ಭಗೀರಥರ ಪ್ರಯತ್ನ ಎಲ್ಲರಿಗೂ ಸ್ಪೂರ್ತಿ: ಬೂದಿತಿಟ್ಟು ಲಿಂಗರಾಜು

  • ಬೂದಿತಿಟ್ಟು ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ


ಚಾಮರಾಜನಗರ: ಮಹರ್ಷಿ ಭಗೀರಥರ ತತ್ವಾದರ್ಶಗಳು ಎಲ್ಲರಿಗೂ ಸ್ಪೂರ್ತಿಯಾಗಿದ್ದು ಇಂದಿನ ಪೀಳಿಗೆಗೆ ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು ಹೇಳಿದರು.

ತಾಲೂಕಿನ ಬೂದಿತಿಟ್ಟು ಗ್ರಾಮದ ಉಪ್ಪಾರ ಸಮುದಾಯ ಭವನದಲ್ಲಿ ನಡೆದ ಶ್ರೀ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ  ಪುಷ್ಷಾರ್ಚನೆ ಮಾಡಿ ಮಾತನಾಡಿದರು.ಮಹರ್ಷಿ ಭಗೀರಥರ ಜೀವನವು ಛಲ, ದೃಢಸಂಕಲ್ಪ ಮತ್ತು ನಿಸ್ವಾರ್ಥ ಸೇವೆಗೆ ಸಾಕಾರ ರೂಪವಾಗಿದೆ. ಭಗೀರಥರು ಕಠಿಣ ತಪಸ್ಸಿನ ಮೂಲಕ ಸ್ವರ್ಗದಲ್ಲಿದ್ದ ಗಂಗೆಯನ್ನು ಭೂಮಿಗೆ ತಂದು, ತನ್ನ ಪೂರ್ವಜರ ಆತ್ಮಕ್ಕೆ ಶಾಂತಿ ಒದಗಿಸಿದರು. ಇದು ಅಸಾಧ್ಯವೆಂದು ತೋರುವ ಕೆಲಸವನ್ನು ದೃಢನಿರ್ಧಾರದಿಂದ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ ಎಂದರು.
ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿಯಾಗಿರುವ ಕಾರಣದಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಸಿದ್ದರಾಜು, ಯಜಮಾನರಾದ ಮಹೇಶ್, ಶಂಕರ್, ಅಂಕಪ್ಪ, ಮುಖಂಡರಾದ ಚಾವಡಶೆಟ್ಟಿ, ಮಹದೇವಶೆಟ್ಟಿ, ಲಿಂಗರಾಜು, ಮಹದೇವಶೆಟ್ಟಿ, ರಮೇಶ್, ಮಹದೇವಸ್ವಾಮಿ, ಮಹೇಶ್, ಸೋಮಣ್ಣ,ಶಾಂತರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *