ವರ್ತಕರು ಗುಣಾತ್ಮಕ ಸೇವೆ ನೀಡಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ : ಎ. ದಿನೇಶ್

  • ಚಾಮರಾಜನಗರ ವರ್ತಕರ ಸಂಘದ 60ನೇ ವಾರ್ಷಿಕೋತ್ಸವ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಚಾಮರಾಜನಗರ : ಇಂದಿನ ಸ್ಪಧಾತ್ಮಕ ಯುಗದಲ್ಲಿ ವರ್ತಕರು ಗ್ರಾಹಕರಿಗೆ ಉತ್ತಮ ಗುಣಾತ್ಮಕ ಸೇವೆಯನ್ನು ನೀಡಿದರೆ ಮಾತ್ರ ಮಾರುಕಟ್ಟೆಯಲ್ಲಿ ದೀರ್ಘಕಾಲ ನೆಲಸಿ, ಯಶಸ್ಸು ಸಾಧಿಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಡಿ.ಸಿ. ಟ್ರಸ್ಟ್ ನಿರ್ದೇಶಕ ಎ.ದಿನೇಶ್ ಹೇಳಿದರು.
  ನಗರದ ವರ್ತಕರ ಭವನದಲ್ಲಿ ನಡೆದ ವರ್ತಕರ ಸಂಘದ 60ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವರ್ತಕ ಬಂಧುಗಳು ಸಮಾಜದಲ್ಲಿ ಕೆಲಸ ಕಾರ್ಯಗಳನ್ನು ಮಾಡುವ ಜತೆಗೆ ತಾವೂ ಮಾಡುವ ವ್ಯವಹಾರದಲ್ಲಿ ಒಂದು ಭಾಗವನ್ನು ಸಾಮಾಜಿಕ ಸೇವೆಗೆ ಮೀಸಲಿಡಬೇಕು. ಸಂಘವು ಮತ್ತಷ್ಟು ಅಭಿವೃದ್ಧಿ ಹೊಂದಿ ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದು ಶುಭ ಕೋರಿದರು.
  ವರ್ತಕರು ದಿನನಿತ್ಯದ ಕೆಲಸ ಕಾರ್ಯದಲ್ಲಿ ಅನಿವಾರ್ಯ ಅಗತ್ಯ ಎನಿಸುವ ಎಲ್ಲ.. ಸಾಮಾಗ್ರಿಗಳನ್ನು ಮಾರಾಟ ವ್ಯವಸ್ಥೆ ವರ್ತಕರ ಮೂಲಕ ಪ್ರತಿನಿತ್ಯ ಕಾಣುತ್ತೇವೆ. ನಮ್ಮ ಬದುಕಿಗೆ ಅನಿವಾರ್ಯವಾಗಿರುವ ವರ್ತಕರು ಇಂದು ಸಂಘ ಕಟ್ಟಿಕೊಂಡ ಸಂಘದ 60ನೇ ವಾರ್ಷಕೋತ್ಸವ ಆಚರಿಸಿಕೊಳ್ಳುತ್ತಿರುವುದು ಒಂದು ಉತ್ತಮ… ಕೆಲಸವಾಗಿದೆ. ಪ್ರತಿವರ್ಷಕ್ಕೊಂದು ಬಾರಿ ವಾರ್ಷಿಕೋತ್ಸವ ಮಾಡುವ ಮೂಲಕ ವರ್ತಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  ವರ್ತಕರು ಅನ್ನದಾತರು : ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಆರ್. ಪ್ರದೀಪ್ ದೀಕ್ಷಿತ್ ಮಾತನಾಡಿ, ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಒಂದು ಕಡೆ 200 ವರ್ಷ ಪೂರೈಸಿದರೆ, ಚಾಮರಾಜನಗರ ವರ್ತಕರ ಸಂಘವು 60 ವರ್ಷಗಳನ್ನು ಪೂರೈಸಿದೆ. ಸಂಘವು 1965 ರಲ್ಲಿ ಪ್ರಾರಂಭವಾಗಿ ಚಾಮರಾಜೇಶ್ವರನ ಧರ್ಮಶಾಲೆಯಲ್ಲಿ ವರ್ತಕರು ಒಗ್ಗೂಡಿ ಸಭೆ ಮಾಡಿ ಹಂತಹಂತವಾಗಿ ಸಂಘಟನೆ ಮಾಡಿ 1967ರಲ್ಲಿ ಸಂಘ ನೋಂದಣಿಯಾಗಿದ್ದು, ಚಾಮರಾಜನಗರದ ವರ್ತಕರು ಅನ್ನದಾತರು. ಏಕೆ ಎಂದರೆ ಮಹಾರಾಜರು ಚಾಮರಾಜೇಶ್ವರ ದೇವಸ್ಥಾನ ಸ್ಥಾಪನೆ ಮಾಡಬೇಕಾದರೆ ಶೃಂಗೇರಿ ಗುರುಗಳ ಹತ್ತಿರ ಹೋಗುತ್ತಾರಂತೆ. ಹೋದಂತಹ ಸಂದರ್ಭದಲ್ಲಿ ನೀನು ಸ್ಥಾಪನೆ ಮಾಡಿಲಿಕ್ಕೆ ಅಂದುಕೊಂಡಿರುವ ಲಿಂಗಬೇಡ. ನನ್ನ ಹತ್ತಿರ ಒಂದು ಲಿಂಗ ಇದೆ. ಅತಿ ಹೆಚ್ಚಾಗಿ ಅನ್ನದಾನ ನಡೆಯಬೇಕು. ಯತಿಯಾಗಿ, ಯೋಗಿಯಾಗಿ ನನ್ನಲ್ಲಿ ಆ ಶಕ್ತಿ ಇಲ್ಲ. ನೀನು ರಾಜನಾಗಿದ್ದೀಯಾ ಆ ಶಕ್ತಿ ನಿನ್ನಲ್ಲಿ ಇದೆ. ಆಗಾಗಿ ಈ ಲಿಂಗವನ್ನು ತೆಗೆದುಕೊಂಡಿ ಹೋಗಿ ಹೆಚ್ಚಾಗಿ ಅನ್ನದಾನ ಮಾಡುವಂತೆ ಹೇಳಿದ್ದಾರೆ ಎಂದು ಹಿರಿಯರು ಹೇಳುತ್ತಾರೆ ಎಂದರು.
   ಪ್ರತಿಭಾ ಪುರಸ್ಕಾರ: ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವರ್ತಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್ ಅಧ್ಯಕ್ಷತೆ ವಹಿಸಿದ್ದರು.
  ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಗೌರವ ಕಾರ್ಯದರ್ಶಿ ಕೆ.ಎಸ್.ಚಿದಾನಂದ ಗಣೇಶ, ಉಪಾಧ್ಯಕ್ಷ ಎಂ.ರಾಜಣ್ಣ, ಸಹ ಕಾರ್ಯದರ್ಶಿ ಎಂ.ಕಮಲ್ ರಾಜ್, ಖಜಾಂಚಿ ಹೆಚ್.ವಿ.ವಿಶ್ವಕುಮಾರಸ್ವಾಮಿ ಹಾಗೂ 2025-26ನೇ ಸಾಲಿನ  ಕಾರ್ಯನಿರ್ವಾಹಕ ಮಂಡಳಿ ನಿರ್ದೇಶಕರು, ಮಾಜಿ ಅಧ್ಯಕ್ಷರು, ವರ್ತಕರ ಕುಟುಂಬದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *