ಚಾಮರಾಜನಗರ : ರಾಯಚೂರು ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೊಡಲ್ಪಡುವ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಬಂಡಿಗೆರೆ ಗ್ರಾಮದ ಜಿ.ಪಂ.ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯ ಡಾ. ಪುಟ್ಟರಾಜು ಅವರಿಗೆ ರಾಷ್ಟ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ, ಕೊಳ್ಳೇಗಾಲದ ಲೋಕೇಶ್ ಅವರಿಗೆ ರಾಷ್ಟ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ, ಯಳಂದೂರು ತಾಲೂಕಿನ ಗಣಿಗನೂರು ಡಿ. ಸುರೇಶ್ ಗೆ ರಾಷ್ಟ ಮಟ್ಟದ ಜಾನಪದ ಕಣ್ಮಣಿ ಪ್ರಶಸ್ತಿ, ಗುಂಡ್ಲುಪೇಟೆ ತಾಲೂಕಿನ
. ಕರಕಲಮಾದಳ್ಳಿ ಬಸವರಾಜ್ ತಂಬೂರಿ ಕಲಾವಿದರಿಗೆ ರಾಷ್ಟ ಮಟ್ಟದ ಜಾನಪದ ಕೋಗಿಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹುಬ್ಬಳ್ಳಿ ಜಿಲ್ಲೆಯಲ್ಲಿ ರಾಯಚೂರು ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಡೆದ ಸಮಾರಂಭದಲ್ಲಿ ಬೆಳಕು ಸಂಸ್ಥೆಯ ರಾಜ್ಯ ಅಧ್ಯಕ್ಷ ರಾದ ಅಣ್ಣಪ್ಪ ಮೇಟಿ ಗೌಡ ಹಾಗೂ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ರಾಯಚೂರು ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪಮೇಟಿಗೌಡರು, ಪ್ರಶಸ್ತಿ ವಿಜೇತರಿಗೆಚಾಮರಾಜನಗರ ಬೆಳಕು ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಜ. ಸುರೇಶ್ ನಾಗ್ ಹರದನಹಳ್ಳಿ ಅಭಿನಂದಿಸಿದ್ದಾರೆ.