- ಶಾಸಕ ಸಿ.ಪುಟ್ಟರಂಗಶೆಟ್ಟಿ ಅಚ್ಚಟ್ಟಿಪುರ ಗ್ರಾಮದಲ್ಲಿ ಮಾರಮ್ಮ ದೇವಸ್ಥಾನಕ್ಕೆ ಭೂಮಿಪೂಜೆ
ಚಾಮರಾಜನಗರ: ತಾಲ್ಲೂಕಿನ ಅಚ್ಚಟ್ಟಿಪುರ ಗ್ರಾಮದಲ್ಲಿ ೧೦ಲಕ್ಷ ರೂ, ವೆಚ್ಚದಲ್ಲಿಶಾಸಕ ಪುಟ್ಟರಂಗಶೆಟ್ಟ ಅವರು ಮಾರಮ್ಮ ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಮಾರಮ್ಮ ದೇವಸ್ಥಾನ ಭೂಮಿಪೂಜೆ ನೆರವೇರಿಸಲಾಗಿದೆ ಅಲ್ಲದೇ ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು,ತಮ್ಮ ಕೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ದರಾಗಿ ಗ್ರಾಮಗಳಲ್ಲಿ ರಸ್ತೆ ಚರಂಡಿ, ಸಮುದಾಯ ಭವನ ಆಶ್ರಯಮನೆ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರಕಾರ ಮಂಜೂರುಮಾಡುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ, ಹಲವು ಗ್ರಾಮಗಳಲ್ಲಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ತಿಳಿಸಿದರು
ಈವೇಳೆ ಮುಖಂಡರಾದ ಶಂಬ್ಬಪ್ಪ, ಎ,ಎಸ್ ಗುರುಸ್ವಾಮಿ, ರಾಜೇಂದ್ರ ಪ್ರಸಾದ್, ರಾಜಶೇಖರ್‌ಮೂರ್ತಿ.ನಾಗಪ್ಪ, ರಾಚ್ಚಯ್ಯ, ಬಸವಣ್ಣ, ಸೇರಿದಂತೆ ಗ್ರಾಮದ ಮುಖಂಡರು ಗ್ರಾಮಸ್ಥರು
೧,-ಚಾಮರಾನಗರ ತಾಲ್ಲೂಕಿನ ಹೂಸಹಳ್ಳಿ ಗ್ರಾಮದಲ್ಲಿ ಎಂಎಸ್‌ಐಎಲ್ ಅಧ್ಯಕ್ಷರು ಹಾಗೂ ಶಾಸಕ ಪುಟ್ಟರಂಗಶೆಟ್ಟ ಅವರಿಂದ ಬೀರೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
೨,-ಚಾಮರಾಜನಗರ ತಾಲ್ಲೂಕಿನ ಅಚ್ಚಟ್ಟಿಪುರ ಗ್ರಾಮದಲ್ಲಿ ೧೦ಲಕ್ಷ ರೂ, ವೆಚ್ಚದಲ್ಲಿಶಾಸಕ ಪುಟ್ಟರಂಗಶೆಟ್ಟ ಅವರು ಮಾರಮ್ಮ ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಿದರು.