ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಿರಂತರ ಹೋರಾಟ: ಎಂ.ರಾಮಚಂದ್ರ

  • ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ 3ನೇ ದಿನವು ಮುಂದುವರಿದ ಬಿಜೆಪಿ ಹೋರಾಟ
  • ಮಾಜಿ ಸಚಿವ ಬಿ.ಸಿ.ನಾಗೇಶ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

ಚಾಮರಾಜನಗರ: ವಾಲ್ಮೀಕಿ ನಿಗಮ ಹಗರಣದ ಆರೋಪಿ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಬಿಜೆಪಿಗರು 3ನೇ ದಿನವೂ ಧರಣಿ ಮುಂದುವರೆಸಿದರು.
ಜಿಲ್ಲಾಡಳಿತ ಭವನದ ಮುಂಭಾಗದ ಜಮಾಯಿಸಿದ ಪ್ರತಿಭಟನಾ ಕಾರರು ಸಚಿವ ನಾಗೇಂದ್ರ ರಾಜೀ ನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿಧನಕ್ಕೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
   ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ರಾಜ್ಯಾದ್ಯಂತ ಬಿಜೆಪಿ ಹಚಿವ ಬಿ.ನಾಗೇಂದ್ರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸುಮಾರು 187 ಕೋಟಿ ಹಗರಣವನ್ನು ಖಂಡಿಸಿ ಕಳೆದ ಮೂರು ದಿನಗಳಿಂದಲ್ಲೂ ಪ್ರತಿಭಟನೆ ಮಾಡಲಾಗುತ್ತಿದೆ. ಸಚಿವ ನಾಗೇಂದ್ರ ಅವರು, ಈ ಹಗರಣದಲ್ಲಿ ಸಿಲುಕಿ ಜೈಲಿನಿಂದ ಬಂದು ಮತೆ ಸಚಿವ ಸ್ಥಾನವನ್ನು… ಅಲಂಕರಿಸಿದ್ದಾರೆ. ಇದು ಎಸ್‌ಸಿ, ಎಸ್‌ಟಿ ಸಮಾಜಕ್ಕೆ ಕಾಂಗ್ರೆಸ್‌ ಸರ್ಕಾರ ಮಾಡಿ ಘೋರ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಅಧಿವೇಶನದಲ್ಲಿ 187 ಕೋಟಿ ಹಗರಣ ಆಗಿಲ್ಲ. ಬರಿ 80 ಕೋಟಿ ಮಾತ್ರ ಹಗರಣವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಧಿವೇಶನದಲ್ಲಿ ದಾಖಲೆ ಆಗಿದೆ. ಇಂತಹ ಹಗರಣ ಹೊತ್ತಿರುವ ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿರುವುದು ಎಷ್ಟು ಸಮಂಜಸವಾದದ್ದು. ಕಾಂಗ್ರೆಸ್ ಸರ್ಕಾರದಲ್ಲಿ ಜನರಿಗೆ ಭ್ರಷ್ಟಚಾರ ರಹಿತ ಆಡಳಿತ ಕೊಡುತ್ತೇನೆ. ಬಡವರಿಗೆ ನ್ಯಾಯ ದೊರಕಿಸಿಕೊಡುತ್ತೇವೆ. ಅನೇಕ ಹಂದರ್ಭಗಳಲ್ಲಿ ಘೋಷಣೆಗಳನ್ನು ಮಾಡುತಿದ್ದಾರೆ. ಆದರೆ ಇಂತಹ ಭ್ರಷ್ಟ ಸಚಿವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ‌ ಮಾಡಿಕೊಂಡಿರುವುದು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ನಾಗೇಂದ್ರ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.
ಚೂಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಮಾತನಾಡಿ, ಮಾಜಿ ಸಚಿವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನ ಕಾರ್ಯಕರ್ತರಾಗಿ, ನಿಷ್ಟವಂತ ಸಚಿವರಾಗಿ ಕಾರ್ಯನಿರ್ವಹಿಸಿದ ಬಿ.ಸಿ.ನಾಗೇಶ್ ಅವರು ನಿಧನರಾದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಒಂದು ನಿಮಿಷ ಮೌನಾಚರಣೆ ಶ್ರದ್ದಾಂಜಲಿ ಸಲ್ಲಿಸಲಾಗಿದೆ ಎಂದರು.


    ಧರಣಿಯಲ್ಲಿ ಬಿಜೆಪಿ ವಿಭಾಗ ಪ್ರಭಾರಿ ಸ್ವಾಮಿ ಮರಳಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಚೂಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಜಿಲ್ಲಾ ಉಪಾಧ್ಯಕ್ಷ ರಾದಗುಂಡ್ಲುಪೇಟೆ ಮುಖಂಡ ಎನ್. ಮಲ್ಲೇಶ್, ಅರಕಲವಾಡಿ ನಾಗೇಂದ್ರ, ಶಿವು ವಿರಾಟ್, ಕಾರ್ಯದರ್ಶಿ ಗಳಾದ ನಟರಾಜು, ಮೂಡಹಳ್ಳಿಮೂರ್ತಿ, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಸೀಗಮಾರನಾಯಕ, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ನಗರ ಮಂಡಲ ಅಧ್ಯಕ್ಷ  ಶಿವರಾಜ್, ಕೊಳ್ಳೇಗಾಲ ನಗರ ಮಂಡಲ ಅಧ್ಯಕ್ಷ ಬೂದಿತಿಟ್ಟು ಶಿವಕುಮಾರ್,ನಗರಸಭಾ ಮಾಜಿ ಸದಸ್ಯ ಶಿವಣ್ಣ
  ಎಸ್ ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ರಾಮಸಮುದ್ರ ಶಿವಣ್ಣ, ಎಸ್ ಟಿ ಮೋರ್ಚಾದ ತಾಲೂಕು ಅಧ್ಯಕ್ಷರಾದ ಚಂದ್ರೇಶ್ ಗುಂಡಗಾಲ, ಚಿಕ್ಕತುಪ್ಪೂರು ಮಂಜುನಾಥ್, ಚಿಕ್ಕಾಟಿ ಶಿವಣ್ಣ, ಜಿಲ್ಲಾ ಕೋಶ ಅಧ್ಯಕ್ಷ ರಘು,
ಕಾರ್ಯಕಾರಿಣಿ ಸದಸ್ಯ ನಾಗೇಶ್, ಕಿಲಗೆರೆ ಬಂಗಾರನಾಯಕ, ರಾಜೇಶ್, ಚಂದ್ರು, ಮಹೇಶ್, ಚೇತು,ಮನು,
, ಆಲೂರು ಶಿವಾನಂದ, ಸಾಹಿತಿ ಕೋಡಿಉಗನೆ ಮಂಜು, ಕೂಸಣ್ಣ, ಭಾಸ್ಕರ್, ಆನಂದ್ ಭಗೀರಥ್. ಭಾನುಪ್ರಕಾಶ್., ಕೇಬಲ್ ರಂಗಸ್ವಾಮಿ, ಮಾರ್ಕೆಟ್ ಕುಮಾರ್, ಚಿಕ್ಕಾಟಿ ಶಿವಣ್ಣನಾಯಕ, ತಾ.ಪಂ.ಮಾಜಿ ಸದಸ್ಯ ಕಬ್ಬಹಳ್ಳಿ ರೇವಣ್ಣ, ಕಿಲಗೆರೆ ಶಶಿ, ಪೋಟೋಕೃಷ್ಣ, ಬಂಗಾರನಾಯಕ, ಮಣಿ, ಹೇಮಂತ, ಗೋಪಾಲಕೃಷ್ಣ, ಶೇಷಪ್ಪಪಾಸ್ವಾನ್, ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *