- ಇನ್ನೂ ಪ್ರತಿವರ್ಷ ಒಂದು ಸಾವಿರ ಮಕ್ಕಳಿಗೆ ಸಹಾಯ ಮಾಡುವ ಗುರಿ

ಚಾಮರಾಜನಗರ: ಬೆಂಗಳೂರು ಪುಳಿಯೋಗರೆ ವತಿಯಿಂದ ತಾಲೂಕಿನ ಸಿದ್ದಯ್ಯನಪುರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಲಾಯಿತು.
ಶಾಲೆಯ ಅಕ್ಷರದವ್ವ ಸಾವಿತ್ರಿಬಾಯಿಪುಲೆ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಎಲ್ ಕೆಜಿ, ಯುಕೆಜಿ ತರಗತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಬೆಂಗಳೂರು ಪುಳಿಯೋಗರೆಯ ಮಾಲೀಕರಾದ ಮಹಾದೇವಸ್ವಾಮಿ, ಸಹೋದರ ನಾಗರಾಜು ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಿದರು.
ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದ ಬೆಂಗಳೂರು ಪುಳಿಯೋಗರೆಯ ಮಾಲೀಕ ನಾಗರಾಜು ಮಾತನಾಡಿ, ಸಂಪಾದಿಸಿ ಹಣದಲ್ಲಿ ಶೇ 10 ರಷ್ಟುನ್ನು ದಾನ ಮಾಡುವಂತೆ ನಮ್ಮ ತಂದೆ, ತಾಯಿಯವರು ಹೇಳಿಕೊಟ್ಟಿದ್ದರು. ಅದರಂತೆ ತಾವು ಸಂಪಾದಿಸಿದ ಹಣದಲ್ಲಿ ದಾನ ಮಾಡುವ ಕೆಲಸ ಮಾಡಲಾಗಿದ್ದು, ಮುಂದಿನ ವರ್ಷದಿಂದ 1 ಸಾವಿರ ವಿದ್ಯಾರ್ಥಿಗಳಿಗೆ ದಾನ ಮಾಡಲು ನಿರ್ಧರಿಸಲಾಗಿದೆ ಎಂದರು.
ಚಾಮರಾಜನಗರ ಬೆಂಗಳೂರು ಪುಳಿಯೋಗರೆಯ ಮಾಲೀಕ ಮಹಾದೇವಸ್ವಾಮಿ ಮಾತನಾಡಿ, ಬೆಂಗಳೂರು ಪುಳಿಯೋಗರೆ ವತಿಯಿಂದ ಈಗಾಗಲೇ ಶಾಲಾಮಕ್ಕಳಿಗೆ ಉಚಿತ ಶಾಲಾಬ್ಯಾಗ್, ನೋಟ್ ಪುಸ್ತಕ ವಿತರಣೆ, ವೃದ್ದಾಶ್ರಮ, ಅನಾಥಾಶ್ರಮಗಳಿಗೆ ದಾನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ದೊಡ್ಡಮಟ್ಟದಲ್ಲಿ ಸಮಾಜಸೇವೆ ಮಾಡಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಸಿಆರ್ ಪಿ ಮಂಟೇನಾಯಕ ಮಾತನಾಡಿ, ಸರ್ಕಾರ ಶಾಲೆಗಳಲ್ಲಿ ಪ್ರವೇಶ ಸಂಖ್ಯೆ ಗಣನೀಯವಾಗಿ ಇಳಿಕೆಮುಖವಾಗಿದ್ದು, ಶಾಲೆಯಲ್ಲಿ ಮಕ್ಕಳು ಪ್ರವೇಶಾತಿ ಪಡೆಯದೆ ಎಲ್ಲರೂ ಖಾಸಗಿ ಶಾಲೆಗಳತ್ತ ಮುಖ ಮಾಡಿದರು. ಇದನ್ನು ಸರ್ಕಾರ ಮನಗಂಡು ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ತರಗತಿ ಆರಂಭಿಸಿದ ಮೇಲೆ ಈ ಶಾಲೆಯಲ್ಲಿ 35 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇದು ಒಳ್ಳೆಯ ಬೆಳವಣಿಯಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎಂದರು.
ಬೆಂಗಳೂರು ಪುಳಿಯೋಗರೆ ವತಿಯಿಂದ ಶಾಲೆಯ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಮಾಡಿರುವುದು ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ಶಾಲೆ ಕಟ್ಟಡಗಳು ಆಗಬೇಕಿದೆ ಅದು ಮುಂದಿನ ದಿನಗಳಲ್ಲಿ ಆಗಲಿದೆ. ದಾನಿಗಳು, ಸರ್ಕಾರ ನೀಡುವ ಸವಲತ್ತುಗಳನ್ನು ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರ, ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯ ಶಿಕ್ಷಣ ಹೇಳಿಕೊಡಬೇಕು ಎಂದರು.
ಸನ್ಮಾನ: ಬೆಂಗಳೂರು ಪುಳಿಯೋಗರೆಯ ಮಾಲೀಕರಾದ ಮಹಾದೇವಸ್ವಾಮಿ, ಸಹೋದರ ನಾಗರಾಜು ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ, ಉಪಾಧ್ಯಕ್ಷೆ ಲತಾ, ಸದಸ್ಯರು, ಗ್ರಾ.ಪಂ. ಮಾಜಿ ಸದಸ್ಯ ಬಸವಣ್ಣ, ಟಿವಿಎಸ್ ಕಂಪನಿಯ ಸೇಂದಿಲ್,
ಶಾಲಾ ಮುಖ್ಯ ಶಿಕ್ಷಕ ಪಿ.ಪುಟ್ಟರಾಜು, ಶಿಕ್ಷಕರಾದ ನಾರಾಯಣ, ಗುರುಸಿದ್ದಯ್ಯ, ನಂಜುಂಡಯ್ಯ, ಭವಾನಿ,ನಂದಿನಿ, ಪುಷ್ಪಾ, ಶಾಲಾ ಮಕ್ಕಳು, ಪೋಷಕರು ಹಾಜರಿದ್ದರು.