ದೇವರಾಜು ಅರಸು ಅವರು ರಾಜ್ಯದಲ್ಲಿ ಬಡತನ ನಿರ್ಮೂಲನೆ ಮಾಡುವ ಸಂಬಂಧ 20ಅಂ±ಗಳÀ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತಂದರು. ದಲಿತರು ಶೋಷಿತರು, ಹಿಂದುಳಿದವನ್ನು ರಾಜಕೀಯವಾಗಿ ಮುಂದೆ ತರಲು ಸಾಕಷ್ಟು ಶ್ರಮಿಸಿದರು, ಅಲ್ಪ ಸಂಖ್ಯಾತರು ಪರಿಶಿಷ್ಟರು, ಹಿಂದುಳಿದ ವರ್ಗಗಳು ಮತ್ತು ಶೋಷಿತರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ನೆಲೆ ಕಲ್ಲಿಸಲು ಬದ್ರ ಬುನಾದಿ ಹಾಕಿದ ಕೀರ್ತಿ ಅರಸು ಅವರಿಗೆ ಸಲುತ್ತದೆ ಜಿಲ್ಲಾ ಕಾಂಗ್ರಸ್ ಉಪಾಧ್ಯಕ್ಷ ಬಿ,ಕೆ ರವಿಕುಮಾರ್ ಎಂದರು.
ಇಬ್ಬರು ಮಹನೀಯರ ಭಾವಚಿತ್ರಕ್ಕೆ ಜಿಲ್ಲಾ ಕಾಂಗ್ರಸ್ ಉಪಾಧ್ಯಕ್ಷ ಬಿ,ಕೆ ರವಿಕುಮಾರ್ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಮಾಜಿ ಪ್ರಧಾನಿ ದಿ. ರಾಜೀವ್‍ಗಾಂಧಿಯವರು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಜತೆಗೆ ಯುವಕರಿಗೆ ಮತದಾನದ ಹಕ್ಕು ಕೊಟ್ಟರು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಆದರ್ಶಗಳನ್ನು ಮೈಗೂಡಿಸಿಕೂಂಡು ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು,
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ,ಎಸ್ ಗುರುಸ್ವಾಮಿ, ಮಾತನಾಡಿ ರಾಜೀವ್ ಗಾಂಧಿಯವರು ದೇಶದ ಪ್ರಗತಿಗೆ ಹಲವಾರು ಕೂಡುಗೆಗಳನ್ನು ನೀಡಿದ್ದಾರೆ. ಮಾಜಿಮುಖ್ಯಮಂತ್ರಿ ದಿ. ದೇವರಾಜಅರಸು ಸತತ ಕರ್ನಾಟಕ ರಾಜ್ಯದಲ್ಲಿ ಸುಧೀರ್ಘ 8 ವರ್ಷಗಳ ಕಾಲ ಉತ್ತಮ ಆಡಳಿತವನ್ನು ನೀಡಿದ್ದರುಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್,ಮಹದೇವ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ,ಎಸ್ ಗುರುಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷೆ ಶಕುಂತಲಾ, ನಗರಸಭಾ ನಾಮನಿರ್ದೇಕ ಸ್ವಾಮಿ, , ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮರಿಯಾಲದ Àಹುಂಡಿ ಕುಮಾರ್, ಜಿ,ಪಂ ಕೆ,ಡಿ,ಪಿಸದಸ್ಯ ಶ್ರೀನಿವಾಸ್, ಜಿ,ಡಿ ಪ್ರಕಾಶ್, ಗ್ರಾ,ಪಂ ಮಾಜಿ ಅಧ್ಯಕ್ಷ ರೋಪೇಶ್, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿನಸ್ರುಲಾಖಾನ್, ಆಯಿಭಾಖಾನ್, ಅಪ್ಸರ್ ಅಹಮದ್, ಅಭಾಸ್, ರವಿಗೌಡ, ಮಹೇಶ್, ಪವನ್‍ಮೂರ್ತಿ, ನಾಗರಾಜು, ಕಾರ್ಯಕರ್ತರು ಮುಖಂಡರು ಇದ್ದರು.
