ಚಾಮರಾಜನಗರ : ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ನಾಟಕ ರಚನೆ ಮಾಡಿ ಜಗತ್ತಿನಲ್ಲಿ ಕನ್ನಡದ ನಾಟಕಗಳಿಗೆ ಗೌರವ ತಂದು ಕೊಟ್ಟವರು ಟಿಪಿ ಕೈಲಾಸಂ ರವರು. ರಂಗಭೂಮಿಯಲ್ಲಿಆಧುನಿಕ ಕನ್ನಡ ನಾಟಕವನ್ನು ಪ್ರಾರಂಭಿಸಿದ ನಾಟಕಕಾರ ಟಿ ಪಿ ಕೈಲಾಸಂ ರವರನ್ನು ಕನ್ನಡ ಪ್ರಹಸನ ಪಿತಾಮಹ ಎಂದೇ ಜನಪ್ರಿಯರಾದವರು. ಕನ್ನಡ ಕೊಬ್ಬನ್ನೇ ಕೈಲಾಸಂ ಎಂಬಂತೆ, ಕನ್ನಡಿಗರ ಮನೆ ಮನದಲ್ಲಿ ನೆಲೆಸಿರುವ ಪ್ರಮುಖವಾದ ಹೆಸರು ಕೈಲಾಸಂ ಎಂದು ಸಂಸ್ಕೃತಿ ಚಿಂತಕರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಟಿಪಿ ಕೈಲಾಸಂ ಕೊಡುಗೆಗಳು ಕುರಿತು ಮಾತನಾಡುತ್ತ ಜಾರ್ಜ್ ಬರ್ನಾಡ್ ಷಾ ನಾಟಕಗಳಿಂದ ಪ್ರಭಾವಕ್ಕೆ ಒಳಗಾದ ಕೈಲಾಸಂ ರವರು ಹಲವಾರು ನಾಟಕಗಳನ್ನು ಕವನಗಳನ್ನು ಕಾದಂಬರಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ತಮ್ಮ ವಿಶಿಷ್ಟ ಸಾಹಿತ್ಯ ಮತ್ತು ರಚನೆಯ ಮೂಲಕ ವಿಶ್ವಕ್ಕೆ ಹೊಸತನವನ್ನು ಮಿಡಿದವರು ಇವರ ಟೊಳ್ಳುಗಟ್ಟಿ ನಾಟಕವು ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿತು ಕೋಂ ರೋಲ್ ಬಹಿಷ್ಕಾರ ಸತ್ತವನ ಸಂತಾಪ ಅಮ್ಮಾವ್ರ ಗಂಡ ಪೋಲಿಕಿಟ್ಟಿ ಮುಂತಾದವು ವ್ಯಾಪಕವಾಗಿ ಪ್ರದರ್ಶನಗೊಳ್ಳುತ್ತಲೇ ಇದೆ ಇವರ ಕಥೆಗಳು ಕವನಗಳು ಇಂಗ್ಲಿಷ್ ಕವನ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ದಿಕ್ಕಿನಲ್ಲಿ ಯೋಚಿಸುವಂತಹ ಸಾಹಿತ್ಯವಾಗಿದೆ ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರಾಗಿ ತಮ್ಮ ಸಾಹಿತ್ಯದ ಹಾಸ್ಯ ಚಟಾಕಿಗಳಿಗೆ ಜನಪ್ರಿಯರಾಗಿ ರಂಗಭೂಮಿಯಲ್ಲಿ ವಿನೂತನ ಭಾಷೆ ಮತ್ತು ಸಾಹಿತ್ಯ ಮತ್ತು ರಾಗಗಳ ಸಂಯೋಜನೆಯನ್ನು ರೂಪಿಸಲು ಶಕ್ತವಾಯಿತು. ಇಂಗ್ಲೆಂಡಿನ ಕಾನ್ಸ್ಟೆಂಟಿ ನೊಪಲ್ ಕವನಕ್ಕೆ ಇಂಗ್ಲಿಷ್ ಸಂಗೀತಗಾರ ಹೊಸ ರಾಗದಲ್ಲಿ ಹಾಡುವ ಸವಾಲಿಗೆ ಕೈಲಾಸಂ ರವರು ತಮ್ಮದೇ ಆದ ವಿಶಿಷ್ಟ ಸಾಹಿತ್ಯದ ಕೋಳಿಕೆ ರಂಗ ಹಾಡುವ ಮೂಲಕ ಬಹುಮಾನವನ್ನು ಪಡೆದು ಕನ್ನಡದ ಕೀರ್ತಿಯನ್ನು ಹೆಚ್ಚಿಸಿದವರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆಯನ್ನು 1945 ರಲ್ಲಿ ವಹಿಸಿ ಸರಳ,ಸುಂದರ, ಶುದ್ಧ, ಚಿಕ್ಕ ಮತ್ತು ಚೊಕ್ಕ ಅಧ್ಯಕ್ಷತಾ ಭಾಷಣವನ್ನು ಮಾಡಿದವರು ಎಂದರು.
ಜನಪದ ಗಾಯಕರು ಮುಖಂಡರಾದ ರವಿಚಂದ್ರ ಪ್ರಸಾದ್ ಕಹಳೆರವರು ಕೈಲಾಸಂ ರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಉದ್ಘಾಟಿಸಿ ಕನ್ನಡ ರಂಗಭೂಮಿಗೆ ವಿಶಿಷ್ಟತೆಯನ್ನು ತಂದುಕೊಟ್ಟ ಕೈಲಾಸಂ ರವರಿಂದ ಗ್ರಾಮೀಣ ಪ್ರದೇಶಗಳಲ್ಲೂ ಇವರ ನೂರಾರು ನಾಟಕಗಳು ಪ್ರದರ್ಶನಗೊಂಡು ಕಲಾವಿದರನ್ನು ರೂಪುಗೊಳ್ಳಲು ಸಹಾಯವಾಯಿತು.
ಕಲಾವಿದರಿಗೆ ಹೊಸ ವಿಚಾರಗಳು, ಹೊಸ ಶೈಲಿಯ ನಾಟಕಗಳ ರಚನೆ ಅಗತ್ಯವಾಗಿದೆ. ನಾಟಕಗಳ ರಚನೆ ಇಂದಿನ ದಿನದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ದುರಂತ ಎಂದು ತಿಳಿಸಿದರು.
ಪ್ರಾಚಾರ್ಯರು ಮತ್ತು ಗಾಯಕರಾದ ಕಾಗಲವಾಡಿ ರಂಗಸ್ವಾಮಿ ರವರು ಕೈಲಾಸಂ ರವರ ಗಾಯನ ಹೊಸತನ ತರುತ್ತದೆ. ವಿಶಿಷ್ಟ ಸಾಹಿತ್ಯ ಮತ್ತು ಜನಪದ ಸೊಗಡಿನ ಹಾಡು ಜನಪ್ರಿಯ ಕ್ಷೇತ್ರವಾಗಿ ರೂಪಿಸಿದೆ. ಲಕ್ಷಾಂತರ ಕೇಳುಗರನ್ನು ಕೈಲಾಸಂ ರವರ ಹಾಡುಗಳು ಸೃಷ್ಟಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ನಿವೃತ್ತ ಶಿಕ್ಷಕಿ ಸರಸ್ವತಿ, ಶಿವರಾಮ್, ಮಹೇಶ್, ಸುರೇಶ್ ದೊಡ್ಡಮೋಳೆ, ಆನಂದ ಇದ್ದರು.
ಟಿಪಿ ಕೈಲಾಸಂರವರ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
