ಜಿಲ್ಲಾ ಕುಂಬಾರರ ಸಂಘದಿಂದ ಸರ್ಜಜ್ಞ ಜಯಂತಿ, ಪ್ರತಿಭಾ ಪುರಸ್ಕಾರ ಸಮಾರಂಭ
ಚಾಮರಾಜನಗರ: ಕುಂಬಾರ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಕುಂಬಾರರ ಸಂಘದ ವತಿಯಿಂದ ಆಯೋಜಿಸಿದ್ದ ಸರ್ವಜ್ಞ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವಜ್ಞರು ಮಹಾನ್ ಶ್ರೇಷ್ಠ ಕವಿಗಳಾಗಿದ್ದು, ಅವರು ತಮ್ಮ ಸರಳವಾಗಿ ವಚನಗಳನ್ನು ರಚಿಸುವ ಮೂಲಕ ಜೀವನದ ಮೌಲ್ಯಗಳನ್ನು ಜಗತ್ತಿಗೆ ಸಾರಿದ್ದಾರೆ. ಅವರ ವಚನಗಳ ಸಾರವನ್ನು ಪ್ರತಿಯೊಬ್ಬರು ಅರಿತು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ಈ ಸಮುದಾಯ ಹಲವು ವರ್ಷಗಳ ಬೇಡಿಕೆಯಾಗಿರುವ ಸಮುದಾಯ ಭವನಕ್ಕೆ ಜಿಲ್ಲಾ ಕೇಂದ್ರದಲ್ಲಿ ಜಾಗದ ಕೊರತೆ ಇದೆ. ನಗರದ ಹೊರವಲಯದಲ್ಲಿ ನಿವೇಶನ ಹಂಚಲು 52 ಎಕೆರೆ ಜಮೀನು ಖರೀದಿ ಮಾಡಲಾಗಿದೆ. ಅಲ್ಲಿ ಕುಂಬಾರ, ಮಡಿವಾಳ ಸೇರಿದಂತೆ ಇತರೆ ಹಿಂದುಳಿದ ಸಮುದಾಯಗಳಿಗೆ ಭವನ ನಿರ್ಮಿಸಲು ಜಾಗ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಮದ್ದೂರು ವಿರೂಪಾಕ್ಷ ಮಾತನಾಡಿ, ಸಮುದಾಯ ಶಕ್ತಿ ಪ್ರದರ್ಶನ ಮಾಡುವುದಕ್ಕಾಗಿ ಈ ಕಾರ್ಯಕ್ರಮ ಅಯೋಜಿಸಲಾಗಿದೆ.ನಮ್ಮ ಸಮುದಾಯ ನೆಹರು ಕಾಲದಿಂದಲೂ ಕಾಂಗ್ರೆಸ್ ಬೆಂಬಲಿಸಿಕೊಂಡು ಬರಲಾಗಿದೆ. ಇನ್ನೂ ಒಂದು ವಿಧಾನಪರಿಷತ್ ಸ್ಥಾನ ನೀಡಿಲ್ಲ. ಒಂದು ತಿಂಗಳೊಳಗೆ 3 ಸ್ಥಾನ ನೀಡಬೇಕು ಇಲ್ಲದಿದ್ದರೆ ಕಾಂಗ್ರೆಸ್ ನಿಂದ ದೂರವಿರಬೇಕಾಗುತ್ತದೆ ಎಂದು ಎಚ್ಚರಿಸಿದರು
ಶ್ರೀಸುತ್ತೂರು ಕ್ಷೇತ್ರ ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ,ಬೆಳಗಾವಿ ಅಥಣಿ ಕುಂಬಾರರ ಗುರುಪೀಠ ಶ್ರೀಬಸವ ಕುಂಬಾರ ಗುಂಡಯ್ಯಸ್ವಾಮಿ, ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಬಸವಮೂರ್ತಿ ಗುಂಡಯ್ಯಸ್ವಾಮಿಜೀ ಆರ್ಶೀವಚನ ನೀಡಿದರು..
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಶರಣಕುಂಬಾರ ಗುಂಡಯ್ಯರವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿದರು., ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಸಂತಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು..
ಸಚಿವರಾದ ಪ್ರೋ.ಎ.ಲಕ್ಷ್ಮೀಸಾಗರ್ ಭಾವಚಿತ್ರಕ್ಕೆ ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶ್ರೀನಿವಾನ್‌ವೇಲು ಪುಷ್ಪಾರ್ಚನೆ ಮಾಡಿ ಮಾತನಾಡಿದರು.. ತಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಾಗಭೂಷಣ್, ವಿಧಾನ ಪರಿಷತ್ ನಿವೃತ್ತ ಕಾರ್ಯದರ್ಶಿ ನಿರ್ಮಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಕೆ.ಪುಟ್ಟಸ್ವಾಮಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.. ಸಾಹಿತಿ ಶಿವಣ್ಣ ಇಂದುವಾಡಿ ಸರ್ವಜ್ಞರ ಬಗ್ಗೆ ಉಪನ್ಯಾಸ ನೀಡಿದರು.
ಮಾಜಿ ಅಡ್ವಕೇಟ್ ಜನರಲ್ ಎನ್.ದೇವದಾಸ್, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ರಾಜುಕುಂಬಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕುಂಬಾರ ಸಂಘ ಅಧ್ಯಕ್ಷ ಬಾಬುರಾವ್ ಕುಂಬಾರ, ಬೆಂಗಳೂರು ಕುಂಬಾರ ಸಂಘದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಸರ್ಕಾರಿ ನೌಕರರ ಕುಂಬಾರರ ಸಂಘ ಅಧ್ಯಕ್ಷ ಡಾ.ಎಂ.ಮಹೇಶ್ ,ಜಿಲ್ಲಾ ಕುಂಬಾರರ ಕೈಗಾರಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷ ರಮೇಶ್ ಹೆಗ್ಗೋಠಾರ, ಮಲ್ಲಯ್ಯನಪುರ ಶಿವಣ್ಣ, ತಾಳವಾಡಿ ಪಿರ್ಕಾ ರಾಮಚಂದ್ರ, ಮಸಣಾಪುರ ಶ್ರೀನಿವಾಸ, ನಾಗವಳ್ಳಿ ಚಾಮರಾಜು, ಕೃಷ್ಣಪ್ಪ ಮಲ್ಲೂಪುರ, ಅಮಚವಾಡಿ ರಾಜಣ್ಣ, ಕೊಳ್ಳೇಗಾಲ ಲಿಂಗರಾಜು ಹಾಜರಿದ್ದರು
