ವಿಶ್ವಕರ್ಮರು ವಿಶ್ವದ ಮೊದಲ ಇಂಜಿನಿಯರ್: ಮಂಜುನಾಥಾಚಾರ್

  • ಚಂದಕವಾಡಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಚಾಮರಾಜನಗರ : ಭಗವಾನ್ ವಿಶ್ವಕರ್ಮರ ತತ್ವ, ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಮಂಜುನಾಥಾಚಾರ್ ಹೇಳಿದರು.
   ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಚಂದಕವಾಡಿ ಹೋಬಳಿ ಘಟಕದ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರು ಕೇವಲ ಒಬ್ಬ ದೇವಶಿಲ್ಪಿಯಲ್ಲ. ಅವರು ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಿಷ್ಠೆ ಪ್ರತೀಕವಾಗಿದೆ. ಅವರು ವಿಶ್ವದ ಮೊದಲ ಇಂಜಿನಿಯರ್ ಎಂದರು.
   ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರು, ವಿಶ್ವಕರ್ಮ ಕಣ್ಮಣಿ, ಹುಟ್ಟು ಹೋರಾಟಗಾರರು, ಸಂಘಟನಾ ಚಕ್ರವರ್ತಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಧೀಮಂತ ನಾಯಕರಾದ  ಕೆ.ಪಿ ನಂಜುಂಡಿ ವಿಶ್ವಕರ್ಮರು ತಂದುಕೊಟ್ಟಂತಹ ಕೊಡುಗೆಗಳು ವಿಶ್ವಕರ್ಮ ಜಯಂತೋತ್ಸವ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ, ST ಮೀಸಲಾತಿ ಹೋರಾಟ ಮುಂತಾದವುಗಳು. ಸುಮಾರು 25 ವರ್ಷಗಳ ನಿರಂತರ ಹೋರಾಟವನ್ನು ಮಾಡುತ್ತಾ ರಾಜ್ಯದಲ್ಲಿರುವ ಪ್ರತಿಯೊಂದು ಹಳ್ಳಿ, ಹೋಬಳಿ, ಜಿಲ್ಲೆ, ನಗರಗಳು, ತಾಲೂಕುಗಳಲ್ಲಿರುವ ವಿಶ್ವಕರ್ಮರನ್ನು ಒಗೂಡಿಸಿ ಸಂಘಟನೆಗಳನ್ನು ಮಾಡಿ, ಪಾದಯಾತ್ರೆ, ಜನಜಾಗೃತಿ ಸಮಾವೇಶ ಮಾಡಿ ತಂದುಕೊಟ್ಟಂತಹ ಕೊಡುಗೆಗಳು ಇದಾಗಿದೆ ಎಂದರು.
ಗೌಡಿಕೆ ಶಿವನಾಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಸಿದ್ದರಾಜು ಗ್ರಾ.ಪಂ.ಮಾಜಿ ಅಧ್ಯಕ್ಷ ಸಿದ್ದಪ್ಪಾಜಿ, ಚೆಸ್ಕಾಂ ಜೆಇ ದೊರೆಸ್ವಾಮಿ, ದೀಪು, ಗ್ರಾ.ಪಂ.ಮಾಜಿ ಸದಸ್ಯ ಖಾದರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜು, ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ, ತಾಲೂಕು ಯುವ ಘಟಕದ ಅಧ್ಯಕ್ಷ ವೈ.ಬಿ.ಸ್ವಾಮಿ, ನಾಗವಳ್ಳಿ ಕುಮಾರ್,
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಚಂದಕವಾಡಿ ಹೋಬಳಿ ಘಟಕದ ಪದಾಧಿಕಾರಿಗಳು,ಸರಗೂರು,ಕಾಗಲವಾಡಿ, ಚಂದಕವಾಡಿ ಗ್ರಾಮದ ವಿಶ್ವಕರ್ಮ ಸಮುದಾಯದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *