ಚಾಮರಾಜನಗರ: 80 ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಕೋಡಿಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಿಂದ ಶಾಲಾಮಕ್ಕಳಿಗೆ ತಟ್ಟೆ, ಲೋಟ, ಬ್ಯಾಗ್, ಡ್ರಮ್, ಸೈಡ್‍ಡ್ರಮ್ ವಿತರಣೆಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾಮುಖ್ಯಶಿಕ್ಷಕಿ ರತ್ನಮ್ಮ ಮಾತನಾಡಿ, ಸರ್ಕಾರಿಶಾಲಾಮಕ್ಕಳ ಓದಿಗೆ ಪೂರಕವಾಗಿಗ್ರಾಮದ ದಾನಿಗಳು ಅಗತ್ಯ ಸಾಮಾಗ್ರಿ ವಿತರಿಸಿರುವುದು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ, ಮಕ್ಕಳು ಇಂತಹ ಅವಕಾóಶಗಳನ್ನು ಸದ್ಭಳಕೆ ಮಾಡಿಕೊಂಡು, ಸಮಾಜದಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ದಾನಿಗಳಾದ ಕಾಂಗ್ರೆಸ್ ಮುಖಂಡರಾದ ಕೋಡಿಮೋಳೆ ಪ್ರಕಾಶ್, ಎಂಪಿಸಿಎಸ್ ಅಧ್ಯಕ್ಷಗೋವಿಂದಶೆಟ್ಟಿ, ಗ್ರಾಪಂಉಪಾಧ್ಯಕ್ಷನಾಗನಾಯಕ, ಚಿಕ್ಕಣ್ಣ, ಇನ್ಸ್‍ಪೆಕ್ಟರ್ ಶಿವನಂಜಶೆಟ್ಟಿ, ಎಸ್‍ಡಿಎಂಸಿ ಅಧ್ಯಕ್ಷ ಪುಟ್ಟರಾಜು, ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರು, ಶಾಲಾಸಹಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
