
ಚಾಮರಾಜನಗರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ ಹಾಗೂ ತಾಲೂಕು ಘಟಕಕ್ಕೆ 2026-31 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಅಯ್ಕೆ ಯಾದ ನೂತನ ಪದಾಧಿಕಾರಿಗಳನ್ನು ಬಿಇಒ ಹನುಮಶೆಟ್ಟಿ ಸನ್ಮಾನಿಸಿ ಶುಭ ಕೋರಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ
ಬಹುಮತದೊಂದಿಗೆ ಆಯ್ಕೆಯಾದ ನೂತನ ಜಿಲ್ಲಾಧ್ಯಕ್ಷ
ಮಹಾದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಾದಪ್ಪ, ಅವಿರೋಧವಾಗಿ ಆಯ್ಕೆಯಾದ ಮಹಿಳಾ ಉಪಾಧ್ಯಕ್ಷೆ ಭವಾನಿದೇವಿ
ಹಾಗೂ ಚಾಮರಾಜನಗರ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಸುಧಾ, ಉಪಾಧ್ಯಕ್ಷರಾದ ಸಿ.ಎಂ.ಸುಶೀಲ, ಧನಂಜಯ,
ಖಜಾಂಚಿ ಮಹಮ್ಮದ್ ಸಮಿಉಲ್ಲಾ, ಸಹ ಕಾರ್ಯದರ್ಶಿ ಗಳಾದ
ಕೃಷ್ಣಮೂರ್ತಿ, ಬಿ.ಎಸ್. ಲತಾ, ಸಂಘಟನಾ ಕಾರ್ಯದರ್ಶಿ ಭಾರತ್ ಭೂಷಣ್ , ಬಿ.ಎನ್. ಶ್ವೇತಾ, ನಿರ್ದೇಶಕರಾದ ಸಿ.ಮಲ್ಲಿಕಾರ್ಜುನ್, ಆನಂದ್ ಕುಮಾರ್, ನಟರಾಜು ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ, ತಾಲೂಕು ಸಮಿತಿ ನೂತನ ಪದಾಧಿಕಾರಿಗಳು ಇಲಾಖೆ ಯೊಂದಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಕೋರಿದರು.
ಸನ್ಮಾನ ಸ್ವೀಕರಿಸಿದ ಜಿಲ್ಲಾಧ್ಯಕ್ಷ ಮಹಾದೇವಸ್ವಾಮಿ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ಗಾಗಿ ನಮ್ಮ ಸಂಘವು ಇಲಾಖೆಯೊಂದಿಗೆ ಎಲ್ಲರೀತಿಯಲ್ಲೂ ಸಹಕಾರ ನೀಡಲಾಗುತ್ತದೆ ಎಂದರು.