ವಿದ್ಯಾರ್ಥಿಗಳ ಬಹುದೊಡ್ಡ ಕನಸು ಸಾಧನೆಗೆ ದಾರಿದೀಪ: ಎಂ.ಶಿವಪ್ರಸಾದ್

  • ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ

ಚಾಮರಾಜನಗರ : ವಿದ್ಯಾರ್ಥಿಗಳು ಬಹುದೊಡ್ಡ ಕನಸು ಕಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ದೇವರತ್ನ ಫೌಂಡೇಶನ್ ಸಂಸ್ಥಾಪಕ ಎಂ.ಶಿವಪ್ರಸಾದ್‌ ಹೇಳಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ದೇವರತ್ನ ಫೌಂಡೇಶನ್ ವತಿಯಿಂದ ನಡೆದ 2026-27ನೇ ಸಾಲಿನ ಯುಪಿಎಸ್‌ಸಿ  ಮತ್ತು ಕೆಪಿಎಸ್‌ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ  ಮಾತನಾಡಿ, ದೇವರತ್ನ ಫೌಂಡೇಶನ್ ನೀಡುತ್ತಿರುವ 2026-27ನೇ ಸಾಲಿನ ಯುಪಿಎಸ್‌ಸಿ ‌ ಮತ್ತು ಕೆಪಿಎಸ್‌ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ದೆಹಲಿಯ ಪ್ರಸಿದ್ಧ ಕೋಚಿಂಗ್ ಸೆಂಟರ್‌ಗಳ ಉಪನ್ಯಾಸಕರ ಕರೆಸಿ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಐಎಎಸ್ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಿಲ್ಲಾಧಿಕಾರಿಗಳು, ಆಯುಕ್ತರು ಆಗುವಂತಹ ವಿದ್ಯಾರ್ಥಿಗಳು ಭಾಗವಹಿಸಿದ್ದೀರಿ. ವಿದ್ಯಾಯು ಯಾವ ಶ್ರೀಮಂತ, ರಾಜಕಾರಣಿ, ಅಧಿಕಾರಿ, ಜಾತಿ ಸ್ವತ್ತಲ್ಲ. ಅದು ಪ್ರತಿಭಾವಂತರ ಸ್ವತ್ತು ಆಗಿದೆ ಆಗಾಗಿ ಚೆನ್ನಾಗಿ ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ದೇವರತ್ನ ಫೌಂಡೇಶನ್ ಯಾವುದೇ ಒಂದು ಜಾತಿಗೆ, ರಾಜಕೀಯ ಪಕ್ಷಕ್ಕೆ, ಒಂದು ಧರ್ಮ, ಜಾತಿಗೆ ‌ ಸೀಮಿತವಾಗಿಲ್ಲ. ಇದು ಸರ್ವರ ಸ್ವತ್ತು . ಇದು ಜಾತ್ಯಾತೀತವಾದ,. ಪಕ್ಷಾತೀತವಾದ ಒಂದು ಫೌಂಡೇಶನ್ ಆಗಿದೆ. ಪ್ರಜ್ಞಾವಂತರು, ವಿದ್ಯಾವಂತರು ಜಾತಿ ಮಾಡಬಾರದು. ಮುಂದಿನ ಭವಿಷ್ಯದ ಸಾಕರಮೂರ್ತಿಗಳು ನೀವು ಜಾತಿಯಿಂದ ಹೊರಬಂದು ಈ ದೇಶದ ಆದರ್ಶ ವ್ಯಕ್ತಿಗಳಾಗಬೇಕು. ನಿಮ್ಮನ್ನು ಪ್ರತಿಯೊಬ್ಬರೂ ಗೌರವಿಸುವಂತಾಗಬೇಕು. ಎಂದರು.
ಕಾರ್ಯಕ್ರಮದಲ್ಲಿ ದೇವರತ್ನ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ್ ಸಾಗರ್, ಉಪಾಧ್ಯಕ್ಷ ಪುನೀತ್, ಕಾರ್ಯದರ್ಶಿಶ್ರೀಕಾಂತ್ ,ಖಜಾಂಚಿ ದೊಡ್ಡ ದೇವಯ್ಯ , ಸಂಚಾಲಕ ಸತೀಶ, ಸದಸ್ಯರಾದ ವಿಠಲ್,ಮಂಜುನಾಥ್ , ಸುರೇಶ್, ಪ್ರಜ್ವಲ್ ದೇವರಾಜ್,ರಾಕೇಶ್
ಶಿವರಂಜನ್,ಡಾ. ಬಾಬು ಜಗಜೀವನ್ ರಾಮ್ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್ ಹೆಚ್ ನಾಗರಾಜು,ಅರುಂಧತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜವರಯ್ಯ ಅರಕಲವಾಡಿ, ಉಪಾಧ್ಯಕ್ಷ ಸಿದ್ದಯ್ಯ ಹಸಗೂಲಿ, ಮುಖಂಡ. ಮೂಡಹಳ್ಳಿ ಮೂರ್ತಿ, ಶಿಕ್ಷಕ ಕಾಂತರಾಜು, ವಿಭಾಗಿಯ ಅಧ್ಯಕ್ಷ ಶಿವಮೂರ್ತಿ, ನೌಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ. ಬಾಬು ಜಗಜೀವ ರಾಮ್ ಸಂಘಟನೆಗಳು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಎಂಶಿವಕುಮಾರ್, ಶಿವಕುಮಾರ್ , ರಾಮು.ರಾಕ್ ಗಿರೀಶ್. ಸಿದ್ದು. ಸ್ವಾಮಿ ನಾಯಕ್, ಡ್ಯಾನ್ಸರ್ ಸೀನು. ಕ್ವಾಲಿಟಿ ನವೀನ್. ನಾಗೇಶ್. ಸಿದ್ದಪ್ಪಾಜಿ. ಚನ್ನಬಸವಯ್ಯ. ಮಹದೇವಯ್ಯ. ಶಂಕರ್. ಸುಂದರ್. ದೇವರಾಜು. ಲಿಂಗರಾಜು. ದೇವರತ್ನ ಪೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಸಾಗರ್, ಶ್ರೀಕಂಠ, ಪುನೀತ್, ಬಸವಯ್ಯ, ಅರಕಲವಾಡಿ ಮಹದೇವಯ್ಯ, ಮೂಡಹಳ್ಳಿಮೂರ್ತಿ, ಆರ್.ಎನ್.ಶಿವಣ್ಣ, ಪಿಲ್ಲಹಳ್ಳಿ ಶಿವಕುಮಾರ್, ಸುರೇಶ್, ಉಗನೇದಹುಂಡಿ ಸುರೇಶ್, ಸ್ವಾಮಿ, ಅಮಚವಾಡಿ ಪುಟ್ಟಸ್ವಾಮಿ, ಮೂಡಹಳ್ಳಿ ಶಂಕರ್ , ವಿದ್ಯಾರ್ಥಿಗಳು
ಹಾಜರಿದ್ದರು.

Leave a Reply

Your email address will not be published. Required fields are marked *