ಚಾಮರಾಜನಗರ : ತಾಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಎ.ಎಂ.ಮಹೇಶ್ ಪ್ರಭು ಮತ್ತು ತಂಡವನ್ನು ಗೆಲ್ಲಿಸಿಕೊಡಬೇಕು ಎಂದು ಕರ್ನಾಟಕ ರೈತ ಸಂಘ, ವಿಶ್ವ ರೈತ ಸಂಘಟನೆಯ ಸದಸ್ಯ ಹೆಗ್ಗವಾಡಿಪುರ ಮಹೇಶ್ ಕುಮಾರ್ ಸಂಘದ ಸದಸ್ಯರಲ್ಲಿ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜು. 19 ರಂದು ನಡೆಯುವ ಚುನಾವಣೆಯಲ್ಲಿ ವಿಶ್ವರೈತ ನಾಯಕರು, ವಿಶ್ವಚೇತನ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಸಿದ್ದಾಂತವನ್ನು ಚಾಚುತಪ್ಪದೆ ಪಾಲಿಸುತ್ತಿರುವ ಎ.ಎಂ.ಮಹೇಶ್ ಪ್ರಭು ಅವರು ಸಂಕಷ್ಟದಲ್ಲಿರುವ ರೈತರಿಗೆ ಏನಾದರೂ ಮಾಡಬೇಕು ಎಂದು ಯೋಚನೆ ಮಾಡಿ ತೆಂಗು ಬೆಳೆಗಾರರ ಸಂಘ ಮಾಡಿ 50 ಸಾವಿರ ತೆಂಗಿನ ಕಾಯಿ ಅರೆಯುವಂತ ಒಂದು ಸಂಸ್ಕರಣಾ ಘಟಕ ಮಾಡಿದರು. ಆದರಿಂದ ರೈತ ಭಾಂದವರಿಗೆ ಒಳ್ಳೆಯ ಲಾಭ ದೊರೆತಿದೆ. ಇಂತಹ ಕಾರ್ಖಾನೆಯು ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಸರ್ಕಾರದ ಅನುದಾನ ತಂದು ಎಲ್ಲ ಷೇರುದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ರೈತಭಾಂದವರಿಗೆ ಒಳ್ಳೆಯ ಕೆಲಸ ಮಾಡಲಿದ್ದಾರೆ. ಆಗಾಗಿ ಸಂಘದ ಸದಸ್ಯ ತಮ್ಮ ಅಮೂಲ್ಯವಾದ ಮತವನ್ನು ಅವರಿಗೆ ಮತ್ತು ಅವರ ತಂಡಕ್ಕೆ ನೀಡಿ ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು.
ಬಿಡದಿ ಟೌನ್‌ಶಿಫ್ ಯೋಜನೆ ಕೈ ಬಿಡಲು ಆಗ್ರಹ.: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ಯೋಜನೆ ಕೈಬಿಡಬೇಕು ಎಂದು ಮಹೇಶ್‌ಕುಮಾರ್ ಒತ್ತಾಯಿಸಿದರು.
ರೈತರ ಭೂಮಿಗೆ ನುಗ್ಗಿ ರೈತರ ಮೇಲೆ ಎಫ್‌ಐಆರ್ ದಾಖಲು ಮಾಡುವುದು ಎಷ್ಟು ಸರಿ? ಪೋಲಿಸರು ಇರುವುದು ಮಾಡುವುದು ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳ ರಕ್ಷಣೆಗೆ ಮಾತ್ರವೇ? ಕೂಡಲೇ ಬಿಡದಿ ಶಿಪ್ ಯೋಜನೆ ಕೈ ಬಿಡಬೇಕು. ಇಲ್ಲದಿದ್ದರೆ ದೊಡ್ಡ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.