






ಮೈಸೂರು : ಬಸವಮಾರ್ಗ ಫೌಂಡೇಶನ್ ಅಧ್ಯಕ್ಷ ಎಸ್. ಬಸವರಾಜು ನೇತೃತ್ವದಲ್ಲಿ ಆಯೋಜಿಸಿರುವ ಒಂದು ತಿಂಗಳ ಉಚಿತ ವಸತಿ ಸಹಿತ ಬೇಸಿಗೆ ಶಿಬಿರದ ಮೊದಲ ದಿನ ಮಕ್ಕಳು ಎಂಜಾಯ್ ಮೇಲೆ ಎಂಜಾಯ್ ಮಾಡಿದರು.

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಬೆಳಗ್ಗೆ 5 ಗಂಟೆಗೆ ನಿದ್ರೆಯಿಂದ ಎದ್ದೇಳಿ ಎಸ್.ಬಸವರಾಜು ಅವರ ಜೊತೆಗೆ ಒಂದು ಗಂಟೆಗೂ ಹೆಚ್ಚು ಕಾಲ ಯೋಗಾಭ್ಯಾಸ ಮಾಡಿದರು.

ಬಳಿಕ ದೇವರ ಪೂಜಾ ಕೈಂಕರ್ಯದಲ್ಲಿ ಭಾಗಿಯಾದ ಮಕ್ಕಳು, ಪೌಷ್ಠಿಕ ಮೊಳಕೆ ಕಾಳು ಸಲಾಡ್, ಹಸಿ ತರಕಾರಿ ತಿಂದರು. ಎಸ್. ಬಸವಣ್ಣ ಅವರೆ ಮುಂದೆ ನಿಂತು ಮಕ್ಕಳಿಗೆ ಉಣ ಬಡಿಸಿದರು.

ಬಳಿಕ ಮಕ್ಕಳಿಗೆ ಬಿಸಿ, ಬಿಸಿಯಾದ ಸ್ವಾದಿಷ್ಠ ಭರಿತ ತಿಂಡಿಯೊಂದಿಗೆ ಹಾಲು ಸೇವಿಸಿದರು. ಕುರಾನಿ, ಎಸ್.ಎಸ್.ಭಟ್, ಡಾ. ಸುನೀಲ್, ಪುನೀತಾ ಹಾಗೂ ಕೌಸಲ್ಯ ಸೇರಿದಂತೆ ಇತರೆ ಶಿಕ್ಷಕರು ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ತರಗತಿ ನಡೆಸಿಕೊಟ್ಟರು, ತರಗತಿಯಲ್ಲಿ ಭಾಗಿಯಾಗಿ ಪಾಠ, ಪ್ರವಚನಗಳನ್ನು ಅಭ್ಯಾಸ ಮಾಡಿದರು. ಮಕ್ಕಳಿಗೆ ಬೇಕಾದ ಅಗತ್ಯ ಪಠ್ಯ ಪರಿಕರಗಳನ್ನು ಎಸ್. ಬಸವರಾಜು ಅವರೆ ಕಲ್ಪಿಸಿಕೊಟ್ಟ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದರು.

ಬಳಿಕ ಅನಾನಸ್, ಮಾವಿನಹಣ್ಣು, ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣುಗಳನ್ನು ಸೇವಿಸಿದ ಮಕ್ಕಳು, ದಣಿವಾರಿಸಿಕೊಂಡರು. ಆ ಬಳಿಕ ಕರಾಟೆ, ಚೆಸ್, ಚಿತ್ರಕಲೆ, ಕ್ರಾಫ್ಟ್, ನೃತ್ಯ, ಹಾಡು ಗಾರಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಖುಷಿ ಪಟ್ಟರು. ವಿಶ್ವ ಮತ್ತು ತಂಡ ನೃತ್ಯ ಹಾಗೂ ಹಾಡುಗಾರಿಕೆಯಲ್ಲಿ ತರಬೇತಿ ನೀಡಿದರೆ, ಕಿರಣ್ ಅವರು ಬಣ್ಣ ಹಚ್ಚುವುದನ್ನು ಹೇಳಿಕೊಟ್ಟರು, ಮಾನವೀಕರ್, ಕರಾಟೆ ಹೇಳಿಕೊಟ್ಟರೆ, ಗಗನ ಚೆಸ್ ಹೇಳಿಕೊಟ್ಟರು.

ಬಳಕ ಬಿಸಿ, ಬಿಸಿ ರಾಗಿ ಮುದ್ದೆ, ಚಪಾತಿ, ಅನ್ನ, ಸಾಂಬರ್, ಮಜ್ಜಿಗೆ, ತರಕಾರಿ ಸಲಾಡ್ ಸೇವನೆ ಮಾಡಿದರು.

ಬಳಿಕ ಬಸವಮಾರ್ಗದ ಬಸ್ ಮೂಲಕ ಸ್ವಿಮ್ಮಿಂಗ್ ಪೂಲ್ ಗೆ ತೆರಳಿದ ಮಕ್ಕಳು ಗಂಟೆ ಗಟ್ಟಲೆಗಳ ನೀರಿನಲ್ಲಿ ಆಟವಾಡಿ ಎಂಜಾಯ್ ಮಾಡಿದರು. ಈಜು ಕಲಿತು ಖುಷಿಪಟ್ಟರು.

ಅಲ್ಲಿಂದ ಬಂದ ಬಳಿಕ ಮಕ್ಕಳಿಗೆ ಸ್ಕ್ಯಾಕ್ಸ್ ನೀಡಲಾಯಿತು. ಪಾನಿಪುರಿ, ಸಮೋಸ, ಗುಲ್ಕನ್ ಬನ್ ಅನ್ನು ಬಾಯಿ ಚಪ್ಪರಿಸಿ ತಿಂದ ಮಕ್ಕಳು ಟೆಸ್ಟ್ ಗೆ ಮನಸೋತರು.

ಬಳಿಕ ಆಟವಾಡಿ, ನಕ್ಕು, ನಲಿದರು, ಸ್ವಚ್ಚವಾದ ಬಳಿಕ ಪೂಜೆಯಲ್ಲಿ ಪಾಲ್ಗೊಂಡ ಮಕ್ಕಳು, 20 ನಿಮಿಷ ಧ್ಯಾನ ಮಾಡಿ ಮನಸ್ಸನ್ನು ಹಗುರವನ್ನಾಗಿ ಮಾಡಿಕೊಂಡರು.

ಪ್ರಸಾದ ಸ್ವೀಕರಿಸಿದ ಬಳಿಕ, ಊಟ ಮಾಡಿದ ವಿದ್ಯಾರ್ಥಿಗಳು, ಅನ್ನ, ಮುದ್ದೆ, ಸಂಬಾರ್, ಪಲ್ಯ, ತರಕಾರಿ ಸಲಾಡ್ ಸೇವಿಸಿದರು.
ಮಧು ಮತ್ತು ಶರತ್ ತಂಡ ನಡೆಸಿಕೊಟ್ಟ ಮನೋರಂಜನಾ ಕಾರ್ಯಕ್ರಮಕ್ಕೆ ಮನಸೋತ ಮಕ್ಕಳು, ಹಾಡು, ನೃತ್ಯಕ್ಕೆ ಹೆಜ್ಜೆಗೆ ಹೆಜ್ಜೆ ಹಾಕಿ, ಸಂಭ್ರಮಿಸಿದರು. ಬಳಿಕ ಹಾಲು, ಮೊಟ್ಟೆ ಸೇವಿಸಿ ಮಕ್ಕಳು ನಿದ್ರೆಗೆ ಜಾರಿದರು.
ಎಸ್. ಬಸವರಾಜು ಅವರು ಬೆಳಗ್ಗೆ 5 ರಿಂದ ರಾತ್ರಿ 10 ರ ವರೆಗೂ ಮಕ್ಕಳ ಜೊತೆಗೆ ಇದ್ದು, ಅವರ ಬೇಕು, ಬೇಡಗಳನ್ನು ನೋಡಿಕೊಂಡು ಪ್ರೀತಿ, ವಿಶ್ವಾಸ ದಿಂದ ಮಕ್ಕಳ ಮೊಗದಲ್ಲಿ ನಗು ತರಿಸಿದರು.