ಚಾಮರಾಜನಗರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಚಾಮರಾಜನಗರ: ನಗರದ ಕೊಳದಬೀದಿಯಲ್ಲಿನ ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿಯನ್ನು ಮಂಟೇಸ್ವಾಮಿ ಸೇವಾ ಸಮಿತಿ ಹಾಗೂ ವಿಶ್ವಕರ್ಮಸಮಾಜದ ವತಿಯಿಂದ ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸುವ ಮೂಲಕ ಶ್ರದ್ದಾಭಕ್ತಿಗಳಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ವಿಶ್ವಕರ್ಮರು ದೇವಶಿಲ್ಪಿಯಾಗಿದ್ದು, ಅಂದಿನ ಕಾಲದಲ್ಲೇ ದೇವತೆಗಳಿಗೆ ಭವ್ಯವಾದ ಅರಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಸಮುದಾಯದವರು ಪಂಚಕಸುಬುಗಳನ್ನು ಬಲ್ಲವರಾಗಿದ್ದು, ಕಣ್ಮನಸೆಳೆಯುವ ದೇವಾಲಯ, ಆಧುನೀಕತೆಕೌಶಲ್ಯ ಬಳಸಿಕೊಂಡು, ಸುಂದರಸೌಧಗಳನ್ನು ನಿರ್ಮಿಸಿಕೊಡುತ್ತಿದ್ದಾರೆ.ಸಮಾಜದವರು ಸಭೆ, ಸಮಾರಂಭ ನಡೆಸಲು ಸಮುದಾಯಭನದಅಗತ್ಯವಿದ್ದು, ಕೂಡಲೇ ಜಿಲ್ಲಾಡಳಿತ ಸೂಕ್ತ ನಿವೇಶನ ಮಂಜೂರುಮಾಡಿಸುವ ಮೂಲಕ ಜಿಲ್ಲಾಕೇಂದ್ರದಲ್ಲಿಒಂದು ಸುಸಜ್ಜಿತ ಸಮುದಾಯಭವನ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿಮಾಡಿದರು.

ಸಮಾಜದ ಮುಖಂಡರಾದಯಜಮಾನ್‌ಅನಂತ್‌ಕುಮಾರ್ ಮಾತನಾಡಿ, ಸಮಾಜವುಆರ್ಥಿಕವಾಗಿ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸರ್ಕಾರದ ಸವಲತ್ತು ಪಡೆಯಲು ಸಮಾಜದವರುತಮ್ಮಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹಂಡರಕಳ್ಳಿಸೋಮಣ್ಣ, ಚಿಕ್ಕೆಜಮಾನರಾದರಮೇಶ್, ನಾಗೇಂದ್ರಸ್ವಾಮಿ, ನಾಗೇಂದ್ರಬಾಬು, ಮಲ್ಲಣ್ಣಚಾರ್, ಪ್ರಸನ್ನಚಾರ್, ಜಿ.ಸುರೇಶ್, ಮಹೇಶ್, ಕೆ.ಎನ್.ಸುರೇಶ, ಭೋಗಾಪುರಮಧು, ನಂದೀಶ್ ವಿಶ್ವಕರ್ಮ, ಟೈಲರ್ ನಾಗರಾಜ, ಆರ್.ವಿ.ಮಹದೇವಪ್ಪ, ಎಸ್.ರಾಮಶೆಟ್ಟಿ, ನಾಗರಾಜಚಾರ್, ಎನ್.ಶ್ರೀಕಾಂತ್, ಕೆ.ಎಸ್.ಸುರೇಶ್, ನಟರಾಜು, ಸಿ.ಎಸ್.ಗಿರೀಶ, ಎಂ.ಪ್ರಕಾಶ್. ವಿಜಯಕುಮಾರ್, ಶ್ರೀನಿವಾಸಾಚಾರ್, ಮಂಜುನಾಥ್, ದೀಪು, ಆಟೋ ನಟರಾಜು, ಅರ್ಚಕ ನಾಗರಾಜು, ಕುಮಾರ್, ರವಿಕುಮಾರ್, ಗಣೇಶ್, ಸುಬ್ರಹ್ಮಣ್ಯ, ಪ್ರಭು, ಕಾಳಿಕಾಂಬ ಭಜನಾಮಂಡಳಿಯ ಮಹಿಳಾ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *