ಮಕ್ಕಳ ಕೈಯಲ್ಲಿ ಪುಸ್ತಕವಿದ್ದರೆ ಜ್ಞಾನ ಬೆಳೆಯುತ್ತದೆ

  • ಸರ್ಕಾರಿ ಬೋಧಕೇತರ ಸಂಘದ ಜಿಲ್ಲಾಧ್ಯಕ್ಷ ರೇವಣ್ಣ ಅನಿಸಿಕೆ.
ಹೊಳೆನರಸೀಪುರ: ತಾಲೂಕಿನ  ದೊಡ್ಡ ಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಎಡೆ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 13.11.2026ರಂದು ಯಶಸ್ವಿಯಾಗಿ ನಡೆಯಿತು.
     ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಿ. ಆರ್ ಸಿ. ಪರಮೇಶ್ವರ ರವರು ಮಾತನಾಡುತ್ತಾ ಪ್ರತಿಭಾ ಕಾರಂಜಿ ಎಂದರೇನು? ಪ್ರತಿಭಾ ಕಾರಂಜಿಯ ಮಹತ್ವದ ಇತ್ಯಾದಿ ವಿಷಯಗಳ ಬಗ್ಗೆ ಅನೇಕ ಅಂಕಿ ಅಂಶಗಳೊಂದಿಗೆ ವಿಷಯವನ್ನು ಸವಿಸ್ತರವಾಗಿ ತಿಳಿಸಿದರು. ಸರ್ಕಾರ ಸಂಪನ್ಮೂಲ ವ್ಯಕ್ತಿಗಳು ಈ ನಿಟ್ಟಿನಲ್ಲಿ ಮಕ್ಕಳ ಜ್ಞಾನವಿಕಾಸಕ್ಕೆ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದು ಅವೆಲ್ಲವನ್ನ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರೇವಣ್ಣ, ಜಿಲ್ಲಾಧ್ಯಕ್ಷರು, ಬೋಧಕೇತರ ಸಂಘ, ಮೈಸೂರು ರವರು ಮಾತನಾಡುತ್ತಾ.... "ಮಕ್ಕಳ ಕೈಯಲ್ಲಿ ಪುಸ್ತಕವಿದ್ದರೆ ಜ್ಞಾನ ಬೆಳೆಯುತ್ತದೆ. ಮಕ್ಕಳ ಮನಸ್ಸಲ್ಲಿ ಕನಸಿದ್ದರೆ ಸಾಧನೆ ಮೂಡುತ್ತದೆ". ಎಂದು ಅಭಿಪ್ರಾಯಪಟ್ಟರು. ಮಕ್ಕಳ ಪ್ರತಿಭೆಗೆ ವೇದಿಕೆ ಸಿಕ್ಕರೆ ನಾಡಿನ ಭವಿಷ್ಯ ಉಜ್ವಲವಾಗುತ್ತದೆ. ಅಂತಹ ಉಜ್ವಲ ಭವಿಷ್ಯವನ್ನು ನಿರ್ಮಿಸುವ ಮಹತ್ವದ ವೇದಿಕೆಯೇ ನಮ್ಮ ಪ್ರತಿಭಾ ಕಾರಂಜಿ ಎಂದು ತಿಳಿಸಿದರು.

ಮುಂದುವರಿದು ಮಾತನಾಡುತ್ತಾ ಮಕ್ಕಳ ಪ್ರತಿಭೆ ಆಕಾಶದಲ್ಲಿರುವ ನಕ್ಷತ್ರಗಳಂತೆ. ಪ್ರತಿಯೊಂದು ನಕ್ಷತ್ರಕ್ಕೂ ತನ್ನದೇ ಆದ ಬೆಳಕು ಇರುತ್ತದೆ. ಅದೇ ರೀತಿ ಪ್ರತಿಯೊಂದು ಮಗುವಿನಲ್ಲಿಯೂ ವಿಭಿನ್ನವಾದ ಪ್ರತಿಭೆ ಇರುತ್ತದೆ. ಅದು ಸಾಕಾರವಾಗಬೇಕಾದರೆ ಶಿಕ್ಷಕರ ಜೊತೆಗೆ ಪೋಷಕರು ಕೂಡ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಬರುವಂತೆ ನೋಡಿಕೊಳ್ಳಬೇಕು ಎಂದರು.
ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಪಾರವಾದ ಪ್ರತಿಭೆ ಹಡಗಿದೆ. ಆದರೆ ಅವಕಾಶಗಳ ಕೊರತೆಯಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ. ಪ್ರತಿಭಾ ಕಾರಂಜಿಯು ಗ್ರಾಮೀಣ ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಉತ್ತಮ ವೇದಿಕೆ ಇದಾಗಿದೆ ಎಂದರು.
ವೇದಿಕೆ ಮೇಲೆ ಸಂಘದ ಪದಾಧಿಕಾರಿಗಳಾದ ಮಲ್ಲರಾಜ್. ನಾಗರಾಜ್ ಪಣೀಶ. ವೈ ಕೆ ಸುರೇಶ್. ಮುಖ್ಯ ಶಿಕ್ಷಕರಾದ ರಾಮಕೃಷ್ಣ. ಶಿಕ್ಷಕರಾದ ಲೋಕೇಶ್. ರವಿಕುಮಾರ್. ಗ್ರಾಮದ ಮುಖಂಡರಾದ ಶಶಿಕುಮಾರ್ ಪ್ರದೀಪ್, ಜಗದೀಶ್, ಹಲೋ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು
ಸಿ.ಆರ. ಪಿ ರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *