ಕನಕದಾಸರು ಮಹಾನ್ ಸಮಾಜ ಸುಧಾರಕರು : ಶ್ರೀನಿವಾಸಗೌಡ

  • ಕರ್ನಾಟಕ ಸೇನಾಪಡೆಯಿಂದ ಕನಕ ಜಯಂತಿ ಆಚರಣೆ

ಚಾಮರಾಜನಗರ: ಕನಕದಾಸರು ತಮ್ಮ ಸಾಹಿತ್ಯ, ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ, ಮೂಢನಂಬಿಕೆ, ಮಾನವೀಯ ತಾರತಮ್ಯಗಳನ್ನು ಪ್ರಶ್ನಿಸಿಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಕರ್ನಾಟಕ ಸೇನಾಪಡೆಯಿಂದ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿದರು.

ಸುಮಾರು 15 ಶತಮಾನಗಳ ಹಿಂದೆಯೇ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಚಿಂತಕರಾಗಿದ್ದರು. ಕನಕದಾಸರ ಕೀರ್ತನೆಗಳು ಭಕ್ತಿಯ ಜತೆಗೆ ಸಾಮಾಜಿಕ ನ್ಯಾಯ, ಸಮಾನತೆಯ ಸಂದೇಶ ಸಾರಿದರು. ವಿದ್ಯಾರ್ಥಿಗಳು, ಯುವಕರು ಅವರ ಕೀರ್ತನೆಗಳು, ಸಾಹಿತ್ಯ ಓದಬೇಕು ಎಂದು ಸಲಹೆ ನೀಡಿದರು.

ಮನುಷ್ಯನ ಶ್ರೇಷ್ಠತೆ ಆತನ ಜನ್ಮ ಅಥವಾ ಜಾತಿಯಿಂದ ನಿರ್ಧಾರವಾಗುವುದಿಲ್ಲ. ಬದಲಾಗಿ ಆತನ ಜ್ಞಾನ, ಗುಣ, ನಡವಳಿಕೆ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯಿಂದ ನಿರ್ಧಾರವಾಗುತ್ತದೆ ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತ. ಅವರ ತತ್ವಾದರ್ಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ರಾಚಪ್ಪ, ವರದನಾಯಕ, ಆಟೋ ಲಿಂಗರಾಜು, ಸೋಮವಾರ ಪೇಟೆ ಮಂಜು, ಭೂಪತಿ, ಲೋಕೇಶ್ ಇತರರು ಹಾಜರಿದ್ದರು

Leave a Reply

Your email address will not be published. Required fields are marked *