- ಹೆಚ್.ಸಿ.ಮಹದೇವಪ್ಪ ಹುಟ್ಟುಹಬ್ಬ: ಮೂಡಲಧ್ವನಿ ವೃದ್ದಾಶ್ರಮದಲ್ಲಿ ಉಪಾಹಾರ ವ್ಯವಸ್ಥೆ
ಚಾಮರಾಜನಗರ : ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಭೀಮ್ ರಾವ್ ಅಂಬೇಡ್ಕರ್ ಸೇನೆ ಹಾಗೂ ಸುನೀಲ್ ಬೋಸ್
ಅಭಿಮಾನಿ ಬಳಗದ ವತಿಯಿಂದ ನಗರದ ಜೋಡಿರಸ್ತೆಯಲ್ಲಿರುವ ಮೂಡಲಧ್ವನಿ ವೃದ್ದಾಶ್ರಮದಲ್ಲಿ ವೃದ್ದರಿಂದ ಕೇಕ್ ಕತ್ತರಿಸಿ, ಅವರಿಗೆ
ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಯಿತು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಹುಟ್ಟುಹಬ್ಬವನ್ನು ಮೂಡಲಧ್ವನಿ ವೃದ್ಧರೊಂದಿಗೆ ಆಚರಣೆ ಮಾಡಲಾಗಿದೆ. ಹೆಚ್.ಸಿ. ಮಹದೇವಪ್ಪ ರಾಜ್ಯದ ಧೀಮಂತನಾಯಕರಾಗಿದ್ದು, ಶೋಷಿತರ ಧ್ವನಿಯಾಗಿ ಸಮಾಜದ ಎಳಿಗೆಗೆ ಕಟಿಬದ್ಧರಾಗಿ ಅನೇಕ ಆಡಳಿತಾತ್ಮಕ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿ ತರಲು ಹತಾರು ವರ್ಷಗಳಿಂದ ಕೆಲಸ ಮಾಡುತಿದ್ದಾರೆ. ಆರೋಗ್ಯ ಸಚಿವರಾಗಿ, ಲೋಕೋಪಯೋಗಿ ಸಚಿವರಾಗಿ ವಿವಿಧ ಖಾತೆಗಳ ಸಚಿವರಾಗಿ ಪ್ರಸ್ತುತ ಸಮಾಜ ಕಲ್ಯಾಣ ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಅವರ ಬಲಗೈ ಭಂಟರಾಗಿ ಸಮಾಜ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರಿಗೆ ಭಗವಂತ ಹೆಚ್ಚಿನ, ಆರೋಗ್ಯ ಆಯಸ್ಸು ,ಕರುಣಿಸಿ, ಇನ್ನೂ ಉನ್ನತವಾದ ಹುದ್ದೆ ದೊರಕಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಭೀಮ್ ರಾವ್ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಗಣೇಶ ಪ್ರಸಾದ್ ಮಾತನಾಡಿ,ಕರ್ನಾಟಕದ ಏಕೈಕ ನಾಯಕ, ಸಂವಿಧಾನದ ಆಶಯಗಳನ್ನು ದೇಶಕ್ಕೇ ಸಾರುವ ಸಲುವಾಗಿ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ವಾಚನವನ್ನು ಕಡ್ಡಾಯಗೊಳಿಸಿದ ಪ್ರಬಲ ಅಂಬೇಡ್ಕರ್ ವಾದಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಭೀಮರಾವ್ ಅಂಬೇಡ್ಕರ್ ಸೇನೆ, ಸುನೀಲ್‌ಬೋಸ್ ಅಭಿಮಾನಿ ಬಳಗದ ವತಿಯಿಂದ ನಗರದ ಮೂಡಲಧ್ವನಿ ವೃದ್ದಾಶ್ರಮದಲ್ಲಿ ವೃದ್ಧರಿಂದ ಕೇಕ್ ಕತ್ತರಿಸಿ, ಬೆಳಗಿನ ಉಪಹಾರ ವ್ಯವಸ್ಥೆ ಮಾಡಲಾಯಿತು. ಮಹದೇವಪ್ಪ ಅವರು ಇನ್ನೂ ಹೆಚ್ಚಿನ ಕಾಲ ಮಂತ್ರಿಯಾಗಿ ಮತ್ತಷ್ಟು ಜನಸೇವೆ ಮಾಡಲಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ , ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ,
ನಾಗಶ್ರೀ ನಗರಸಭಾ ಮಾಜಿ ಸದಸ್ಯ ರಾಮಸಮುದ್ರ ಬಸವರಾಜು, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, , ಮುಖಂಡರಾದ ಮಹೇಶ್ ಕುದರ್, ಅಮಚವಾಡಿ ಶಿವಣ್ಣ, ರಾಮಸಮುದ್ರ ಪ್ರಸನ್ನ, ಆಲೂರುಶೇಷಣ್ಣ, ರಾಮು, ಲೋಹಿತ್, ಶಿವಣ್ಣ, ಇತರರು ಹಾಜರಿದ್ದರು.