- ಜಿಲ್ಲಾ ಮಟ್ಟದ ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗು ಚರ್ಚಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಚಾಮರಾಜನಗರ: ಸಹಕಾರ ಕ್ಷೇತ್ರ ಬಹಳ ವಿಸ್ತಾರವಾಗಿ ಬೆಳೆದಿದ್ದು, ಹಳ್ಳಿಗಳ ಅಭಿವೃದ್ದಿಯಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಅದ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜು0ಡಪ್ರಸಾದ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಚಾಮರಾಜನಗರ ಜಿಲ್ಲಾ ಸಹಕಾರ ಯೂನಿಯನ್, ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಕಾರ ಇಲಾಖೆಯ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗು ಚರ್ಚಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶ ಹಳ್ಳಿಗಳಿಂದ ಕೂಡಿದ ರೈತಾಪಿ ವರ್ಗವನ್ನು ಹೊಂದಿರುವ ದೊಡ್ಡ ರಾಷ್ಟç. ರೈತರೇ ಈ ದೇಶದ ಬೆನ್ನೆಲುಬು. ಸರ್ಕಾರಗಳು ಮಾಡದಂತಹ ಕೆಲಸವನ್ನು ಸಹಕಾರಿ ಕ್ಷೇತ್ರಗಳಲ್ಲಿ ನಮ್ಮ ಹಿರಿಯರು ಮತ್ತು ಸಹಕಾರಿ ದುರೀಣರು ಮಾಡಿ ತೋರಿಸಿದ್ದಾರೆ. ಸಹಕಾರ ಕ್ಷೇತ್ರ ಬೆಳೆದದಷ್ಟು ಈ ಪ್ರದೇಶದ ಜನರು, ಆ ವೃತ್ತಿಯಲ್ಲಿರುವವರ ಆರ್ಥಿಕ ಅಭಿವೃದ್ದಿ ಹೊಂದುತ್ತಾರೆ. ಇದಕ್ಕೆ ಉತ್ತಮ ನಿದರ್ಶನ ನಮ್ಮ ಸಹಕಾರ ಹಾಲು ಮಹಾಮಂಡಲ ನಮ್ಮ ಕಣ್ಮುಂದೆ ಇದೆ ಎಂದರು.
ಹೀಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಸಹಕಾರ ಕ್ಷೇತ್ರದ ಬಗ್ಗೆ ಒಲವು ಹೊಂದಬೇಕು. ಸಹಕಾರ ಸಂಘ ಇಲ್ಲದ ಗ್ರಾಮವನ್ನು ನೋಡುವುದೇ ಕಷ್ಟವಾಗಿದೆ. ಸಣ್ಣ ಹಳ್ಳಿ ಇದ್ದರು ಅಲ್ಲಿ ಒಂದು ಸಂಘವನ್ನು ನೋಡುತ್ತಿದೆ. ದೇವಸ್ಥಾನ, ಶಾಲೆ ಬಿಟ್ಟರೆ ಇನ್ನು ಸಹಕಾರ ಸಂಘಗಳು ನಮ್ಮೆಲ್ಲರ ಪ್ರಗತಿಗೆ ದುಡಿಯುತ್ತಿವೆ. ಇಂದಿನ ಚರ್ಚೆ ಸ್ಪರ್ಧೆ ಹಾಗು ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ನಾನಾ ತಾಲೂಕಿನಿಂದ ವಿದ್ಯಾರ್ಥಿಗಳು ಬಹಳ ಉತ್ಸಾಹ ದಿಂದ ಬಂದಿದ್ದೀರಿ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ. ಗೆದ್ದವರು ಬೀಗದೇ ಸೋತವರು ಕುಗ್ಗದೇ ಮುನ್ನಡೆಯಿರಿ, ಸಹಕಾರ ಕ್ಷೇತ್ರದ ಬಗ್ಗೆ ಇನ್ನು ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಳ್ಳಿ ಎಂದು ನಂಜು0ಡಪ್ರಸಾದ್ ಸಲಹೆ ನೀಡಿದರು.
ನಿರ್ದೇಶಕರಾದ ಎಚ್.ಎಂ. ಬಸವಣ್ಣ, ಮುದ್ದಯ್ಯ ಮಾತನಾಡಿ, ಇಲ್ಲಿ ಗೆದ್ದಿರುವವರು ರಾಜ್ಯದ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೀರಿ. ಇನ್ನು ಹೆಚ್ಚಿನ ಜ್ಞಾನವನ್ನು ಪಡೆದುಕೊಂಡು ಜಿಲ್ಲೆಯ ಕೀರ್ತಿ ಪಾತೆಕೆಯನ್ನು ಹಾರಿಸಬೇಕು. ಬಡವರು ಹಾಗು ಸಮಾಜ ಸೇವೆ ಮಾಡಲು ಸಹಕಾರ ಕ್ಷೇತ್ರ ಉತ್ತಮ ಮಾರ್ಗವಾಗಿದೆ. ಪ್ರತಿ ಹಂತದಲ್ಲಿಯು ರೈತರೊಂದಿಗೆ ನೇರ ಭಾಗಿಯಾಗಲು ಸಾಧ್ಯವಿದೆ. ಸಹಕಾರ ಎಂದರೆ ಪರಸ್ಪರ ಎಲ್ಲರೊಂದಿಗೆ ಎಂಬAತೆ ಕಾಯ್ದೆ ಬಗ್ಗೆ ತಿಳಿದುಕೊಂಡು ಸಹಕಾರಿ ಕ್ಷೇತ್ರವನ್ನು ಮುನ್ನಡೆಸುವ ನಾವಿಕರಾಗಬೇಕು ಎಂದರು.
ಪ್ರಬಂಧ ಸ್ಪರ್ಧೆ : (ಪ್ರೌಢಶಾಲೆ ವಿದ್ಯಾರ್ಥಿಗಳಿಗೆ) ಹನೂರು ತಾ.ನ ರಾಮಾಪುರ ಸರ್ಕಾರಿ ಪ್ರೌಢಶಾಲೆಯ ಕೆ. ಪವಿತ್ರ(ಪ್ರಥಮ) ಚಾ.ನಗರ ತಾ.ನ ಹರದನಹಳ್ಳಿ ಪಬ್ಲಿಕ್ ಶಾಲೆಯ ಕೆ. ಹೇಮ( ದ್ವೀತಿಯ) ಯಳಂದೂರು ತಾ.ನ ಮೆಲ್ಲಹಳ್ಳಿ ಅದರ್ಶ ವಿದ್ಯಾಲಯದ ಸಿ. ರಶ್ಮಿತಾ ( ತೃತೀಯ) ಸ್ಥಾನಗಳನ್ನು ಪಡೆದುಕೊಂಡರು.
ಚರ್ಚಾ ಸ್ಪರ್ಧೆ: (ಪಿಯು ಕಾಲೇಜು ವಿದ್ಯಾರ್ಥಿಗಳಿಗೆ) ಚಾ.ನಗೆ ಜೆಎಸ್‌ಎಸ್ ಪಿಯು ಕಾಲೇಜಿನ ಜೆ. ಯಶಸ್ವಿನಿ ( ಪ್ರಥಮ ) ಗುಂಡ್ಲುಪೇಟೆ ದೊಡ್ಡಹುಂಡಿ ಪಿಯು. ಕಾಲೇಜಿನ ಎಂ. ಮಣಿಕಂಠ (ದ್ವೀತಿಯ) ಹಾಗೂ ಚಾ.ನಗರ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಐಶ್ವರ್ಯ (ತೃತೀಯ ) ಬಹುಮಾನವನ್ನು ಪಡೆದುಕೊಂಡರು. ಈ ಆರು ಮಂದಿಗೆ ಪ್ರಶಸ್ತಿ ಪತ್ರ, ಪಾರಿತೋಷಕ ಹಾಗೂ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಂ.ಎA. ಪ್ರಭುಸ್ವಾಮಿ, ತೀರ್ಪುಗಾರರಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಮಲ್ಲೇಶ್, ಮೈಸೂರಿನ ಕೆ.ಐ.ಸಿ.ಎಂ. ಪ್ರಾಂಶುಪಾಲೆ ಪಿ. ಗೀತಾ, ಜಿಲ್ಲಾ ಸಹಕಾರ ಯೂನಿಯನ್ ಸಿಇಓ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನ್, ನೌಕರರಾದ ಮಲ್ಲೇಶ್, ಕೆಂಡಗಣ್ಣಸ್ವಾಮಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಉಪನ್ಯಾಸಕರು, ಶಿಕ್ಷಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
