- ಮಾಜಿ ಶಾಸಕ ಎಂ.ಸಿ.ಬಸಪ್ಪ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ಕಾರ್ಯಕ್ರಮ
- ಪುಣಜನೂರು ದೊರೆಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ
ಚಾಮರಾಜನಗರ: ಮಾಜಿ ಶಾಸಕ ಎಂ.ಸಿ. ಬಸಪ್ಪ ಅವರು ರಾಜಕಾರಣಿಗಿಂತ ಉತ್ತಮ ಸಮಾಜ ಸೇವಕರಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದರು. ಅವರ ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆ ಸೇವೆ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮೀಜಿ ತಿಳಿಸಿದರು.
ನಗರದ ಜೆಎಸ್‌ಎಸ್ ಸೆಮಿರ್‌ಹಾಲ್‌ನಲ್ಲಿ ಚಾಮರಾಜನಗರ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ವತಿಯಿಂದ ನಡೆದ ಮಾಜಿ ಶಾಸಕರಾದ ಎಂ.ಸಿ.ಬಸಪ್ಪ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಎಂ.ಸಿ. ಬಸಪ್ಪ ಅವರು ಎರಡು ಬಾರಿ ಶಾಸಕರಾಗಿ ಜನಾನುರಾಗಿಯಾಗಿದ್ದರು. ಸಾಹುಕಾರ ಕುಟುಂಬದಿAದ ಬಂದವರಾಗಿದ್ದರು ಸಹ ಸರಳತೆಯಿಂದ ಜೀವನ ನಡೆಸಿದವರು. ಬಸ್‌ನಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ಸದಾ ಜನರೊಂದಿಗಿನ ಅವರ ಸಂಪರ್ಕ ಮತ್ತು ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಮೈಸೂರಿಗೆ ಬಂದರೆ ಶ್ರೀಮಠಕ್ಕೆ ಬಂದು ರಾಜೇಂದ್ರಶ್ರೀಗಳಿಗೆ ವರದಿಯನ್ನು ಒಪ್ಪಿಸುವ ಪರಿಪಾಠವನ್ನು ಹೊಂದಿದ್ದರು. ಮಠದ ಬೆಳವಣಿಗೆಯಲ್ಲಿ ಮತ್ತು ಹಿರಿಯ ಶ್ರೀಗಳಾದ ರಾಜೇಂದ್ರಶ್ರೀಗಳಿಗೆ ಅತ್ಯಪ್ತರಾಗಿದ್ದರು ಬಸಪ್ಪನವರು. ಗ್ರಾಮೀಣ ಜನರು ಬದುಕ ಬವಣೆಯಲ್ಲಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಬಸಪ್ಪ ಅವರು ರೇಷ್ಮೆ ಕೃಷಿಯನ್ನು ಈ ಭಾಗದಲ್ಲಿ ಅಭಿವೃದ್ದಿಪಡಿಸಲು ಶ್ರಮ ವಹಿಸಿದರು. ಸದನದಲ್ಲಿ ರೇಷ್ಮೆ ಕೃಷಿಯ ಬಗ್ಗೆ 7 ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು ಎಂದರೆ ಅವರಿಗೆ ಕೃಷಿ ಮತ್ತು ರೈತರ ಬಗ್ಗೆ ಇದ್ದ ಪ್ರೀತಿ ಕಾರಣವಾಗಿತ್ತು. ಅವರು ನಿಧನದ ಬಳಿಕವು ಜನರು ಅವರನ್ನು ನೆನಪಿಸಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ ಎಂದರು.
ೆಎಂ.ಸಿ. ಬಸಪ್ಪ ಅವರ ಸಮಾಜ ಸೇವಾ ಪ್ರಶಸ್ತಿ ಪಡೆಯುತ್ತಿರುವ ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರು ಬಸಪ್ಪ ಅವರ ಅನುಯಾಯಿ ಅವರಂತೆ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡವರು. ಗಾಂಧಿವಾದಿಗಳಾಗಿ, ಪರಿಸರ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರಿಗೆ ಪ್ರಶಸ್ತಿ ಲಭಿಸಿರುವುದು ಸಂತಸವಾಗಿದೆ. ಅವರ ದತ್ತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಹಾಗು ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತç ವಿತರಣೆ ಮಾಡುತ್ತಿರುವ ಅವರ ಕುಟುಂಬದವರ ಸೇವೆ ಕಾರ್ಯಗಳು ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದೆ ಎಂದರು.
ಪಡಗೂರು ಮಠದ ಶ್ರೀ ಶಿವಲಿಂಗೇAದ್ರಸ್ವಾಮಿಗಳು ಮಾತನಾಡಿ, ಎಂ.ಸಿ. ಬಸಪ್ಪ ಎಂದರೆ ನಮ್ಮ ಭಾಗದಲ್ಲಿ ಬಹಳಷ್ಟು ಮಂದಿಗೆ ಪರಿಚಿತರು. ಅವರಿಂದ ಒಂದಲ್ಲ ಒಂದು ಸೇವೆ ಪಡೆದುಕೊಂಡರು ಇನ್ನು ಸಹ ಅವರ ಗುಣಗಾಣ ಮಾಡುತ್ತಾರೆ. ಗುರುಸ್ವಾಮಿ ಶಿಕ್ಷಕ ವೃತ್ತಿಗೆ ನೇಮಕವಾಗಿದ್ದರು. ಮೈಸೂರಿನ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ನೇಮಕಾತಿ ಪತ್ರ ಕೊಡದೆ ಸತಾಯಿಸುತ್ತಿದ್ದರು. ಅವರಿಗೆ ನೀನು ಎಂ.ಸಿ. ಬಸಪ್ಪ ಅವರಿಗೆ ಹೇಳು ಅವರು ನಿನಗೆ ಕೆಲಸ ಕೊಡಿಸುತ್ತಾರೆ ಎಂದು ಹೇಳಿದ್ದರಂತೆ, ಆದರಂತೆ ಗುರುಸ್ವಾಮಿ ಬಸ್ ಹತ್ತಿ ಮಲೆಯೂರಿಗೆ ಬರುವಷ್ಟರಲ್ಲಿ ಬಸಪ್ಪ ಅವರು ಬಸ್ ಹತ್ತಿಕೊಂಡು ಮೈಸೂರಿಗೆ ಹೋಗಿದ್ದರು. ಮತ್ತೆ ಅವರನ್ನು ಮೈಸೂರಿಗೆ ಹುಡುಕಿಕೊಂಡು ಹೋಗುವಷ್ಟರಲ್ಲಿ ಅವರು ವಾಪಸ್ ಮಲೆಯುರಿಗೆ ಬಂದಿದ್ದರು. ಮತ್ತೆ ನಾಳೆ ಬೆಳಗ್ಗೆ ಬೇಗ ಹೋಗಿ ಬಸಪ್ಪ ಅವರನ್ನು ಕಂಡು ವಿಷಯ ತಿಳಿಸಿ, ಮೈಸೂರಿಗೆ ಹೋಗುತ್ತಿದ್ದಂತೆ ಆ ಅಧಿಕಾರಿ ಬಸಪ್ಪ ಅವರನ್ನು ನೋಡುತ್ತಿದ್ದಂತೆ ಎದ್ದು ನಿಂತು ಕೇಳಿದಾಗ ಗುರುಸ್ವಾಮಿ ಅವರು ನೇಮಕಾತಿ ಪತ್ರ ಜೊತೆಗೆ ಬಸ್ ಜಾರ್ಜ್ ಸಹ ಕೊಟ್ಟು ಕಳುಹಿಸು ಎಂದು ತಾಕೀತು ಮಾಡಿ, ಜೊತೆಯಲ್ಲಿ ನೇಮಕ ಪತ್ರವನ್ನು ಕೊಡಿಸಿದ್ದರು ಎಂದು ಈಗಲು ನಿವೃತ್ತಿ ಹೊಂದಿರುವ ಗುರುಸ್ವಾಮಿ ಬಸಪ್ಪ ಅವರ ಸೇವೆಯನ್ನು ಗುಣಗಾನ ಮಾಡುತ್ತಾರೆ. ಇಂಥ ಬಹಳಷ್ಟು ವಿಚಾರಗಳಿವೆ ಎಂದು ಎಂ.ಸಿ. ಬಸಪ್ಪ ಅವರು ಸೇವೆಯನ್ನು ಸ್ಮರಿಸಿಕೊಂಡರು.
ಜಿಲ್ಲಾಧಿಕಾರಿ ಶ್ರೀರೂಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಮಾಜಿ ಶಾಸಕ ಎಂ.ಸಿ. ಬಸಪ್ಪ ಅವರ ಸೇವೆ ಮತ್ತು ಶರಣ ಸಾಹಿತ್ಯ ಪರಿಷತ್ ಸೇವಾ ಕಾರ್ಯಗಳು. ಸುತ್ತೂರು ಶ್ರೀಗಳಿಗೆ ಗಿರಿಜನರ ಆರೋಗ್ಯ ಬಗ್ಗೆ ಇರುವ ಕಾಳಜಿ ಮತ್ತು ಸಮಾಜ ಅಭಿವೃದ್ದಿಯಲ್ಲಿ ಶೀಗಳ ಕೊಡುಗೆಯನ್ನು ಪ್ರಶಂಸಿಸಿದರು. ಶರಣ ಸಾಹಿತ್ಯ ಪರಿಷತ್‌ಗೆ ನಿವೇಶನ ಮಂಜೂರು ಮಾಡುವ ಬಗ್ಗೆ ಭರವಸೆಯನ್ನು ನೀಡಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ.ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಶರಣರ ವಿಚಾರಧಾರೆಗಳನ್ನು ಪ್ರಚುರಿಸುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಸುತ್ತೂರುಶ್ರೀಗಳ ಮಾರ್ಗದರ್ಶನಲ್ಲಿ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳು ಪರಿಷತ್‌ನ ಕಾರ್ಯಚಟುವಟಿಕೆಗಳಿಗೆ ಅನುಕೂಲ ವಾಗುವಂತೆ ನಿವೇಶನ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು.
ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ನಾಗದೇವ್, ಚಂದನ್, ಮನೋಜ್ ಅವರನ್ನು ಸನ್ಮಾನಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಸಾಹಿತಿ ಚಂದ್ರಶೇಖರಯ್ಯ ಅವರು ಎಂ.ಸಿ.ಬಸಪ್ಪನವರ ಕುರಿತು ಮಾತನಾಡಿದರು.ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಅಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿ ದುಗ್ಗಹಟ್ಟಿ, ಎಂ.ಬಿ. ಸೋಮಶೇಖರ್, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ವಸಂತಮ್ಮ, ರಾಜೇಶ್ವರಿ ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಬಿ.ಎಸ್. ವಿನಯ್, ಅರುಣಶ್ರೀ, ನಗರ ಘಟಕ ಅಧ್ಯಕ್ಷ ಯೋಗೀಶ್, ಮಹದೇವಸ್ವಾಮಿ ಹೆಗ್ಗವಾಡಿಪುರ, ಎಂ.ಬಿ. ರೇವಣ್ಣ, ಸುಂದರ್, ಆರ್.ಎಸ್. ಲಿಂಗರಾಜು ಮೊದಲಾದವರು ಇದ್ದರು.
