- ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ
ಚಾಮರಾಜನಗರ :12ನೇ ಶತಮಾನದಲ್ಲಿ ಬಸವೇಶ್ವರರು ಅಸಮಾನತೆಗಳ ವಿರುದ್ಧ ಹೋರಾಡಿದರು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ನಗರದ ರಾಮಸಮುದ್ರ ಕುಲುಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.12ನೇ ಶತಮಾನದ ಬಸವಣ್ಣನವರು ಜಾತಿ, ಲಿಂಗ ಆರ್ಥಿಕ ತಾರತಮ್ಯದ ವಿರುದ್ಧ ಹೋರಾಡಿ, ಸಮಾನತೆಯ ತತ್ವ ಸಾರಿದ ಮಹಾನ್ ಸಮಾಜ ಸುಧಾರಕರು, ವಚನಕಾರರಾಗಿದ್ದಾರೆ ಎಂದರು.
ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ಅವರು, ‘ಕಾಯಕವೇ ಕೈಲಾಸ’ ಎಂಬ ಮಂತ್ರದ ಮೂಲಕ ಶ್ರಮದ ಗೌರವವನ್ನು ಎತ್ತಿಹಿಡಿದರು. ಸ್ತ್ರೀ-ಪುರುಷ ಸಮಾನತೆ, ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಮಾನವತಾವಾದದ ಪ್ರತಿಪಾದಕರಾಗಿದ್ದರು ಎಂದರು.
ಮುಖಂಡ ಡಾ.ಎ.ಆರ್.ಬಾಬು ಮಾತನಾಡಿ, ಬಸವಣ್ಣನವರ ಚಿಂತನೆಗಳು. ಬಿಜೆಪಿಯ ನರೇಂದ್ರಮೋದಿಯವರ ಚಿಂತನೆಗಳು ಒಟ್ಟಾಗಿ ಎಂದು ಹೇಳಬಹುದು. ಸಮಾನತೆ, ಸಮಾಜ ಸುಧಾರಣೆ, ಆರ್ಥಿಕ ವ್ಯವಸ್ಥೆ, ಆಡಳಿತ ವ್ಯವಸ್ಥೆ, 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದರು ಅದನ್ನು ನರೇಂದ್ರಮೋದಿಯವರು ಅಳವಡಿಸಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ಪ್ರಾಯಾಸ್ ನಿಟ್ಟಿನಲ್ಲಿ. ಕೆಲಸ ಮಾಡುತ್ತಿದ್ದಾರೆ ಎಂದರು.
ಸಾಹಿತಿ ಕೋಡಿಉಗನೆ ಮಂಜುನಾಥ್ ಮಾತನಾಡಿ, ಬಸವಣ್ಣನವರ ವಿಚಾರಗಳನ್ನು ಎಲ್ಲಕಾಲಕ್ಕೂ ಪ್ರಸ್ತುತವಾಗಿವೆ. ಅವರ ವಿಚಾರಧಾರೆಗಳನ್ನು ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು ಎಂದರು.
ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರಕಾರಿಣಿ ಸದಸ್ಯ ನೂರೊಂದುಶೆಟ್ಟಿ ಮಾತನಾಡಿ, ಬಸವಣ್ಣನವರು 8ನೇ ವಯಸ್ಸಿನಲ್ಲಿ ಸಮಾನತೆಗಾಗಿ ಹೋರಾಡಿದರು. ಮಹಿಳೆಯರ ಸಮಾನತೆಗಾಗಿ ಪ್ರತಿಪಾದಿಸಿದರು ಎಂದರು.
ಚೂಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ನಗರಸಭಾ ಮಾಜಿ ಸದಸ್ಯರಾದ ಶಿವಣ್ಣ, ಕುಮುದಾಕೇಶವಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ನಟರಾಜು, ಎಸ್‌ಟಿ ಮೋರ್ಚಾದ ಉಪಾಧ್ಯಕ್ಷ ಬುಲೆಟ್ ಚಂದ್ರು, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕೂಸಣ್ಣ, ಮಾಧ್ಯಮ್ ಸಂಚಾಲಕ ವೀರೇಂದ್ರ, ಮಾಧ್ಯಮ ಪ್ರಮುಖ್ ಮಂಜುನಾಥ್, ಮಹದೇವಮ್ಮ ಮೇಗಲಹುಂಡಿ, ರಾಜಮ್ಮ, ಕಾರ್ಯಾಲಯ ಕಾರ್ಯದರ್ಶಿ ಪಿ.ರಂಗಸ್ವಾಮಿ, ಮಹೇಶ್, ಮುಖಂಡರಾದ ಕಪಿನಿನಾಯಕ, ಚಂದ್ರಶೇಖರ್, ಶೇಷಪ್ಪಪಾಸ್ವಾನ್, ನಲ್ಲೂರುಪರಮೇಶ್, ಶ್ರೀನಾಥ್ , ಅಮಚವಾಡಿ ಮಹಾಶಕ್ತಿ ಕೇಂದ್ರ ಅಧ್ಯಕ ಕಿಲಗೆರೆ ಬೆಳ್ಳಪ್ಪ, ಮಾದಾಪುರ ಮಹಾಶಕ್ತಿಕೇಂದ್ರ ಅಧ್ಯಕ ಭೋಗಾಪುರ ಕುಮಾರಸ್ವಾಮಿ, ಅಂಕಶೆಟ್ಟಿಪುರ ಮಂಜು, ಹೆಗ್ಗೋಠಾರ ಮಂಜುನಾಥ್ಇತರರು ಹಾಜರಿದ್ದರು.