ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ ): ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಉದಯ ಶಂಕರ್ ಹೇಳಿದರು.

ಅವರು ತಾಲೂಕಿನ ಕುಪ್ಪೆಹಂತ (ಚುಂಚನಕಟ್ಟೆ) ಗ್ರಾಮ ಪಂಚಾಯಿತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮೂರನೇ ವರ್ಷದ ಸಂಭ್ರಮಾಚರಣೆ ಮತ್ತು ಅರಿವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಯಾವುದೇ ಯೋಜನೆಗಳಿಂದಲೂ ಕೂಡ ಅರ್ಹ ಫಲಾನುಭವಿಗಳು ಹೊರಗುಳಿಯಬಾರದು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು. ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆಗಳಿಂದ ನಾಡಿನ ಸಮಸ್ತ ಜನತೆಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ತಾಲೂಕು ಪಂಚಾಯಿತಿ ಇಓ ಎ.ಏನ್.ರವಿ ಮಾತನಾಡಿ ಜನರ ಮನೆಬಾಗಿಲಿಗೆ ಅಧಿಕಾರಿಗಳು ತೆರಳಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರಿವು ಶಿಬಿರಗಳನ್ನು ಮಾಡಲಾಗುತ್ತಿದ್ದು ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹೇಳಿ ಅವುಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು.
ಶಿಬಿರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಮೂರ್ತಿ, ಕಾಂತರಾಜು, ಮಹಾಲಿಂಗಪ್ಪ, ಎಲ್.ಐ.ಸಿ ಮಹದೇವ, ಗ್ರಾ.ಪಂ. ಆಡಳಿತ ಅಧಿಕಾರಿ ರಾಮಚಂದ್ರು, ಪಿಡಿಓ ಹೆಚ್.ಬಿ.ಮಂಜುನಾಥ್, ಕಾರ್ಯದರ್ಶಿ ಕೆ.ಎನ್.ರಾಮೇಗೌಡ, ಎಸಿಡಿಪಿಓ ಅಕ್ಕಮಹಾದೇವಿ, ಗ್ರಾಮ ಆಡಳಿತ ಅಧಿಕಾರಿ ಸಯ್ಯದ್ ನೂರೂಲ್ಲಾ, ಡಿಇಓ ಡಿ.ಬಿ.ಮಹದೇವಪ್ಪ, ಬಿಲ್ ಕಲೆಕ್ಟರ್ ನಾಗರಾಜ, ಪಂಚಾಯಿತಿ ಸಿಬ್ಬಂದಿಗಳಾದ ಚಲುವರಾಜು, ಜಯಕುಮಾರ್, ಮೋಹನ್, ಪ್ರಕಾಶ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಗೌರಮ್ಮ, ಮಾಜಿ ಉಪಾಧ್ಯಕ್ಷೆ ಗೀತಾ, ಪಿಎಎಸಿಎಸ್ ಮಾಜಿ ಅಧ್ಯಕ್ಷರಾದ ಪಾರ್ಥ, ಸಂತೋಷ, ಮುಖಂಡ ತಮ್ಮಯ್ಯ, ಪೊಲೀಸ್ ಪೇದೆ ಅವಿನಾಶ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರುಗಳು, ಸಾರ್ವಜನಿಕರು ಇದ್ದರು.