ಚಾಮರಾಜನಗರ: ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡ ಹಿನ್ನೆಲೆಯಲ್ಲಿ ನಗರದಲ್ಲಿ ಧ್ರುವ ಸರ್ಜಾ ಅ
ಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಶ್ರೀಬಸವೇಶ್ವರ ಚಿತ್ರಮಂದಿರದಲ್ಲಿ ದ್ರುವ ಫ್ಯಾನ್ಸ್ಅ ಯೋಸಿಯೇಷನ್ ವತಿಯಿಂದ ಅಭಿಮಾನಿಗಳು ಕೆಡಿ ಚಿತ್ರದ ಪ್ಲೆಕ್ಸ್, ಕಟೌಟ್ ಹಾಕಿ ಅಲಂಕಾರ ಮಾಡಿ ಚಿರಂಜೀವಿ ಸರ್ಜಾ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ, 2 ನಿಮಿಷಗಳ ಕಾಲ ಮೌನಾಚರಣೆ ಮಾಡಿದರು. ನಂತರ ಸಾರ್ವಜನಿಕರು ಅನ್ನಸಂತರ್ಪಣೆ ಮಾಡಿದರು.
ದ್ರುವ ಫ್ಯಾನ್ಸ್ ಅಯೋಸಿಯೇಷನ್ ಅಧ್ಯಕ್ಷ ಸುನೀಲ್, ಅರ್ಜುನ ಮಾತನಾಡಿ, ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರವು ಇಂದು ರಾಜ್ಯಾದ್ಯಂತ ತೆರೆ ಕಂಡ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಜ್ಯಾದ್ಯಂತ ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ .
ಅದೇ ರೀತಿಯಲ್ಲಿ ಚಾಮರಾಜನಗರ ದಲ್ಲೂ ಕೂಡ ಕೆಡಿ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಶ್ರೀ ಬಸವೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿ ಅಯೋಸಿಯೇಷನ್ ವತಿಯಿಂದ ಚಿರಂಜೀವಿ ಸರ್ಜಾ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ದ್ರುವ ಸರ್ಜಾ ನಟನೆಯ ಕೆಡಿ ಚಿತ್ರವು ಶತಮಾನೋತ್ಸವ ಆಚರಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಧ್ರುವ ಪ್ಯಾನ್ಸ್ ಅಯೋಸಿಯೇಷನ್ ನ ಗುರು, ಪ್ರಭು, ಮಲ್ಲು, ಮನೋಜ್, ಅರ್ಜುನ, ಮಣಿರಾಜು, ಮುರುಳಿ, ಪ್ರೇಮ್, ವಿಶ್ವ, ಇತರರು ಹಾಜರಿದ್ದರು.