ಬಸವಣ್ಣನವರ ವಚನಕ್ರಾಂತಿಗೆ ಹಡಪದ ಅಪ್ಪಣ್ಣನವರ ಕೊಡುಗೆ ಅಪಾರ : ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ

ಚಾಮರಾಜನಗರ: ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ಆರಂಭಿಸಿದ ವಚನ ಕ್ರಾಂತಿಗೆ ಶಿವಶರಣ ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ತಿಳಿಸಿದರು.

   ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ ‘ಹಡಪದ ಅಪ್ಪಣ್ಣ’ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಸಮಾಜ ಸುಧಾರಣೆಯಲ್ಲಿ 12ನೇ ಶತಮಾನ ಸುವರ್ಣಯುಗವಾಗಿದೆ. ಧರ್ಮ, ದೇವರುಗಳೆಂದರೇ ಅರ್ಥವಾಗದಿದ್ದ ಅಂದಿನ ಕಾಲದಲ್ಲಿ ಅನುಭವ ಮಂಟಪದ ಬಸವಾದಿ ಶಿವಶರಣರು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಸರಳ ವಚನಗಳ ರಚನೆ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ವಚನಕ್ರಾಂತಿಯನ್ನೇ ಉಂಟುಮಾಡಿದರು. 250 ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣನವರು ಸಮಾಜದಲ್ಲಿ ತಾರತಮ್ಯ, ಅಸಮಾನತೆ, ಜಾತೀಯತೆ, ಅಸ್ಪøಶ್ಯತೆ ವಿರುದ್ಧ ಹೋರಾಡಿದರು. ಬಸವಣ್ಣನವರೊಂದಿಗೆ ಕಾಯಕ ತತ್ವದ ಮಹತ್ವ ಸಾರಿದರು. ಅವರ ಆದರ್ಶ ನಡೆಯನ್ನು ನಾವೆಲ್ಲರೂ ಅಳವಡಿಸಿಕೊಂಡು ಅನುಸರಿಸಬೇಕು ಎಂದರು.

   ಕ್ಷೌರಿಕ ಅಥವಾ ಎಲೆಅಡಿಕೆ ಡಬ್ಬಿ ತಯಾರಿಸುವ ವೃತ್ತಿಯನ್ನೇ ಕಾಯಕ ಮಾಡಿಕೊಂಡಿದ್ದ ಸವಿತಾ ಸಮಾಜಕ್ಕೆ ಸೇರಿದ ಹಡಪದ ಅಪ್ಪಣ್ಣನವರು ಅನುಭವಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದರು. ಆಗಿನ ಕಾಲದಲ್ಲಿ ಕ್ಷೌರಿಕರ ಮುಖ ನೋಡಿದರೇ ಅಪಶಕುನ ಎಂಬುದು ಚಾಲ್ತಿಯಲ್ಲಿತ್ತು. ಈ ಅನಿಷ್ಠ ಪದ್ದತಿಯನ್ನು ಕಿತ್ತೊಗೆಯಲು ಬಸವಣ್ಣನವರು ಅನುಭವ ಮಂಟಪದ ಹೆಬ್ಬಾಗಿಲಿನಲ್ಲಿಯೇ ಅಪ್ಪಣ್ಣನವರನ್ನು ನಿಯೋಜಿಸಿದ್ದರು. ಅನುಭವ ಮಂಟಪ ಪ್ರವೇಶಿಸುವ ಯಾವುದೇ ವ್ಯಕ್ತಿ ಹಡಪದ ಅಪ್ಪಣ್ಣನನವರ ಮುಖ ನೋಡಿಯೇ ಒಳಬರಬೇಕಿತ್ತು. ಸಮಸಮಾಜಕ್ಕಾಗಿ ಬಸವಣ್ಣನವರೊಂದಿಗೆ ಅವಿರತವಾಗಿ ದುಡಿದ ಹಡಪದ ಅಪ್ಪಣ್ಣ ಅವರು ಚಿರಸ್ಮರಣೀಯರಾಗಿದ್ದಾರೆ ಎಂದು ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ತಿಳಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ಅನುಭವ ಮಂಟಪದ ಶ್ರೇಷ್ಠ ವಚನಕಾರರು ಹಾಗೂ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರು ಬಹಳ ಪ್ರಮುಖರಾಗಿದ್ದರೆ. 12ನೇ ಶತಮಾನದ ಹಿಂದಿನ ರಾಜಪ್ರಭುತ್ವದ ಅಂದಿನ ಸಮಾಜ ಅಸಮಾನತೆ, ಶೋಷಣೆಯಿಂದ ಕೂಡಿತ್ತು. ಮೂಕಪ್ರೇಕ್ಷಕರಾಗಿದ್ದ ಜನಸಾಮಾನ್ಯರನ್ನು ತಿದ್ದಲು ವಚನ ಚಳವಳಿ ಹುಟ್ಟಿಕೊಂಡಿತು. ದಯೆಯೇ ಧರ್ಮದ ಮೂಲವಯ್ಯ, ದೇವರು, ಧರ್ಮದ ಸಾರವನ್ನು ಬಹಳ ಸರಳವಾಗಿ ವಚನಗಳ ಮೂಲಕ ತಿಳಿಸಿಕೊಟ್ಟು ಜನಜಾಗೃತಿ ಮೂಡಿಸಿದರು. ಕಾಯಕವೇ ಕೈಲಾಸ, ಯಾವುದೇ ವೃತ್ತಿ ಮೇಲಲ್ಲ, ಕೀಳೂ ಅಲ್ಲ ಎಂದು ಸಾರಿದರು. ನವಸಮಾಜ ನಿರ್ಮಾಣದಲ್ಲಿ ಬಸವಣ್ಣನವರೊಂದಿಗೆ ಶ್ರಮಿಸಿದ ಮಹನೀಯರಲ್ಲಿ ಹಡಪದ ಅಪ್ಪಣ್ಣನವರು ಆದರ್ಶಪ್ರಾಯರಾಗಿದ್ದಾರೆ ಎಂದರು.

   ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *