ಯುವ ಜನಾಂಗದವರಲ್ಲಿ ರಾಗಿಬೆಳೆ ಕುರಿತು ಜಾಗೃತಿ  ಅವಶ್ಯಕ : ಅಬ್ದುಲ್ ಅಜೀಜ್ ದೀನಾ

ಚಾಮರಾಜನಗರ : ಪುನರ್ಚಿತ್ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ಹೊಟ್ಟೆಗೆ ಹಿಟ್ಟು ಸಾಕ್ಷ್ಯಚಿತ್ರ ಪ್ರದರ್ಶನ ನಗರದ ಟೌನ್ ಕ್ಲಬ್ ಅಸೋಸಿಯೇಷನ್ ನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಪುನರ್ಚಿತ್ ವೀರಭದ್ರನಾಯಕ ಮತನಾಡಿ, ರೋಟರಿ ಸಂಸ್ಥೆಯ ಸಹಯೋಗದಲ್ಲಿ ಪುನರ್ಚಿತ್ ಸಂಸ್ಥೆಯು ಹೊಟ್ಟೆಗೆ ಹಿಟ್ಟು ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ್ದೇವೆ. ಬಹಳ ಮುಖ್ಯವಾಗಿ ಸಣ್ಣ ರೈತರು  ಎದುರಿಸುವ ಸವಾಲುಗಳೇನಿದೆ. ಹವಾಮಾನ ವೈಪರ್ಯತೆಗಳೇನು ಇದೆ. ಎಲ್ಲವನ್ನು ಒಳಗೊಂಡ ಸಾಕ್ಷ್ಯಚಿತ್ರ. ಹಿಂದೆ ಅವರ ತೋಟಗಳಿಗೆ ಗೊಬ್ಬರ ಸಿಗುತ್ತಿತ್ತು. ಸಾಕಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಳ್ಳುತಿದ್ದರು. ಆಗಾಗಿ ಸಾಮೂಹಿಕ ಕೃಷಿ ವ್ಯವಸ್ಥೆ ಇತ್ತು. ಸಾಕಷ್ಟು ಕಾಲಕಾಲಕ್ಕೆ ಮಳೆಯಿತು. ರೈತರು ಬೆಳೆಗಳನ್ನು ಚೆನ್ನಾಗಿ ಬೆಳೆಯುತ್ತಿದ್ದರು ಆದರೆ ಇಂದಿನ ಪರಿಸ್ಥಿತಿ ಒಳಗಡೆ ರೈತರು ರಾಗಿ ಬೆಳೆಯನ್ನು ಜೀವನೋಪಾಯದ ಭಾಗವಾಗಿ ಬೆಳೆಯುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಯುವಜನರು ಕೃಷಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸಣ್ಣ ರೈತರಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರೆ ಒಳ್ಳೆಯ ಸಾವಯವ ಆಹಾರ ಪದಾರ್ಥಗಳನ್ನು ಬೆಳೆದು ಕೊಳ್ಳಬಹದು ರಾಗಿ ಬೆಳೆ, ಅದರ ಆರೋಗ್ಯ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
  ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಅಜೀಜ್ ದೀನಾ ಮಾತನಾಡಿ, ಹೊಟ್ಟೆಗೆ ಹಿಟ್ಟು ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮ ತುಂಬಾ ಅದ್ಭುತವಾದ ಕಾರ್ಯಕ್ರಮವಾಗಿದೆ, ಯುವ ಜನಾಂಗಕ್ಕೆ ರಾಗಿ ಬೆಳೆ ಬಗ್ಗೆ ಗೊತ್ತಿಲ್ಲ. ಇಂತಹ ಕಾರ್ಯಕ್ರಮ ಎಲ್ಲಕಡೆಗಳಲ್ಲೂ ಮಾಡಿ ರಾಗಿ ಬೆಳೆ ಅದರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.
  ಮಾಜಿ ಜಿಲ್ಲಾ ಗೌರ್ನರ್
 ಡಾ.ನಾಗಾರ್ಜುನ ಮಾತನಾಡಿ, ದೇಶದಲ್ಲಿ ಪ್ರತಿ 5 ಜನರಲ್ಲಿ ಒಬ್ಬರಿಗೆ ಮಧುಮೇಹ ರೋಗ ಇರುತ್ತದೆ. ರಾಗಿಯಲ್ಲಿ ಬಹಳಷ್ಟು ಪೌಷ್ಠಿಕಾಂಶ ಇದೆ. ಮುಖ್ಯವಾಗಿ ಕ್ಯಾಸಿಯಂ, ಪೊಟಾಸಿಯಂ
ರಾಗಿ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ರಾಗಿ ಸೇವನೆಯಿಂದ ಸಕ್ಕರೆ ಅಂಶ ಬಹಳ ಕಡಿಮೆ ಆಗುತ್ತದೆ ಎಂದರು.
ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಹಿಂದೆ ರಾಗಿ ಬೆಳೆಯನ್ನು ಹೆಚ್ಚಿನ ರೈತರು ಬೆಳೆಯುತ್ತಿದದರು. ರಾಗಿ ನವಣೆ, ಸಜ್ಜೆ ಬಡವರ ಆಹಾರವೇ. ಆಗಾಗಿ ರಾಗಿ ಬೆಳೆ ಬೆಳೆಯಲು ಸರ್ಕಾರ ಕಣ್ಣು ತೆರೆಸುವ ಕೆಲಸ ಆಗಬೇಕಿದೆ ನಾವು ಕೂಡ ಸರ್ಕಾರಕ್ಕೆ ರಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕು ಮುಂದಿನ ದಿನಗಳಲ್ಲಿ . ಮನವಿ ಸಲ್ಲಿಸಲಾಗುತ್ತದೆ ಎಂದರು.
   ರೋಟರಿ ಅಧ್ಯಕ್ಷರಾದ ಕಾಳನಹುಂಡಿ ಗುರುಸ್ವಾಮಿ, ಕಾಗಲವಾಡಿ ಚಂದ್ರು, ಸದಸ್ಯ ಉಲ್ಲಾಸ್ ಇತರರು ಅಭಿಪ್ರಾಯ ವ್ಯಕ್ತ ಪಡಿಸಿದರು.

Leave a Reply

Your email address will not be published. Required fields are marked *