ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ : ಮುಖ್ಯಮಂತ್ರಿ ಡಿ.ಕೆ.ಶಿ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಜನರಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ತುಂಬುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

ಕೊಳ್ಳೇಗಾಲ ಪಟ್ಟಣದ ಎಂಜಿಎಸ್ ವಿ ಪದವಿಪೂರ್ವ ಕಾಲೇಜು ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಕೊಳ್ಳೇಗಾಲ, ಹನೂರು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


ಇಡೀ ಸರ್ಕಾರ ಚಾಮರಾಜನಗರ ಜನತೆಯ ಜೊತೆಗಿದೆ. ಈ ಹಿಂದೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಈ ಜಿಲ್ಲೆಗೆ 3 ಸಾವಿರ ಕೋಟಿ ರೂ.ಗಳ ಕಾಮಗಾರಿಯನ್ನು ನೀಡಿ, ಜಿಲ್ಲೆಯ ಜನರನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ಯಲಾಗಿತ್ತು. ಜನರಿಂದ ಅಧಿಕಾರಕ್ಕೆ ಬಂದ ನಮ್ಮ ಗ್ಯಾರಂಟಿ ಸರ್ಕಾರ, ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಶಂಕುಸ್ಥಾಪನೆ ನೆರವೇರಿಸಿದೆ. ನಮ್ಮ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಇಡೀ ಸರ್ಕಾರ ನಿಮ್ಮೊಂದಿಗಿದೆ. ಟೀಕೆ ಎದುರಿಸಿ ಗೆದ್ದರೆ ನಾಯಕನಾಗುತ್ತಾನೆ. ಸೋತರೆ ಮಾರ್ಗದರ್ಶಕನಾಗುತ್ತಾನೆ. ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ನಿಮಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ತುಂಬಲು ಸೇವೆ ಮಾಡುತ್ತಿದ್ದಾರೆ ಎಂದರು.

ಶಿವನು ಗಂಗೆಗೆ ತನ್ನ ತಲೆಯ ಮೇಲೆ ಸ್ಥಾನ ನೀಡಿದ್ದರೆ, ಕಾಂಗ್ರೆಸ್ ಸರಕಾರ ಜನರ ಹೃದಯಗಳಲ್ಲಿ ಸ್ಥಾನ ಪಡೆದಿದೆ. ಕೊಳ್ಳೆಗಾಲಕ್ಕೆ ಒಳ್ಳೆಯ ಕಾಲ ಬಂದಿದೆ. ಕೊಳ್ಳೇಗಾಲಕ್ಕೆ ಅಭಿವೃದ್ಧಿ ಕಾಲಿಟ್ಟಿದೆ. ಹನೂರಿಗೆ ಅಭಿವೃದ್ಧಿ ಹರಿಯುತ್ತಿದೆ. ಕೊಳ್ಳೆಗಾಲದಲ್ಲಿ ರೇಷ್ಮೆ ಪಾರಂಪರಿಕ ವೃತ್ತಿಯಾಗಿದೆ. ನಾನು ಕೂಡ ರೇಷ್ಮೆ ನಾಡಿನಿಂದ ಬಂದವನು. ಕನಕಪುರ, ರಾಮನಗರ, ಮಾಗಡಿ, ಕೊಳ್ಳೇಗಾಲ, ಮಳವಳ್ಳಿ, ಹನೂರು, ಶಿಡ್ಲಘಟ್ಟ ಗಳಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯಲಾಗುತ್ತಿದೆ. ಮೈಸೂರು ಸಿಲ್ಕ್ ಪ್ರಸಿದ್ಧ ಬ್ರಾಂಡ್. ಟಿಪ್ಪುಸುಲ್ತಾನ್ ಅವರು ನಾಡಿಗೆ ರೇಷ್ಮೆ ಪರಿಚಯಿಸಿದರು. ಪ್ರಸ್ತುತ ಬಳ್ಳಾರಿ, ಹಾವೇರಿ, ಗದಗ ಸೇರಿದಂತೆ ವಿವಿಧೆಡೆ ರೇಷ್ಮೆ ಬೆಳೆಯಲಾಗುತ್ತಿದೆ. ಚೈನಾದಿಂದ ರೇಷ್ಮೆ ಆಮದು ನಿಂತ ಮೇಲೆ, ನಮ್ಮ ರೇಷ್ಮೆಗೆ ಉತ್ತಮ ಬೆಲೆ ದೊರೆಯುತ್ತಿದೆ. ಇದನ್ನು ಶಾಶ್ವತವಾಗಿ ಉಳಿಸಲು ಮಂಗಳೂರಿನ ಸಂಪುಟ ಸಭೆಯಲ್ಲಿ ಕೈಮಗ್ಗ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಲು ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ನಿಮ್ಮೆಲ್ಲರ ಬದುಕಿಗೆ ಹೊಸ ರೂಪ ನೀಡುವ ನಿರ್ಧಾರ ಮಾಡಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅಭಿವೃದ್ಧಿ ತಲುಪಿದಾಗ ಮಾತ್ರ ಅವರ ಜೀವನದಲ್ಲಿ ಆಶಾ ಕಿರಣ ಮೂಡುತ್ತದೆ. ಸೇವೆಯೇ ನಮ್ಮ ಧರ್ಮ. ಅಭಿವೃದ್ಧಿಯೇ ನಮ್ಮ ಗುರಿ. ಜನರ ಸಂಕಷ್ಟಕ್ಕೆ ನೆರೆವಾಗುವುದೇ ನಮ್ಮ ಧ್ಯೇಯ. ಮಾತಿನಿಂದ ಅಭಿವೃದ್ಧಿ ಸಾಧ್ಯವಿಲ್ಲ. ಶ್ರಮ ಶಿಸ್ತುಗಳಿಂದ ಬೆವರು ಸುರಿಸಿದಾಗ ಮಾತ್ರ, ಬದುಕಿಗೆ ಹೊಸ ರೂಪ ಬರುತ್ತದೆ. ಅಭಿವೃದ್ಧಿಯಲ್ಲಿ ಪವಾಡ ಮಾಡಲು ಸಾಧ್ಯವಿಲ್ಲ. ಪ್ರತಿದಿನವೂ ಶ್ರಮಿಸಬೇಕು. ಯಾರ ಅಧಿಕಾರವೂ ಶಾಶ್ವತವಲ್ಲ. ಆದರೆ ನಾವು ಮಾಡುವ ಸೇವೆ, ಅಭಿವೃದ್ಧಿಯನ್ನು ಜನರು ನೆನೆಸಿಕೊಂಡಾಗ ಮಾತ್ರ ಅದು ಶಾಶ್ವತ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನನ್ನನ್ನೂ ಒಳಗೊಂಡAತೆ ಜಿಲ್ಲೆಯ ನಾಯಕರು, ಕೊರೋನಾದಿಂದ ಮರಣ ಹೊಂದಿದ 33 ಜನರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದೆವು. ಮೈಸೂರು ಮಹಾರಾಜರು ನಿಮ್ಮ ಭೂಮಿಗೆ ಶಕ್ತಿ, ಇತಿಹಾಸ ನೀಡಿದ್ದಾರೆ. ಈ ಜಿಲ್ಲೆಯಲ್ಲಿ ಚಾಮರಾಜೇಶ್ವರ ದೇವಸ್ಥಾನವಿದೆ. ಅವರು ಆಳಿದ ಪ್ರದೇಶವಿದು. ಅವರ ನೆನಪಿನಲ್ಲಿ ಚಾಮರಾಜನಗರವೆಂದು ಜಿಲ್ಲೆಗೆ ಹೆಸರಿಡಲಾಗಿದೆ. ಈ ಜಿಲ್ಲೆ ದಟ್ಟವಾದ ಅರಣ್ಯ, ವನ್ಯಮೃಗಗಳ ಧಾಮ ಮತ್ತು ಸಂಸ್ಕೃತಿಯ ತಾಣವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮುಂದಿನ ದಿನಗಳಲ್ಲಿಯೂ ನಿಮ್ಮ ಶಕ್ತಿ ಸ್ಪೂರ್ತಿ ಹಾಗೂ ನಮ್ಮ ಅಭಿವೃದ್ಧಿಯಿಂದ 2028ಕ್ಕೂ ನಿಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಎಲ್ಲ ಗ್ಯಾರಂಟಿಗಳು ಮುಂದುವರೆಯಲಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಶಪಥ ನಾವು ಮಾಡಿದ್ದೇವೆ. ಅಭಿವೃದ್ಧಿ ಎಂದರೆ ಕಟ್ಟಡ ಮಾತ್ರವಲ್ಲ, ಜನರ ಕನಸುಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸುಮಾರು 25 ಕ್ಕೂ ಹೆಚ್ಚು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ ನೀಡಲಾಗಿದೆ. ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ನಾನು ಸಿಎಂ ಆದ ನಂತರ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದೇನೆ. ಪ್ರಜಾಸೇವೆ ಇಲಾಖೆಯಿಂದ ಶಾಸಕರು, ಸಚಿವರು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು, ಹೋಬಳಿ, ಪಂಚಾಯತಿಗಳಿಗೆ ಮೊದಲನೇ ಮತ್ತು ಮೂರನೇ ಶನಿವಾರ ಭೇಟಿ ನೀಡಲು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಬೇಡಿಕೆಯಿದ್ದು, ಇದನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ನೀರಾವರಿ ಇಲಾಖೆಯ ಮೂಲಕ ಅನೇಕ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯನ್ನು ಕೃಷಿ ಯೋಗ್ಯ ಭೂಮಿ ಮಾಡಲು ಕೋಟ್ಯಾಂತರ ಹಣ ಬಿಡುಡೆ ಮಾಡುತ್ತಾ ಬಂದಿದೆ ಎಂದರು.

ಬಹುದಿನಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನ ಉದ್ಘಾಟಿಸಲಾಗಿದೆ. ಮಾಜಿ ಸಚಿವರಾದ ಕೆ. ವೆಂಕಟೇಶ್ ಹಾಗೂ ಮಹದೇವಪ್ಪನವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.

ಈ ರಾಜ್ಯ ಹೊಸ ರೂಪಕ್ಕೆ ಹೆಜ್ಜೆ ಇಟ್ಟಿದೆ. ಇಂದು ಸುವರ್ಣಾವತಿ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸರಣಿ ಕೆರೆಗಳ ಸಮಗ್ರ ಅಭಿವೃದ್ಧಿಗೆ 120 ಕೋಟಿ ಕಾಮಗಾರಿಗೆ ಕಾರ್ಯದೇಶ ನೀಡಲಾಗಿದೆ. ಹನೂರಿನಲ್ಲಿ ಅಂತರ್ಜಲ ಅಭಿವೃಧ್ಧಿಗೆ ಸೂಕ್ತ ಅನುದಾನ ನೀಡಲಾಗಿದೆ. ಚಾಮರಾಜನಗರದ ಬಳಿ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿಗೆ 450 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 1000 ಕೋಟಿ ರೂ.ಗಳ ನೀರಾವರಿ ಕಾಮಗಾರಿಗಳನ್ನು ನೀಡಲಾಗಿದ್ದು, ನನ್ನ ಅವಧಿಯಲ್ಲಿ ಇಷ್ಟು ದೊಡ್ಡ ಅಭಿವೃದ್ಧಿಯನ್ನು ಜಿಲ್ಲೆ ಕಾಣುತ್ತಿದೆ. ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಜನಾಂಗದವರ ಆಹಾರ ಕಿಟ್‌ಗಳ ಬೇಡಿಕೆಗಳನ್ನು ಪರಿಗಣಿಸಲು ನನ್ನ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

2028ಕ್ಕೂ ಗ್ಯಾರಂಟಿಗಳು ಮುಂದುವರೆಯಲಿದೆ : ಮುಂದಿನ ದಿನಗಳಲ್ಲಿಯೂ ನಿಮ್ಮ ಶಕ್ತಿ ಸ್ಪೂರ್ತಿ ಹಾಗೂ ನಮ್ಮ ಅಭಿವೃದ್ಧಿಯಿಂದ 2028 ಕ್ಕೂ ನಿಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಎಲ್ಲ ಗ್ಯಾರಂಟಿಗಳು ಮುಂದುವರೆಯಲಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಶಪಥ ನಾವು ಮಾಡಿದ್ದೇವೆ. ಅಭಿವೃದ್ಧಿ ಎಂದರೆ ಕಟ್ಟಡ ಮಾತ್ರವಲ್ಲ, ಜನರ ಕನಸುಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯ" ಎಂದರು.

ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ : "ಸುಮಾರು 25 ಕ್ಕೂ ಹೆಚ್ಚು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ ನೀಡಲಾಗಿದೆ. ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ನಾನು ಸಿಎಂ ಆದ ನಂತರ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದೇನೆ. ಪ್ರಜಾಸೇವೆ ಇಲಾಖೆಯಿಂದ ಶಾಸಕರು, ಸಚಿವರು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು, ಹೋಬಳಿ, ಪಂಚಾಯತಿಗಳಿಗೆ ಮೊದಲನೇ ಮತ್ತು ಮೂರನೇ ಶನಿವಾರ ಭೇಟಿ ನೀಡಲು ಸೂಚನೆ ನೀಡಿದ್ದೇನೆ” ಎಂದರು.

"ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಬೇಡಿಕೆಯಿದ್ದು, ಇದನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ನೀರಾವರಿ ಇಲಾಖೆಯ ಮೂಲಕ ಅನೇಕ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯನ್ನು ಕೃಷಿ ಯೋಗ್ಯ ಭೂಮಿ ಮಾಡಲು ಕೋಟ್ಯಾಂತರ ಹಣ ಬಿಡುಡೆ ಮಾಡುತ್ತಾ ಬಂದಿದೆ" ಎಂದರು.

ಭಾರತ್ ಜೋಡೋ ಯಾತ್ರೆ ನಡೆದಲ್ಲೆಲ್ಲಾ ಕಾಂಗ್ರೆಸ್ ಗೆ ಗೆಲುವು : “ರಾಹುಲ್ ಗಾಂಧಿಯವರು ತಮಿಳುನಾಡಿನಿಂದ ಈ ಜಿಲ್ಲೆಗೆ ಬಂದು ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಅವರು ನಡೆದಲ್ಲೆಲ್ಲಾ, ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಜನರು ಇತಿಹಾಸ ನಿರ್ಮಿಸಿದರು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಜನರ ಜೀವನಮಟ್ಟ ಸುಧಾರಿಸಿದೆ. ಪ್ರತಿ ಜಿಲ್ಲೆಯಲ್ಲಿಯೂ 50 ಸಾವಿರ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ” ಎಂದರು.

"ಬಹುದಿನಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನ ಉದ್ಘಾಟಿಸಲಾಗಿದೆ. ಮಾಜಿ ಸಚಿವರಾದ ಕೆ.ವೆಂಕಟೇಶ್ ಹಾಗೂ ಮಹದೇವಪ್ಪನವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ" ಎಂದರು.

ಕರ್ನಾಟಕ ಹೊಸ ರೂಪಕ್ಕೆ ಹೆಜ್ಜೆ ಇಟ್ಟಿದೆ : "ಕೆಲವು ಪಕ್ಷದವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಅದು ಹಗಲುಕನಸು. ಈ ರಾಜ್ಯ ಹೊಸ ರೂಪಕ್ಕೆ ಹೆಜ್ಜೆ ಇಟ್ಟಿದೆ. ಇಂದು ಸುವರ್ಣಾವತಿ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸರಣಿ ಕೆರೆಗಳ ಸಮಗ್ರ ಅಭಿವೃದ್ಧಿಗೆ 120 ಕೋಟಿ ಕಾಮಗಾರಿಗೆ ಕಾರ್ಯದೇಶ ನೀಡಲಾಗಿದೆ. ಹನೂರಿನಲ್ಲಿ ಅಂತರ್ಜಲ ಅಭಿವೃಧ್ಧಿಗೆ ಸೂಕ್ತ ಅನುದಾನ ನೀಡಲಾಗಿದೆ. ಚಾಮರಾಜನಗರದ ಬಳಿ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿಗೆ 450 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 1000 ಕೋಟಿ ರೂ.ಗಳ ನೀರಾವರಿ ಕಾಮಗಾರಿಗಳನ್ನು ನೀಡಲಾಗಿದ್ದು, ನನ್ನ ಅವಧಿಯಲ್ಲಿ ಇಷ್ಟು ದೊಡ್ಡ ಅಭಿವೃದ್ಧಿಯನ್ನು ಜಿಲ್ಲೆ ಕಾಣುತ್ತಿದೆ. ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಜನಾಂಗದವರ ಆಹಾರ ಕಿಟ್ ಗಳ ಬೇಡಿಕೆಗಳನ್ನು ಪರಿಗಣಿಸಲು ನನ್ನ ಸರ್ಕಾರ ಬದ್ಧವಾಗಿದೆ" ಎಂದರು.

ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ, ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್. ಮುನಿಯಪ್ಪ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಜ್ ಹಾಗೂ ವಕ್ಸ್ ಸಚಿವರಾದ ಯು.ಟಿ. ಖಾದರ್, ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಡಾ. ಅಜಯ್ ಸಿಂಗ್, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಾದ ಚೆಲುವರಾಯಸ್ವಾಮಿ, ಲೋಕಸಭಾ ಸದಸ್ಯರಾದ ಸುನೀಲ್ ಬೋಸ್, ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ಡಾ. ಡಿ. ತಿಮ್ಮಯ್ಯ, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚಾಮುಲ್ ಅಧ್ಯಕ್ಷರಾದ ನಂಜುAಡಸ್ವಾಮಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ನರೇಂದ್ರ, ಮಾಜಿ ಶಾಸಕರಾದ ಆರ್. ನರೇಂದ್ರ, ಜಿ.ಎನ್. ನಂಜುAಡಸ್ವಾಮಿ, ಜಿಲ್ಲಾಧಿಕಾರಿನ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿಗಳು ಸಚಿವರೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಉದ್ಘಾಟಿಸಿದರು.

Leave a Reply

Your email address will not be published. Required fields are marked *