ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ : ಉಮ್ಮತ್ತೂರು ಇಂದುಶೇಖರ್

  • ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಅಭ್ಯಾಸದ ಜೊತೆಗೆ ಕಾನೂನುಗಳ ಅರಿವು ಕೂಡ ಇರಬೇಕು. ಸಾಮಾಜಿಕ ಬದಲಾವಣೆ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.
ತಾಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಷ್ಟೇ ಕಾನೂನು ಅರಿವು ಕೊಟ್ಟರೂ ಕೂಡ ಬಾಲ್ಯವಿವಾಹ, ಮೂಡನಂಬಿಕೆ ಹೆಚ್ಚಾಗಿ ನಡೆಯುತ್ತಿ
ದೆ. ಇದಕ್ಕೆ. ಶಿಕ್ಷಣದ ಕೊರತೆ ಕಾರಣವಾಗಿದೆ. ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ತುಂಬಿದ್ದರೆ ಮಾತ್ರ ವಿವಾಹ ಮಾಡಬೇಕು. ಇಲ್ಲವಾದರೆ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ. ಬಾಲ್ಯ ವಿವಾಹ ಮಾಡುವ ಪೋಷಕರಿಗೂ ಕಲ್ಯಾಣಮಂಟಪ ಮಾಲೀಕರಿಗೂ ಪೂಜಾರಿಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಬಾಲ್ಯವಿವಾಹದಿಂದ ಮಕ್ಕಳ ಆರೋಗ್ಯ ಶಿಕ್ಷಣದ ಮೇಲೆ ಪರಿಣಾಮ ಬೀರುತದೆ. ಬಾಲ್ಯ ವಿವಾಹ ಪ್ರಕರಣಕ್ಕೆ ಜಿಲ್ಲಾ ನ್ಯಾಯಾಲದಲ್ಲೂ ಶಿಕ್ಷೆಯಾಗಿರುವ ನಿದರ್ಶನಗಳಿವೆ ಎಂದರು.
ಪೋಕ್ಸೋ ಕಾಯ್ದೆಯನ್ನು 2012ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ
ವನ್ನು ಯಾರೇ ಮಾಡಿದ್ದರೂ ಕೂಡ ಅವರಿಗೆ ಕಠಿಣ
ಶಿಕ್ಷೆಗೆ ಗುರಿಪಡಿಸಲಾಗುವುದು ಜೊತೆಗೆ 10 ಲಕ್ಷದವರೆಗೂ ಡಂಡ ವಿಧಿಸಿರುವುದು ಕಾನೂವಿನಲ್ಲಿ ಕಾಣುತ್ತೇವೆ ಎಂದರು.
ವಾಹನ ಚಲನೆ ಮಾಡಬೇಕಾದರೆ 18 ವರ್ಷ ತುಂಬಿರಬೇಕು. ವಾಹನ ಪರವಾನಗಿ ಹೊಂದಿರಬೇಕು. ವಾಹನ ವಿಮೆ ಮಾಡಿಸಿರಬೇಕು ಎಂದರು.
ಉಪನ್ಯಾಸಕ ಸುರೇಶ್ ಋಗ್ವೇದಿ ಮಾತನಾಡಿ, ಇಡೀ ದೇಶದ್ಯಾಂತ ಕಾನೂನು ಸೇವೆಗಳ ಪ್ರಾಧಿಕಾರಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭವಿಷ್ಯ ಪ್ರಜೆಗಳಾದ ವಿದ್ಯಾರ್ಥಿಗಳಿಗೆ, ಯುವಕರಿಗೆ ಸಾಮಾನ್ಯ ಕಾನೂನು ಅರಿವು ಮೂಡಿಸಲಾಗುತ್ತದೆ. ಕಾನೂನುಗಳ ಅರಿವು, ಜಾಗೃತಿ ಮತ್ತು ಸಮಗ್ರವಾದ ತಿಳಿವಳಿಕೆಯನ್ನು ವಿಶೇಷವಾಗಿ ಕರ್ನಾಟಕ ಸರ್ಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.
   ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಶಿವನಂಜಪ್ಪ ಮಾತನಾಡಿ, ತಮಗಾಗಿ, ಸಮಾಜಕ್ಕಾಗಿ
ವಿದ್ಯಾರ್ಥಿಗಳು ಕಾನೂನು
ಪಾಲಿಸಬೇಕು. ವಕೀಲರು ನೀಡಿರುವ ಕಾನೂನು ಅರಿವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವಣ್ಣ, ಬಿ.ಎನ್.ರಮೇಶ್, ಎಂ.ಪವಿತ್ರ, ಸುರೇಶ್, ಎನ್.ಪಲ್ಲವಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *