ಬಿಸಿಲ ಬೇಗೆಗೆ ತಂಪೆರೆದ ಮಳೆರಾಯ : ರೈತರ ಮೊಗದಲ್ಲಿ ಸಂತಸ

ಚಾಮರಾಜನಗರ: ಮಳೆ ಇಲ್ಲದೆ  ಬಿಸಿಲಿನ ತಾಪದಿಂದ ಕಂಗೆಟ್ಟಿದ ನಗರದಲ್ಲಿಂದು ಸಂಜೆ ಮಳೆ ಸುರಿದು ಜನತೆಯಲ್ಲಿ ಸಂತಸ ತಂದಿದೆ.

ಕಳೆದ ವಾರದಿಂದ ಬಿಸಿಲಿನ ತೀವ್ರತೆಯಿಂದ   ಕಾದ ಬಾಣಲಿಯಂತಾಗಿದ್ದ ಧರೆಗೆ ಮಳೆರಾಯ ತಂಪನ್ನೆರೆಯಿತು..ಮಳೆ ಇಲ್ಲದೆ ಬರದಿಂದ ತತ್ತರಿಸಿರುವ  ಬಿಸಿಲ ಧಗೆ ಮಿತಿ ಮೀರಿತ್ತು. ಉಷ್ಣಾಂಶ ಹೆಚ್ಚಾಗಿ ಹಗಲಲ್ಲಿ ಹೊರಗಡೆ ಓಡಾಡಲಾಗದಷ್ಟು ಬಿಸಿ ಇತ್ತು. ಇಂದು ಸಂಜೆ ಸುರಿದ ವರುಣನ ಕೃಪೆಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಏಕಾಏಕಿ ಸುರಿದ ಮಳೆಯಲ್ಲಿ ನೆನೆಯದಂತೆ ತಪ್ಪಿಸಿಕೊಳ್ಳಲು ಜನ ಪರದಾಡಿದರು. ದ್ವಿಚಕ್ರ ವಾಹನಗಳ ಸವಾರರು ಮಳೆಯಲ್ಲಿ ಸಂಚರಿಸಿದರು. ರಸ್ತೆಯ ತಗ್ಗು ಮತ್ತು ಗುಂಡಿಗಳಲ್ಲಿ  ನೀರು ಹರಿಯಿತು. ಬಿಸಿಲಿಗೆ ಕಾದಿದ್ದ ಧರೆಯು ಮಳೆ ಸಿಂಚನದಿಂದ ತಣ್ಣಗಾಯಿತು.ಜಿಲ್ಲೆಯಲ್ಲಿ ಮಳೆಗಾಗಿ ರೈತರು ಸಲ್ಲಿಸಿದ್ದ ಪೂಜೆ ಹಾಗೂ ಪ್ರಾರ್ಥನೆಗೆ ಕಡೆಗೂ ಮಳೆ ಕೃಪೆಯಾಯಿತು.

Leave a Reply

Your email address will not be published. Required fields are marked *