ಶ್ರೀ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಗೆ ಟೈಪಿಂಗ್/ ಶಾರ್ಟಹ್ಯಾಂಡ್/ ಕಂಪ್ಯೂಟರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ.

ಚಾಮರಾಜನಗರ:- ಸೆ-೧೨- ಶ್ರೀ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಗೆ ಜುಲೈ ೨೦೨೬ನೇ ಸಾಲಿನ ಕಂಪ್ಯೂಟರ್/ ಟೈಪಿಂಗ್ ಮತ್ತು ಶಾರ್ಟಹ್ಯಾಂಡ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಒಟ್ಟು ೧೩ ಡಿಸ್ಟಿಂಕ್ಷನ್, ೪ ಪ್ರಥಮ ದರ್ಜೆ ೨ ದ್ವೀತಿಯ ದರ್ಜೆ ಕಂಪ್ಯೂಟರ್ ಪರೀಕ್ಷೆಯಲ್ಲಿ ೩ ಪ್ರಥಮ ದರ್ಜೆ, ಶೀಘ್ರಲಿಪಿಯಲ್ಲಿ ೧ ಡಿಸ್ಟಿಂಕ್ಷನ್ ಶೇಕಡವಾರು ೧೦೦% ಫಲಿತಾಂಶ ಬಂದಿರುತ್ತದೆ ಎಂದು ಶ್ರೀವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲರಾದ ಆರ್.ವಿ.ಮಹದೇವಪ್ಪ ತಿಳಿಸಿದ್ದಾರೆ.

ನಗರದ ಚಮಾಲ್ ಬೀದಿ,೨ನೇ ಕ್ರಾಸ್ ಇಂಡಿಯನ್ï ಓವರ್‌ಸೀಸ್ ಬ್ಯಾಂಕ್ ಕಟ್ಟಡದಲ್ಲಿ ಇರುವ -ಶ್ರೀವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಗೆ ೭೪ ವರ್ಷ ಪೂರೈಸಿದ್ದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಗೆ ೧೮೬ವಿದ್ಯಾರ್ಥಿಗಳು ಸರ್ಕಾರ ವಿವಿಧ ಇಲಾಖೆಗಳಲ್ಲಿ ಬೆರಳಚ್ಚುಗಾರರಾಗಿ ಮತ್ತು ಶೀಘ್ರಲಿಫಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದರಲ್ಲಿ ಹೆಚ್ಚು ವಿದ್ಯಾರ್ಥಿಗಳು ಸರ್ಕಾರದ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದ ಇವರನ್ನು ನಗರದ ಹಲವಾರು ಸಂಘ, ಸಂಸ್ಥೆ ಪದಾಧಿಕಾರಿಗಳು ಮತ್ತು ಪ್ರಾಂಶುಪಾಲರು, ಕಂಪ್ಯೂಟರ್ ಮತ್ತು ಟೈಪಿಂಗ್ ಶಿಕ್ಷಕಿ ಲತಾಮಹದೇವಪ್ಪ ಅಭಿನಂದನೆ ಕೋರಿದ್ದಾರೆ.
ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು
೧)ವೋಲ್ವಿಕ ದಿವಾಕರ್ ೨) ರವಿಕುಮಾರ್ ೩) ದೇವಮ್ಮ, ೪) ರಮ್ಯ ೫) ಮಹೇಂದ್ರಕುಮಾರ್ ೬) ಪ್ರಜ್ಞಾ.ಸಿ ೭) ಜಗದಾಂಬಿಕ ೮) ಸುಂದರಮ್ಮ ೯) ಚಿತ್ರಶ್ರೀ.ಬಿ

Leave a Reply

Your email address will not be published. Required fields are marked *