
ಚಾಮರಾಜನಗರ: ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ಅವರ ಪುತ್ರ ಹೇಮಂತ್ ಕುಮಾರ್ (22) ಇಂದು ಸಂಜೆ 5 ಗಂಟೆ ವೇಳೆಯಲ್ಲಿ ನಿಧನರಾಗಿದ್ದಾರೆ.
ಜುಲೈ 19 ರಂದು ಅಪಘಾತದಲ್ಲಿ ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೇಮಂತ್ ಕುಮಾರ್ ಇಂದು ಸಂಜೆ 5 ಗಂಟೆ ವೇಳೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ, ತಾಯಿ, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶನಿವಾರ ನಗರದ ಚನ್ನಿಪುರದಮೋಳೆ ಬಡಾವಣೆಯಲ್ಲಿರುವ ಉಪ್ಪಾರ ಸಮುದಾಯದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
