ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರಮೋದಿಯವರ 76ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್, ಬಿಜೆಪಿ ಕಾರ್ಯಕರ್ತರ ವತಿಯಿಂದ ನಗರದಲ್ಲಿ ಪೌರಕಾರ್ಮಿಕ ಮಹಿಳೆಯನ್ನು ಸನ್ಮಾನಿಸಿ, ಸೀರೆ, ಸಿಹಿ ವಿತರಿಸಲಾಯಿತು.
ಇದಕ್ಕೂ ಮೊದಲು ನಗರದ ಮುದುಕುಮಾರಮ್ಮ ದೇವಸ್ಥಾನದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್ ಅವರ ನೇತೃತ್ವದಲ್ಲಿ ಮೋದಿಯವರ ಹೆಸರಿನಲ್ಲಿ ಆರ್ಚನೆ ಮಾಡಿಸಿ… ವಿಶೇಷಪೂಜೆ ಸಲ್ಲಿಸಲಾಯಿತು. ಪೂಜಾ ಕಾರ್ಯ ನೆರವೇರಿಸಿದ ಆಗಮಿಕ ಪ್ರದೀಪ್ ಕುಮಾರ್ ದೀಕ್ಷಿತ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನ್ಮದಿನದ ಅಂಗವಾಗಿ ಶಿವುವಿರಾಟ್ ಅವರು ಸಮಾಜಮುಖಿ ಚಿಂತನೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಣೆ ಮಾಡುತಿದ್ದಾರೆ. ಈ ಭೂಮಿಗೆ ಅನೇಕ ಮಹನೀಯರು ತಮ್ಮ ಕೊಡುಗೆ ನೀಡಿದ್ದಾರೆ. ಬಹಳ ವಿಶಿಷ್ಠ ವ್ಯಕ್ತಿತ್ವಯುಳ್ಳ ವ್ಯಕ್ತಿ ನರೇಂದ್ರಮೋದಿಯವರು, ಅವರು ದೇಶದ ಪ್ರಧಾನಿಗಳಾಗಿ ಅವರು ಆಯ್ಕೆಯಾದ ಮೇಲೆ ರಾಷ್ಟ್ರದ ಚಿಂತನೆಯಲ್ಲಿ ದೇಶ ಕಂಡಂತಹ ಅನೇಕ ಪ್ರಧಾನಿಗಳಲ್ಲಿ ನರೇಂದ್ರಮೋದಿಯವರು ಅಗ್ರಗಣ್ಯರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ನರೇಂದ್ರಮೋದಿಯವರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಇಂದು ದೇಶದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ನರೇಂದ್ರಮೋದಿಯವರು ಸೃಚ್ಚಭಾರತ್ ಮಿಷನ್ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನಳ ಸೌಲಭ್ಯ ಕಲ್ಪಿಸಿದರು. ಉಜ್ವಲ ಯೋಜನೆಯಡಿಯಲ್ಲಿ ಉಚಿತ ಅನಿಲ ಸಂಪರ್ಕ ಕಲ್ಪಿಸಿದರು. ಉತ್ತ ಮ ರಸ್ತೆಗಳ ನಿರ್ಮಾಣ, ದೊಡ್ಡದೊಡ್ಡ ಸೇತುವೆ ನಿರ್ಮಾಣ ಮಾಡಿದರು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅಲ್ಲದೆ ದೇಶದ ಪ್ರಗತಿಗಾಗಿ ಒತ್ತು ನೀಡಿದ್ದಾರೆ. ಎಂದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ. ಎಂ.ರಾಮಚಂದ್ರ ಮಾತನಾಡಿ, ನರೇಂದ್ರಮೋದಿಯವರ ಆಡಳಿತದ ಅವಧಿಯಲ್ಲಿ ದೇಶ ಸುಭದ್ರವಾಗಿದೆ. ಯಾವುದೇ ಆರ್ಥಿಕ ಸಮಸ್ಯೆ. ಇಲ್ಲದೆ ಭಾರತವನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯುವ ಕೆಲಸವನ್ನು ನರೇಂದ್ರಮೋದಿಯವರು ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಆಯೋಜಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್ ಮಾತನಾಡಿ, ಪ್ರಧಾನಿಮಂತ್ರಿ ನರೇಂದ್ರಮೋದಿ ಅವರು ಪೌರಕಾರ್ಮಿಕರ ಪಾದಗಳನ್ನು ತೊಳೆದು, ಒರೆಸಿ ಗೌರವಿಸಿದರು. ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಸೇರಿ ನಗರದ ಮುದುಕುಮಾರಮ್ಮ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ, ಪೌರಕಾರ್ಮಿಕರ ಮಹಿಳೆಯರನ್ನು ಸನ್ಮಾನಿಸಿ, ಸೀರೆ ವಿತರಣೆ ಮಾಡುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿ ಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಯಸುಂದರ್, ಡಾ.ಎ.ಆರ್.ಬಾಬು,
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಆರ್.ಸುಂದರ್, ನಾರಾಯಣಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದದ್ರಪ್ಪ, ಜಿಲ್ಲಾ ವಕ್ತಾರ ಮನೋಜ್‌ಪಟೇಲ್, ಮೂಡ್ಲು ಪುರ ನಂದೀಶ್, ಶ್ರೀನಿವಾಸಗೌಡ, ನಗರಸಭಾ ಮಾಜಿ ಸದಸ್ಯರಾದ ರಾಜೇಶ್, ಶಿವಣ್ಣ, ಜಿಲ್ಲಾ ಕಾರ್ಯದರ್ಶಿನಟರಾಜು, ಆನಂದ್ ಭಗೀರಥ, ರವಿ, ನಾಗೇಂದ್ರ, ಆಟೋ ಮಹೇಶ್, ಕೃಷ್ಣ, ಚಂದ್ರಶೇಖರ್, ಪ್ರದೀಪ್, ರಾಕೇಶ್, ಮಣಿಕಂಠ, ಮನು, ಅರುಣ್, ಪ್ರಸನ್ನ, ಭಾನು, ಟಗರುಶಿವ, ಕುಮಾರ್, ಕಿಲಗೆರೆಶಿವು, ರಾಮಸಮುದ್ರಶಿವು, ವೆಂಕಟೇಶ್, ಪುರುಷೋತ್ತಮ . ಫೃಥ್ವಿ, ಕಿರಣ ಇತರರು ಹಾಜರಿದ್ದರು.
