ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಕಂಪನಿ, ಯೂತ್ ಫಾರ್ ಸೇವಾ ಸಂಸ್ಥೆಯಿಂದ  8 ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ

ಚಾಮರಾಜನಗರ : ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಕಂಪನಿ, ‘ಯೂತ್ ಫಾರ್ ಸೇವಾ ಸಂಸ್ಥೆಯೊಂದಿಗೆ  ಜಿಲ್ಲೆಯ 8 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  1500 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್‌ಬುಕ್ ಹಾಗೂ ಅಗತ್ಯ ಲೇಖನ ಸಾಮಗ್ರಿಗಳನ್ನು ಒಳಗೊಂಡ  ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಲಾಯಿತು.

ನಗರದ  ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,  ಉಪ್ಪಾರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,  ಸೋಮವಾರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೆಂಕಟಯ್ಯನ ಛತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಮ್ಮಡಹಳ್ಳಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನೂರು ತಾಲೂಕಿನ ಕಣ್ಣೂರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಂಪಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಟ್ಡು 1500 ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್‌ಬುಕ್ ಹಾಗೂ ಅಗತ್ಯ ಲೇಖನ ಸಾಮಗ್ರಿಗಳನ್ನು ಒಳಗೊಂಡ  ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಲಾಯಿತು.

ಯೂತ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಯೋಜಕರು ತೇಜನಾಯಕ್ ಮಾತನಾಡಿ, ಈ ಸಾಮಾಜಿಕ ಕಾರ್ಯಕ್ರಮದ ಮೊದಲ ಹಂತದ ಸೂಚನೆಯ ಹಿನ್ನೆಲೆಯಲ್ಲಿ   ಇದು ಸಂಸ್ಥೆಯ ದೀರ್ಘಾವಧಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಭಾಗವಾಗಿದ್ದು, 2015 ರಿಂದ ಈವರೆಗೆ ಟೆಕ್ಷಾಸ್ ಇನ್ಸ್ಟ್ರುಮೆಂಟ್ಸ್ಮ ತ್ತು ಯೂತ್ ಫಾರ್ ಸೇವಾಸಂಸ್ಥೆ ಜಂಟಿಯಾಗಿ ವಿವಿಧ ಭಾಗಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ  ಸಮಾಜ ಸೇವಕ ವೆಂಕಟನಾಗಪ್ಪ ಶೆಟ್ಟಿ,   ಬಸವರಾಜೇಂದ್ರ ಆಸ್ಪತ್ರೆಯ ಡಾ.ಶ್ವೇತ, ಸುರೇಶ್ಋಗ್ವೇದಿ,  ಸಿ.ಎಸ್. ಪ್ರವೀಣ್,
ಹರ್ಷ,  ಸೇವಾ ಭಾರತಿ ಶಿಕ್ಷಣ ಸಂಸ್ಥೆ ಮಧು, ಚಾಮರಾಜನಗರ ರೋಟರಿ ಸಿಲ್ಕ್ ಸಿಟಿ ಸದಸ್ಯರು, ಟೆಕ್ಷಾಸ್ ಇನ್ಸ್ಟ್ರಮೆಂಟ್ ಸದಸ್ಯರು  ಬೆಂಗಳೂರು ಯೂತ್ ಫಾರ್ ಸೇವಾ ಸಂಸ್ಥೆಯ ಸಲಹಾ ಮಂಡಳಿ ಸದಸ್ಯರು, ಶಾಲೆಯ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *