ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಿ.ಎಸ್.ಆರ್.ಎನ್.ಜಿ.ಓ  ಸಭೆ

ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಸಿ.ಎಸ್.ಆರ್.ಎನ್.ಜಿ.ಓ. ವೇದಿಕೆ ಸಭೆ ಯಶಸ್ವಿಯಾಗಿ ನಡೆಯಿತು.

   ಜಿಲ್ಲೆಯ ಆದ್ಯತಾ ಅಭಿವೃದ್ಧಿ ಕ್ಷೇತ್ರಗಳೊಂದಿಗೆ ಸಿ.ಎಸ್.ಆರ್. ಇತರ ಚಟುವಟಿಕೆಗಳನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ ಸಭೆ ನಡೆಯಿತು. ಜಿಲ್ಲೆಯ ಪ್ರಮುಖ ಯೋಜನೆಗಳು ಮತ್ತು ಅಗತ್ಯತೆಗಳನ್ನು ಪ್ರಸ್ತುತಪಡಿಸಲಾಯಿತು. ಭಾಗವಹಿಸಿದ ಸಂಸ್ಥೆಗಳು ಸಹಕಾರದ ಅವಕಾಶಗಳನ್ನು ಪರಿಶೀಲಿಸಿವೆ. 

   ಸಭೆಯಲ್ಲಿ ವಿಶೇಷವಾಗಿ ಆದಿವಾಸಿ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಈಗಾಗಲೇ ನಡೆಯುತ್ತಿರುವ ಸಿ.ಎಸ್.ಆರ್ ಚಟುವಟಿಕೆಗಳ ಬಗ್ಗೆ ಅವಲೋಕಿಸಲಾಯಿತು. ಮುಂದಿನ ವರ್ಷದ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.

   ಶಾಲೆಗಳಲ್ಲಿನ ಕಲಿಕಾ ಫಲಿತಾಂಶಗಳ ಸುಧಾರಣೆ, ಶಾಲಾ ಮೂಲಸೌಕರ್ಯ ಮತ್ತು ಶೈಕ್ಷಣಿಕ ಬೆಂಬಲ, 

ದೂರ ಪ್ರದೇಶಗಳಿಗಾಗಿ ಆದಿವಾಸಿ ಬೆಳಕು ವ್ಯವಸ್ಥೆಗಳು ಕುಡಿಯುವ ನೀರಿನ ಪರಿಹಾರ, ಉದ್ಯೋಗಾವಕಾಶಗಳು ಮತ್ತು ಜೀವನೋಪಾಯ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಂಪರ್ಕಿತ ತರಬೇತಿ, ಯುವಕರಿಗೆ ಕರಿಯರ್ ಮಾರ್ಗದರ್ಶನ ನೀಡುವ ಕುರಿತು ಚರ್ಚಿಸಲಾಯಿತು.

   ಎನ್.ಜಿ.ಓ. ಮುಖ್ಯಸ್ಥರು ತಮ್ಮ ಕಾರ್ಯಪದ್ಧತಿಗಳು, ಹೊಸ ಆವಿμÁ್ಕರಗಳು ಮತ್ತು ಕ್ಷೇತ್ರಾನುಭವಗಳನ್ನು ಪ್ರಸ್ತುತಪಡಿಸಿ ಜಿಲ್ಲಾಡಳಿತ ಹಾಗೂ ಕಾಪೆರ್Çರೇಟ್ ಸಂಸ್ಥೆಗಳೊಂದಿಗೆ ಸಹಕರಿಸಲು ಆಸಕ್ತಿ ವ್ಯಕ್ತಪಡಿಸಿದರು. ಜಿಲ್ಲೆಯ ಅಗತ್ಯತೆಗಳಿಗೆ ಅನುಗುಣವಾಗಿ ವಿಶೇಷವಾಗಿ ಆದಿವಾಸಿ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಸಿ.ಎಸ್.ಆರ್ ಯೋಜನೆಗಳನ್ನು ಕೈಗೊಳ್ಳುವಂತೆ ಕಂಪನಿಗಳಿಗೆ ಪೆÇ್ರೀತ್ಸಾಹ ನೀಡಲಾಯಿತು. 

  ಸಭೆಯಲ್ಲಿ ಉದ್ದಿಮೆದಾರರು, ವಿವಿಧ ಕಂಪನಿಗಳ ಸಿ.ಎಸ್.ಆರ್. ಪ್ರತಿನಿಧಿಗಳು, ಎನ್.ಜಿ.ಒ. ಪ್ರತಿನಿಧಿಗಳು ಜಿಲ್ಲಾ ಸಿ.ಎಸ್.ಆರ್.ಸಂಯೋಜಕರಾದ ರಕ್ಷಿತಾ, ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *