ತಮಿಳುನಾಡಿಗೆ ಕಾವೇರಿ ಹರಿಸಿದರೆ ಕರ್ನಾಟಕ ಬಂದ್ : ಕ್ವಾಲಿಟಿ ನವೀನ್ ಎಚ್ಚರಿಕೆ

ಚಾಮರಾಜನಗರದ: ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ  ಆದೇಶಿಸಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕದ  ಕಾರ್ಯಕರ್ತರು ಹಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನ ದ ಮುಂಭಾಗದಲ್ಲಿ ತಾಲೂಕು ಅಧ್ಯಕ್ಷ ನವೀನ್ ಕ್ವಾಲಿಟಿ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ದ, ತಮಿಳುನಾಡು ಸರ್ಕಾರ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
  ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕದ ಅಧ್ಯಕ್ಷ ನವೀನ್ ಕ್ವಾಲಿಟಿ
  ಮಾತನಾಡಿ, ದೆಹಲಿಯಲ್ಲಿ ನಡೆದ  ಕಾವೇರಿ ನೀರು ನಿಯಂತ್ರಣ ಸಮಿತಿಯು ಜು. 29 ರಿಂದ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ದಿನಕ್ಕೆ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಿರುವುದನ್ನು ಖಂಡನೀಯ. ಕಾವೇರಿನ್ಯಾಯಾಧೀಕರಣ ಮಂಡಳಿ ಕರ್ನಾಟಕ ಪರವಾಗಿ ತೀರ್ಪು ನೀಡಿಲ್ಲ. ರಾಜ್ಯದಲ್ಲಿ ಬರಗಾಲ ಅವರಿಸಿ ಜನ,ಜಾನುವಾರುಗಳ ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ಸೃಷ್ಟಿಯಾಗಿದೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ಹರಿಸಬಾರದು. ಒಂದು ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ರಾಜ್ಯಾಧ್ಯಕ್ಷ ರಾದ ಪ್ರವೀಣ್ ಕುಮಾರ್ ಶೆಟ್ಟಿ ಕರ್ನಾಟಕ ಬಂದ್ ಮಾಡುವುದಾಗಿ ಕರೆ ನೀಡಿದ್ದಾರೆ. ಗಡಿ ಜಿಲ್ಲೆ ಚಾಮರಾಜನಗರದಿಂದ ಸಂಪೂರ್ಣ ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಕೃಷ್ಣನಾಯಕ, ಕಾರ್ಯಾಧ್ಯಕ್ಷ ಉಮ್ಮತ್ತೂರು ಚಂದ್ರು, ತಾಲೂಕು ಪ್ರಧಾನ ಕಾರ್ಯದರ್ಶಿ ಅರ್ಜುನ್, ಉಪಾಧ್ಯಕ್ಷರಾದ ಉಮೇಶ್, ರಾಮಸಮುದ್ರ ಬಾಬು, ಅವಿನಾಶ್,  ಟೌನ್ ಅಧ್ಯಕ್ಷ ಮಹೇಂದ್ರ ಉಪ್ಪಾರ್,  ಉಪಾಧ್ಯಕ್ಷ ಅಫ್ನನ್, ಸಂಘಟನಾ ಕಾರ್ಯದರ್ಶಿ ರಿಜ್ವಾನ್, ಉಪಾಧ್ಯಕ್ಷ ಮಹಮದ್ ಫೈರಾಜ್ ತಾಲ್ಲೂಕು ಗೌರವ ಅಧ್ಯಕ್ಷ ಪುರುಷೋತ್ತಮ್ , ಕೇಶವ್ ನಲ್ಲೂರ್, ನಟರಾಜು, ಬಸವಪುರ ಮಹಾದೇವಸ್ವಾಮಿ, ಕಾಡಳ್ಳಿ ಕುಮಾರ್ ,ಅಬ್ದುಲ್ ಮುಂನ್ಸಿಫ್, ಅಬ್ಬುಸರ್, ಪೃಥ್ವಿ, ಆಟೋ ಮನೋಜ್, ಮಧು, ದೊರೆ , ಆ್ಯಂಬುಲೆನ್ಸ್ ಚಂದ್ರು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *