- ಬೌದ್ಧ ಭಿಕ್ಕುಗಳು ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ
- ಸಮ್ಮೇಳನ ಯಶಸ್ವಿಗೆ ಎಲ್ಲರೂ ಸಹಕಾರ ನೀಡಿ
ಚಾಮರಾಜನಗರ: ಭಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭಾದ ಸಹಯೋಗದಲ್ಲಿ ನಗರದಲ್ಲಿ ಅಕ್ಟೋಬರ್ 24 ಮತ್ತು 25 ಎರಡು ದಿನಗಳು ವಿಶ್ವ ಬೌದ್ದ ಸಮ್ಮೇಳನ ನಡೆಯಲಿದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭಾದ ಸಹಯೋಗದಲ್ಲಿ ನಡೆದ ವಿಶ್ವ ಬೌದ್ಧ ಸಮ್ಮೇಳನದ ಪೂರ್ವಭಾವಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರಿನ ಭೌದ್ದ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಅದೇ ಮಾದರಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಅಭೂತಪೂರ್ವ ಯಶಸ್ವಿಗೊಳಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.
ಬೌದ್ಧ ಸಮ್ಮೇಳನವು ಪಾರದರ್ಶಕ ಹಾಗೂ ಎಲ್ಲರನ್ನೂ ಒಳಗೊಂಡಂತೆ ನಡೆಸಲು ಶ್ರಮಿಸೋಣ. ಸಚಿವರಾದ ಸತೀಶ್ ಜಾರಕಿ ಅವರು ಬೆಳಗಾವಿಯಲ್ಲಿ ಸಮ್ಮೇಳನ ಮಾಡುವುದಾಗಿ ಕೇಳಿಕೊಂಡಿದ್ದರು. ಆದರೆ ಶ್ರೀ.ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಚಾಮರಾಜನಗರದಿಂದಲ್ಲೇ ಸಮ್ಮೇಳನ ನಡೆಯಬೇಕು ಚಾಮರಾಜನಗರಕ್ಕೆ ಶಿಫಾರಸು ಮಾಡಿದರು.. ಚಾಮರಾಜನಗರದಲ್ಲಿ ಮಾಡಲಿ ಎಂದು ಬೌದ್ಧ ಲಾಂಛನ ಹಸ್ತಾಂತರ ಮಾಡಿದರು.
ವಿಶ್ವ ಬೌದ್ಧ ಸಮ್ಮೇಳನ ನಡೆಸಲು ಇನ್ನೂ ಮೂರು ತಿಂಗಳಿದೆ. ಬಹಳ ಕಡಿಮೆ ಸಮಯದಲ್ಲಿ ಸಮ್ಮೇಳನ ಯಶಸ್ವಿಗಾಗಿ. ಸಮಿತಿಗಳು, ಉಪ ಸಮಿತಿಗಳ ರಚನೆ ಆಗಬೇಕು. ಈ ಸಮಿತಿಗಳಿಗೆ ಸ್ವಯಂ ಪ್ರೇರಣೆ ಸೇರುವವರು ಹೆಸರು ನೋಂದಾಯಿಸಿಕೊಳ್ಳಿ,ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮ್ಮೇಳನದಲ್ಲಿ ಭಾಗವಹಿಸುವ ಬುದ್ದ ಅಂಬೇಡ್ಕರ್ ಅನುಯಾಯಿಗಳಿಗೆ ಆಹಾರ ವ್ಯವಸ್ಥೆ, ಮೆರವಣಿಗೆ. ಅಂತರಾಷ್ಟ್ರೀಯ ಜಾಹೀರಾತು ಸೇರಿದಂತೆ ಆಯಾಯ ಸಮಿತಿಗಳಲ್ಲಿ ಚರ್ಚೆಗಳು ನಡೆದು ಮೇಲುಸ್ತುವಾರಿಯೊಂದಿಗೆ ಸಮಿತಿಗಳನ್ನು ನಿರ್ವಹಣೆ ಮಾಡೋಣನಗರದ, ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಲು ಉತ್ತಮ ಸ್ಥಳವಾಗಿದೆ ಎಂದರು.
ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮಿಜೀ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು, ಮಾತನಾಡಿದರು.
ಸಭೆಯಲ್ಲಿ ಭಿಕ್ಕು ಸಂಘದ ಮನೋರಕ್ಕಿತ ಬಂತೇಜಿ, ಬೋದಿರತ್ನ, ಸಂಘಪಾಲ, ಕಲ್ಯಾಣಸಿರಿ ಭಂತೇಜಿ, ಬುದ್ದರತ್ನ ಭಂತೇಜಿ , ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜು, ಮಾಜಿ ಮೇಯರ್ ಪುರುಷೋತ್ತಮ, ಎಸ್ ಸಿ, ಎಸ್ ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ, ಡಿಎಸ್ ಎಸ್ ಮುಖಂಡ ತುಂಬಲು ರಾಮಣ್ಣ, ಜಿ.ಪಂ.ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವು, ಉಮೇಶ್ ಕುದರ್, ಬಿಎಸ್ ಪಿ ಮುಖಂಡ ಹ.ರಾ.ಮಹೇಶ್, ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ.ನರಸಿಂಹ ಮೂರ್ತಿ, ಜಿ.ಪಂ ಮಾಜಿ ಸದಸ್ಯ ನಾಗರಾಜುಕಮಲ್, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ, ಕೊಳ್ಳೇಗಾಲ ಚಿಕ್ಕಮಾಳಿಗೆ, ಓಲೆ ಮಹದೇವು, ಯಳಂದೂರು ಅಂಬೇಡ್ಕರ್ ಸೇವಾ ಸಮಿತಿ ಕೆಸ್ತೂರು ಸಿದ್ದರಾಜು, ಗುಂಡ್ಲುಪೇಟೆ ಸುಭಾಷ್ ಮಾಡ್ರಳ್ಳಿ, ದೊಡ್ಡಿಂದುವಾಡಿ ಸಿದ್ದರಾಜು, ಹನೂರು ಗುರುದೇವ, ಹೊನ್ನೂರು ಕೃಷ್ಣಮೂರ್ತಿ,
ಹಾಗೂ ಡಾ.ಬಿ.ಆರ್. ಅಂಬೇಡ್ಕರ್, ಬುದ್ದ ಅನುಯಾಯಿಗಳು ಭಾಗವಹಿಸಿದ್ದರು