ಒಳ ಮೀಸಲಾತಿ ಜಾರಿಗೊಳಿಸಿದರೆ ಉಗ್ರ ಹೋರಾಟ: ಅಯ್ಯನಪುರ ಶಿವಕುಮಾರ್ ಎಚ್ಚರಿಕೆ

 ಚಾಮರಾಜನಗರ:  ಒಳ ಮೀಸಲಾತಿ ಜಾರಿ ಸಂಬಂಧ ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ  ನಿವೃತ್ತ ನ್ಯಾಯಮೂರ್ತಿ
ನಾಗಮೋಹನದಾಸ್ ಸಲ್ಲಿಸಿರುವ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಇಲ್ಲದಿದ್ದರೆ  ರಾಜ್ಯಾದ್ಯಂತ
ಉಗ್ರ ಹೋರಾಟ  ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಚಾಮರಾಜನಗರ ಜಿಲ್ಲಾಧ್ಯಕ್ಷ
ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಸರ್ಕಾರವನ್ನು ಎಚ್ಚರಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನ್ಯಾ.ನಾಗಮೋಹನ್‌ದಾಸ್ ವರದಿ ಅವೈಜ್ಞಾನಿಕವಾಗಿದ್ದು ಕೆಲ ಷರತ್ತುಗಳನ್ನು ಉಲ್ಲಂಘಿಸ ಲಾಗಿದೆ. ಸರಿಯಾಗಿ ಸಮೀಕ್ಷೆ ಮಾಡಿಲ್ಲ. ಆದ್ದರಿಂದ ಈ ವರದಿಯನ್ನು ತಿರಸ್ಕಾರ ಮಾಡಬೇಕು. ಒಂದು ವೇಳೆ ಒಳ ಮೀಸಲಾತಿ ನೀಡುವುದಾದರೆ ಈಗಾಗಲೇ ಸರ್ಕಾರ ಮಾಡಿರುವ ಹಿಂದುಳಿದ ವರ್ಗಗಳ ಜನಗಣತಿ ಆಧರಿಸಿ ಜಾರಿ ಮಾಡಲಿ  ಎಂದರು.
ಒಳ ಮೀಸಲಾತಿ ನ್ಯಾಯಾಲಯದಲ್ಲಿ ಇರುವುದರಿಂದ  ಸರ್ಕಾರ ಒಳಮೀಸಲಾತಿ ಜಾರಿ ಮಾಡುವುದು ನ್ಯಾಯಾಂಗದ ಉಲ್ಲಂಘನೆ ಆಗುತ್ತದೆ.ಮಾನ್ಯತೆ ಹೊಂದಿಲ್ಲದ ದತ್ತಾಂಶ ಇಲ್ಲದ ಹೊರತು. ಯಾವ ಸೂತ್ರವನ್ನು ಬಳಸಿದರು ಪರಿಶಿಷ್ಟ ಜಾತಿಯ ಹಿಂದಿನ  ಶೇ.15 ರಷ್ಟು ಒಳ ಮೀಸಲಾತಿ ಅಸಾಧ್ಯವಾಗಿದೆ ಎಂದರು.
  ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶದ ಪ್ರತಿ ವಾರ್ಡ್‌ಗಳಲ್ಲೂ ಬೂತ್ ತೆರೆಯುವುದಾಗಿ  ತಿಳಿಸಲಾಗಿತ್ತು. ಆದರೆ, ಒಂದು ಬೂತ್ ಕೂಡ ತೆರೆದಿಲ್ಲ. ಬಲಗೈ ಜಾತಿ ಸಂಖ್ಯೆಯನ್ನು ಕಡಿಮೆ  ಮಾಡುವ ಉದ್ದೇಶದಿಂದ 16 ಜಾತಿಗಳನ್ನು ಅಲೆಮಾರಿ ಗುಂಪಿಗೆ ಸೇರಿಸಲಾಗಿದೆ. ಅಲ್ಲದೇ ಬಲಗೈ ಜನಾಂಗಗಳಿಗೆ ಬರಬೇಕಾದ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ  ಗುಂಪಿಗೆ ಸೇರಿದ 4,74,954 ಜನರನ್ನು ಎಡಗೈ ಹಾಗೂ ಬಲಗೈ ಜನಾಂಗಗಳಿಗೆ ಸಮಾನನಾಗಿ ಹಂಚಿಕೆ ಗಳ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ವಿರುದ್ಧ ಕ್ರಮವಹಿಸುವಂತೆ  ಭಾಸ್ಕರ್ ಪ್ರಸಾದ್ ಹೇಳಿಕೆ ನೀಡಿದ್ದು ಚಂದ್ರಶೇಖರಯ್ಯ ಅವರದ್ದು ವೈಯಕ್ತಿಕ ಹೇಳಿಕೆಯಲ್ಲ.  ಅದು ಜನಾಂಗದ ಹೇಳಿಕೆಯಾಗಿದೆ. ಅವರ ವಿರುದ್ಧ ಯಾವುದೇ ಕ್ರಮ ಆಗಬಾರದು. ಅವರ  ಹಿಂದೆ ಜನಾಂಗ ನಿಲ್ಲಲಿದೆ ಎಂದರು.
ಬಲಗೈ ಸಮುದಾಯಕ್ಕೆ ಸೇರಿದ 16 ಜಾತಿಗಳ 1.38.653.ಜನಸಂಖ್ಯೆಯನ್ನು ಅಲೆಮಾರಿ ಗುಂಪಿಗೆ ಸೇರಿಸಿರುವುದು. ಬಲಗೈ ಸಮುದಾಯಕ್ಕೆ ಸೇರಿದ 7 ಜಾತಿಗಳ 2.58.915 ಜನಸಂಖ್ಯೆ ಯನ್ನು ಎಡಗೈ ಸೇರಿಸಿರುವುದು. ಆದಿಕರ್ನಾಟಕ, ಆದಿ ದ್ರಾವಿಡ , ಆದಿಆಂದ್ರ ಈ ಜಾತಿಗಳ ಸುಮಾರು 4.74.954 ಜನಸಂಖ್ಯೆ ಯ ಮೂಲ ಜಾತಿಗಳನ್ನು ಕಂಡುಹಿಡಿಯದೆ ಶೇ.1 ರಷ್ಟು ಮೀಸಲಾತಿ ನಿಗಪಡಿಸಲು ಶಿಫಾರಸ್ಸು ಮಾಡಿರುವುದು ಆದೇಶದ ವಿರುದ್ದವಾಗಿದೆ ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಅಲ್ಲದೆ ಸಚಿವ ಸಂಪುಟದಲ್ಲಿ ಶೇ 50-50 ಅನುಪಾತ ಮೀಸಲಾತಿ ಹಂಚಿಕೆ ಮಾಡಿರುವುದು ಸಂವಿಧಾನಕ್ಕೆ ವಿರುದ್ದವಾಗಿ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವ್, ಮುಖಂಡರಾದ ಸೋಮೇಶ್ವರ್, ನಗರಸಬಾ ಮಾಜಿ ಸದಸ್ಯ ರ್.ಪಿ.ನಂಜುಂಡಸ್ವಾಮಿ, ನಲ್ಲೂರು ಮಹದೇವಸ್ವಾಮಿ, ಸೋಮಣ್ಣ, ವೀರಭದ್ರಸ್ವಾಮಿ, ಗೋವಿಂದರಾಜು ಹಾಜರಿದ್ದರು.

Leave a Reply

Your email address will not be published. Required fields are marked *