ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

  • ಗ್ಯಾರಂಟಿ ನೀಡುವ ನೆಪದಲ್ಲಿ ಬಡವರು, ಮಾಧ್ಯಮ ವರ್ಗದವರ ಜನರ ಮೇಲೆ ಬರ ಎಳೆದ ಕಾಂಗ್ರೆಸ್ : ಮಲ್ಲಿಕಾರ್ಜುನಪ್ಪ

ಚಾಮರಾಜನಗರ: ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಸವರು ಹಾಗು ಮಧ್ಯಮ ವರ್ಗಗಳ ಕುಟುಂಬಕ್ಕೆ ದುಬಾರಿಯಾಗಿದೆ ಎಮುದ ಆರೋಪಿ ನಗರದಲ್ಲಿ ಬಿಜೆಪಿ ಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥನದ ಮುಂಭಾಗದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಸಮಾವೇಶಗೊಂಡ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು ಕಾಂಗ್ರೆಸ್ ವಿರುದ್ದ ಘೋಷಣೆ ಕೂಗಿದರು. ಸಿಎಂ ಡಿಕೆ ಶಿವಕುಮಾರ್ ವಿರುದ್ದ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿ, ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನ ತಲುಪಿ ಕೆಲ ಕಾಲ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರೊ. ಕೆ. ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಜನಸಮಾನ್ಯರು ಕೂಲಿ ಕಾರ್ಮಿಕರು ಬಳಸುವ ದಿನನಿತ್ಯದ ಆಹಾರ ಸಾಮಾಗ್ರಿಗಳು ಹಾಗೂ ಇನ್ನಿತರೆ ವಸ್ತುಗಳ ಬೆಲೆಗಳನ್ನು ಯದ್ವತದ್ವಾ ಏರಿಕೆ ಮಾಡಿ ಜೀವನ ನಡೆಸುವುದು ಕಷ್ಟವಾಗುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಗ್ಯಾರಂಟಿಗಳನ್ನು ನೀಡುತ್ತಿವೆ. ಉಚಿತವಾಗಿ ನೀಡುವ ಎಂದು ಒಂದೇ ಕಡೆ ಹೇಳಿ ಮತ್ತೊಂದು ಕಡೆಯಿಂದ ಹಣವನ್ನು ಸುಲಿಗೆ ಮಾಡುತ್ತಿದೆ. ಪತ್ನಿಗೆ ಕೊಟ್ಟು ಗಂಡನ ಜೇಬು ಖಾಲಿ ಮಾಡುವ ಈ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮಹಿಳೆಯರಿಗೆ ಬೇಸತ್ತು ಹೋಗಿದ್ದಾರೆ. ಇಂಥ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ದೂರಿದುರ.

ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಯಾಪ್ಯ, ವಿಧವಾ, ಅಂಗವಿಕಲರ ವೇತನಗಳನ್ನು ಸಹ ಕಡಿತ ಮಾಡುವ ಮೂಲಕ ಅವರು ತಾಲೂಕು ಹಾಗೂ ಜಿಲ್ಲಾ ಕಚೇರಿಗೆ ಆಲೆಯುವಂತೆ ಮಾಡಿದೆ. ಕಳೆದ ಹಲವಾರು ತಿಂಗಳಿAದ ಪಿಂಚಣಿ ಬಂದಿಲ್ಲ ಎಂದು ಕಚೇರಿಗೆ ಸುತ್ತುವಂತೆ ಮಾಡಿದ್ದು, ಇದನ್ನೇ ನಂಬಿ ಬದುಕುತ್ತಿರುವ ಜೀವನ ಬೀದಿಗೆ ಬಿದ್ದಿದೆ. ಅಲ್ಲದೇ, ವಿದ್ಯುತ್ ದರ, ಬಸ್ ದರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನರಾಜ್ಯ ಮಾರಾಟ ತೆರಿಗೆ ಪ್ರತಿ ಲೀಟರ್‌ಗೆ ಮೂರು ರೂಪಾಯಿಗಳನ್ನು ಹೆಚ್ಚಿಸಲಾಗಿದೆ.
ಕಂದಾಯ ಇಲಾಖೆಯಲ್ಲಿ ರೈತರು ತಮ್ಮ ಜಮೀನಿಗೆ ಸಂಬAಧಪಟ್ಟ ಯಾವುದೇ ದಾಖಲೆಗಳನ್ನು ಪಡೆದುಕೊಳ್ಳಲು ಹೆಚ್ಚುವರಿ ಹಣ ನೀಡಬೇಕಾಗಿದೆ. ಚಾಮರಾಜನಗರ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿದರು.

ಮೇವು ಬ್ಯಾಂಕ್ ತೆರೆಯದ ಸಚಿವರು : ಚಾಮರಾಜನಗರದಿಂದಲೇ ಗೆದ್ದು ಶಾಸಕರಾಗಿ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿರುವ ಪುಟ್ಟರಂಗಶೆಟ್ಟರು ಸ್ವಕ್ಷೇತ್ರದಲ್ಲಿಯೇ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಲು ವಿಫಲರಾಗಿದ್ದಾರೆ. ಕ್ಷೇತ್ರಾಧ್ಯಂತ ಸರ್ಕಾರಿ ಸಾಮ್ಯದ ಗೋಮಾಳಗಳನ್ನು ಗುರುತಿಸಿ ಒತ್ತುವರಿ ತೆರವು ಮಾಡಿಸಿ, ಜಾನುವಾರುಗಳ ಮೇವಿಗೆ ಅನುಕೂಲ ಮಾಡಿಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಬೇಸಿಗೆ ಕಾಲ ಬರುವುದರಿಂದ ಈಗಲಾದರೂ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಬೇಕೆಂದು ಎಂದು ಮಲ್ಲಿಕಾರ್ಜುನಪ್ಪ ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಹಾಗು ವರ್ಗಗಳಿಗೆ ಕÀÈಷಿ, ತೋಟಗಾರಿಕೆ ಇಲಾಖೆಗಳಿಂದ ಕೃಷಿ ಯಂತ್ರಗಳು ಹಾಗೂ ಕೃಷಿ ಪರಿಕರಗಳನ್ನು ಖರೀದಿಸಲು ಸುಮಾರು ಮೂರು ವರ್ಷಗಳಿಂದ ಯಾವುದೇ ಸಹಾಯಧನ ನೀಡಿರುವುದಿಲ್ಲ. ಚಾಮರಾಜನಗರ ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಹಾಗೂ ದುರಸ್ತಿ ಕೆಲಸಗಳು ನಡೆಯುತ್ತಿಲ್ಲ. ಚಾಮರಾಜನಗರ ತಾಲ್ಲೂಕಿನಾಧ್ಯಂತ ಬರ ಬಂದಿದ್ದು ಕೆರೆಕಟ್ಟೆಗಳು ಬರಿದಾಗಿರುತ್ತವೆ. ಸ್ಥಳೀಯ ಸಚಿವರು ಕೆರೆಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ನೀರು ಹರಿಸಿ ಕೆರೆಗಳನ್ನು ತುಂಬಿಸುವಲ್ಲಿ ನಿರ್ಲಕ್ಷö್ಯ ವಹಿಸಿದ್ದಾರೆ ಎಂದರು.

ಹೀಗಾಗಿ ಆಲಂಬೂರಿನಿAದ ಕರೆ ತುಂಬಿಸುವ ಯೋಜನೆಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ ಬರುವ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕೆAದು ಹಾಗೂ ಈ ಕೂಡಲೇ ಏರಿಸಿರುವ ಬೆಲೆಗಳನ್ನು ಇಳಿಸಬೇಕೆಂದು ರೈತರ ಹಾಗೂ ಜನಸಾಮಾನ್ಯರ ಪರವಾಗಿ ಒತ್ತಾಯಿಸಿದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ. ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಎ.ಆರ್. ಬಾಬು, ಮುಖಂಡರಾದ ಎಂ.ರಾಮಚAದ್ರು, ನೂರೊಂದುಶೆಟ್ಟಿ, ಚುಡಾ ಮಾಜಿ ಅಧ್ಯಕ್ಷರಾದ ಎಸ್. ಬಾಲಸುಬ್ರಮಣ್ಯ, ಕುಲಗಾಣಶಾಂತಮೂರ್ತಿ, ಜಿಲ್ಲಾ ವಕ್ತಾರ ಮನೋಜ್‌ಪಟೇಲ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಡಹಳ್ಳೀಕುಮಾರ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಞಕೂಡ್ಲುರು ಶ್ರೀಧರಮೂರ್ತಿ, ಕೆ. ವೀರಭದ್ರಸ್ವಾಮಿ, ಕಿಲಗೆರೆ ಬಸವರಾಜು, ವೈ.ಸಿ. ನಾಗೇಂದ್ರ, ಮಂಜು ಕೋಡಿಉಗನೆ, ನಗರ ಘಟಕದ ಅಧ್ಯಕ್ಷ ಶಿವರಾಜ್, ಪ್ರಧಾನ ಕಾರ್ಯದರ್ಶಿ ಕೂಸಣ್ಣ, ಶಿವುರಾಮಸಮುದ್ರ, ಬುಲೆಟ್‌ಚಂದ್ರು, ಬಂಗಾರನಾಯಕ, ಶಿವಣ್ಣ, ಡ್ರೆöÊವರ್ ಮಹದೇವ್, ಎನ್. ಮಂಜುನಾಥ್, ವಿರೇಂದ್ರಸ್ವಾಮಿ ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *