ಶ್ರೀಬಸವೇಶ್ವರ ಚಿತ್ರಮಂದಿರಕ್ಕೆ ಸಿಟಿ ಲೈಟ್ಸ್  ಚಿತ್ರ ತಂಡ ಭೇಟಿ, ಅಭಿಮಾನಿಗಳ ಸಂಭ್ರಮ

  • ಡೈಲಾಗ್ ಹೊಡೆದು ಅಭಿಮಾನಿಗಳ ಹುರಿದುಂಬಿಸಿದ ದುನಿಯಾ ವಿಜಯ್,  ಸೆಲ್ಪಿ ತೆಗೆದುಕೊಳ್ಳುಲು ಮುಗಿಬಿದ್ದ ಅಭಿಮಾನಿಗಳು,  ಅಭಿಮಾನಿಗಳ ನಿಯಂತ್ರಿಸಲು ಪೊಲೀಸರ ಹರಸಾಹಸ

ಚಾಮರಾಜನಗರ:  ಸಿಟಿ ಲೈಟ್ಸ್ ಚಿತ್ರತಂಡ ನಗರದ ಶ್ರೀಬಸವೇಶ್ವರ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಮೆಚ್ಚುಗೆ ಮಾತುಗಳನ್ನು ಹಾಡಿ ಹುರಿದುಂಬಿಸಿತು.

ದುನಿಯಾ ವಿಜಯ್ ನಿರ್ದೇಶನದಲ್ಲಿ, ವಿನಯ್ ರಾಜ್‌ಕುಮಾರ್ ಮತ್ತು ಮೋನಿಶಾ ವಿಜಯಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 2026ರ ಕನ್ನಡ ಚಲನಚಿತ್ರವಾಗಿದ್ದು,  ಚಿತ್ರದ ದುನಿಯಾ ವಿಜಯ್, ನಟ ವಿನಯ್ ರಾಜ್‌ಕುಮಾರ್, ‌ನಟಿ ಮೋನಿಶಾ ವಿಜಯಕುಮಾರ್ ಇತರರು ಭೇಟಿ ನೀಡಿದ್ದರು. ಅವರನ್ನು ನೋಡಲು ಅಭಿಮಾನಿಗಳ ದಂಡೇ ಮುಗಿಬಿದ್ದಿತು.  

ದುನಿಯಾ ವಿಜಯ್ ಡೈಲಾಗ್ ಹೊಡೆದು, ಅಭಿಮಾನಿಗಳು ನಮ್ಮಹೃದಯದಲ್ಲಿ ನೆಲೆಸಿದ್ದೀರಿ ಎಂದು ಅಭಿಮಾನಿಗಳತ್ತ ಕೈಬಿಸಿ ಹುರಿದುಂಬಿಸಿದರು.  ನಟ ವಿನಯ್ ಕುಮಾರ್, ನಟಿ ಮೋನಿಶಾ ಅಭಿಮಾನಿಗಳತ್ತ ಕೈಬಿಸಿ ಧ‌ನ್ಯವಾದ ಹೇಳಿದರು.

ಅಭಿಮಾನಿಗಳು ಜೈಕಾರದ ಘೋಷಣೆ ಕೂಗಿ ಚಿತ್ರದ ತಂಡಕ್ಕೆ ಪುಷ್ಷವೃಷ್ಟಿಯೊಂದಿಗೆ ಸ್ವಾಗತಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚಿತ್ರಮಂದಿರ ಮಾಲೀಕ ಮಾದೇಶ್ , ದುನಿಯಾ ವಿಜಯ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಗೌತಮ್, ಉಪಾಧ್ಯಕ್ಷ ರಘು, ಅಕ್ಷಯ್, ಸ್ವಾಮಿ, ಪ್ರಶಾಂತ್, ಪ್ರಕಾಶ್, ಬಾಬು, ಮೋಹನ್ ನಗು, ನಂದನ್, ಚೆರನ್,ಹೇಮಂತ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *