸೆ ಕೊಡಿಸಲು ಸಲಹೆ

ಮೈಸೂರು : ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಡಬಮ್‌ ಎಂ.ರಮೇಶ್‌ ಅವರ ಸಾರ್ಥಕ ಬದುಕು' ಆತ್ಮಕಥನವನ್ನು ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು. ಕಡಬಮ್ಸೌ ಸಮೂಹ ಸಂಸ್ಥೆ ವತಿಯಿಂದ ಮೈಸೂರಿನ ವಿಜಯನಗರದಲ್ಲಿರುವ ಜಗನ್ನಾಥ್‌ ಸೆಂಟರ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರಲ್‌ ಸಭಾಂಗಣದಲ್ಲಿ ಸುತ್ತೂರು ಶ್ರೀ ಸಾನ್ನಿಧ್ಯದಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಮಾಜಿ ಸಚಿವ ಎಸ್‌.ಎ. ರಾಮದಾಸ್‌, ಕೃತಿಯ ಕರ್ತೃ, ಕಡಬಮ್ಸೌ ಗ್ರೂಪ್‌ ಅಧ್ಯಕ್ಷ, ಕಡಬಮ್‌ ಎಂ.ರಮೇಶ್‌, ಪುತ್ರರಾದ ಕಡಬಮ್‌ ಸಂದೇಶ್‌, ಶ್ರೇಯಸ್‌ ಕಡಬಮ್ಸೌ, ಪುತ್ರಿಯರಾದ ನೇಹಾ, ದಿವ್ಯಾ ಕಡಬಮ್ಸೌ ಅವರನ್ನು ಒಳಗೊಂಡ ಗಣ್ಯರುಸಾರ್ಥಕ ಬದುಕು’ ಆತ್ಮಕಥನವನ್ನು ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದ್ದು ಸುತ್ತಲ ಜನತೆ ಇದನ್ನು ಗಮನಿಸಿ ಚಿಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ಮಾಡುತ್ತಿದ್ದರೆ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾದವರು ಚಿಕಿತ್ಸೆ ದೊರೆಯದೇ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ನಡೆಯುತ್ತಿವೆ ಎಂದು ವಿಷಾಸಿದರು.
ಭಾರತೀಯ ಸಂಸ್ಕೃತಿಯ ಹೆಗ್ಗುರುತು:
ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಕಡಬಮ್‌ ಎಂ. ರಮೇಶ್‌ ಅವರ ಉಪಕಾರವನ್ನು ಸ್ಮರಿಸಿದ್ದಾರೆ. ಸಾಕಿದ ತಂದೆ ತಾಯಿಗಳನ್ನೇ ದೂರವಿಡುವ ಇಂದಿನ ಸಮಾಜದಲ್ಲಿ ತಮಗೆ ಆಸರೆಯಾದ ವ್ಯಕ್ತಿಯನ್ನು ನೆನಪಿಸಿಕೊಳ್ಳುವುದು ಭಾರತೀಯ ಸಂಸ್ಕೃತಿಯ ದೊಡ್ಡ ಹೆಗ್ಗುರುತು ಎಂದರು.
ಮಾನಸಿಕ ಆರೋಗ್ಯಕ್ಕೆ ಒತ್ತು :
ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮಾತನಾಡಿ, ಮಾನಸಿಕ ಆರೋಗ್ಯ ದೇಶದಲ್ಲಿಯೇ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರವಾಗಿದೆ. ಪ್ರಾಚೀನ ಭಾರತದ ಸಂಸ್ಕೃತಿಯಲ್ಲಿ ಇದಕ್ಕೆ ಪರಿಹಾರವಿತ್ತು. ಆದರೆ ಕ್ರಮೇಣ ಅದರ ಬಳಕೆ ಕಡಿಮೆಯಾಗಿದೆ. ಇಂತಹ ಆರೋಗ್ಯ ಜ್ಞಾನವನ್ನು ಇಂದಿಗೂ ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಜಾಗೃತಿ ಅಗತ್ಯ :
ಮಾಜಿ ಶಾಸಕ ಎಸ್‌.ಎ. ರಾಮದಾಸ್‌ ಅವರು ಮಾತನಾಡಿ, ಮನೋರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತೂ ಅದರ ವಿರುದ್ಧ ಜಾಗೃತಿ ಮೂಡಿಸಿ ಮನೋರೋಗಗಳು ಬಾರದಂತೆ ಜಾಗೃತಿಹಿಸುವುದು ಮುಖ್ಯವಾಗಿದೆ. ಕಡಬಮ್ಸೌ ಸಂಸ್ಥೆ ಈ ಔಟ್‌ರೀಚ್‌ ಕಾರ್ಯಕ್ರಮವನ್ನು ಮೈಸೂರಿನಿಂದಲೇ ಆರಂಭಿಸಬೇಕೆಂದು ಮನವಿ ಮಾಡಿದರು.
ಮಾಜಿ ಮೇಯರ್‌ ಎಚ್‌.ಎನ್‌. ಶ್ರೀಕಂಠಯ್ಯ, ಕರೂರ್‌ ವೈಶ್ಯ ಬ್ಯಾಂಕ್‌ ಲಿಮಿಟೆಡ್‌ನ ನಿರ್ದೇಶಕ ಎಂ.ವಿ. ಶ್ರೀನಿವಾಸಮೂರ್ತಿ, ಬೆಳಗಾವಿಯ ರಿಟಾ ವಿಶೇಷ ಅತಿಥಿಗಳಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

Leave a Reply

Your email address will not be published. Required fields are marked *