ಮಕ್ಕಳ ಬೆಳವಣಿಗೆ ನಮ್ಮೆಲ್ಲರ ಗುರಿ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ : ಮಕ್ಕಳ ಪ್ರೀತಿಯ ನಗು, ಮುಗ್ದತೆ, ಸ್ಪೂರ್ತಿ, ಚೈತನ್ಯ, ಸರಳತೆ ಪ್ರತಿಯೊಬ್ಬರಲ್ಲೂ ವಿಕಾಸವಾಗಬೇಕು.
ದೇಶದ ಭವಿಷ್ಯ ವಾಗಿರುವ ಮಕ್ಕಳ ಬೆಳವಣಿಗೆ ನಮ್ಮೆಲ್ಲರ ಗುರಿಯಾಗಬೇಕು. ಮಕ್ಕಳ ಸಮಗ್ರ ವಿಕಾಸಕ್ಕಾಗಿ ಸಮಾಜ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಗುಣ ಬೆಳೆಸಿಕೊಳ್ಳೋಣ ಮಕ್ಕಳಲ್ಲಿರುವ ಪ್ರೀತಿ ಎಂಬ ವಿಶ್ವಾಸ ಮಮಕಾರ ಸ್ಪೂರ್ತಿಯನ್ನು ಪ್ರತಿಯೊಬ್ಬ ಮಾನವನು ಸದಾಕಾಲ ಇಟ್ಟುಕೊಂಡು ಜೀವನ ನಡೆಸಬೇಕು ಎಂದು ಸಂಸ್ಕೃತಿ ಚಿಂತಕರು, ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಸೋಮವಾರಪೇಟೆ ಎಂಸಿಎಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಜರುಗಿದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಭಾರತದ ಮೊದಲ ಪ್ರಧಾನಿಯಾದ ಜವಾಹರ್ ಲಾಲ್ ನೆಹರು ರವರು ತಮ್ಮ ಜನ್ಮದಿನವನ್ನು ಮಕ್ಕಳಿಗೆ ಅರ್ಪಿಸಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಪ್ರತಿಯೊಬ್ಬ ಸಾಧಕನ ಉತ್ತಮ ಗುಣಗಳನ್ನು ತಿಳಿದು ಮಾನವನ ವಿಕಾಸ ಮತ್ತು ಪ್ರಗತಿಯ ಮೂಲಕ ದೇಶವನ್ನು ಮುನ್ನಡೆಸೋಣ.
ಭಾರತದಲ್ಲಿ ಇರುವ 18 ಕೋಟಿ ಮಕ್ಕಳು 30 ಕೋಟಿ ಅಧಿಕ ಯುವಕರಲ್ಲಿ ರಾಷ್ಟ್ರಪ್ರಜ್ಞೆ ನಾಡಪ್ರಜ್ಞೆ, ಭಾಷಾ ಪ್ರಜ್ಞೆ ಕಲಾಪ್ರಜ್ಞೆಯನ್ನು ಬೆಳಸಬೇಕು. ಸಂಸ್ಕೃತಿ, ಪರಂಪರೆ, ನಾಡು ನುಡಿ,ಜಲ ಭಾಷೆ,ಧರ್ಮ ಮತ್ತು ದೇಶದ ಬಗ್ಗೆ ಅಭಿಮಾನ, ಸ್ವಾಭಿಮಾನವನ್ನು ಬೆಳೆಸುವ ಮೂಲಕ ಸದೃಢವಾದ ಚಿಂತನೆ ಮೂಡಿಸಬೇಕು.
ಭಾಷೆ ಧರ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಶ್ರಮಿಸಿರುವ ನೂರಾರು ಸಾಧಕರು ಮತ್ತು ಮಹನೀಯರನ್ನು ಗೌರವಿಸುವ ಸಂಪ್ರದಾಯ ಮುಂದುವರೆಯಲಿ.
ವಿದ್ಯಾರ್ಥಿಗಳ ಸಮಗ್ರ ವಿಕಾಸ ಶಿಕ್ಷಣ,ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಇತಿಹಾಸ, ಸಂಸ್ಕೃತಿ ಪರಂಪರೆ, ನೀತಿಶಾಸ್ತ್ರ ಮತ್ತು ರಾಷ್ಟ್ರ ನಿಷ್ಠೆಯ ಪ್ರಮುಖ ಅಂಶಗಳನ್ನು ತಿಳಿಸಿ ಸದೃಢ ಯುವಕರನ್ನಾಗಿ ರೂಪಿಸಬೇಕು.
ಕನ್ನಡ ಕನ್ನಡಿಗ ಕರ್ನಾಟಕದ ಸಮಗ್ರ ಮಾಹಿತಿಯನ್ನು ತಿಳಿಯುವ ಜೊತೆಗೆ ಭಾಷಾಭಿಮಾನ ಹಾಗೂ ದೇಶಾಭಿಮಾನವನ್ನು ಬೆಳೆಸಿಕೊಳ್ಳುವ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಬೇಕು ಎಂದರು.

ಎಂಸಿಎಸ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಮಹದೇವಸ್ವಾಮಿ ಕನ್ನಡ ರಾಜ್ಯೋತ್ಸವ ಆಚರಣೆ ನವಂಬರ್ ಒಂದರ ಮಹತ್ವ ಮತ್ತು ಮೈಸೂರು ಪ್ರಾಂತ್ಯ ಕರ್ನಾಟಕ ರೂಪಿತವಾದ ಇತಿಹಾಸವನ್ನು ಮತ್ತು ಸಾಹಿತ್ಯಗಳ ಅನೇಕ ವಿಚಾರಧಾರೆಗಳ ಮಹತ್ವವನ್ನು
ತಿಳಿಸಿದರು.
ಎಂಸಿಎಸ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಶಶಿಧರ್ಮೂರ್ತಿಯರವರು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಮಹತ್ವ ಹಾಗೂ ಪ್ರತಿಭಾವಿಕಸಕ್ಕೆ ಹಲವಾರು ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಿದರು.

ಚಿತ್ರಕಲಾ ಶಿಕ್ಷಕ ಸಂಪತ್ ಕುಮಾರ್ ಅವರು ಮಕ್ಕಳ ಕಲೆ, ಸಾಹಿತ್ಯ,ಸಂಗೀತ,ಚಿತ್ರಕಲೆ, ನೃತ್ಯ, ವಿವಿಧ ಕಲಾ ಕೌಶಲ್ಯಗಳ ಬಗ್ಗೆ ವಿವಿಧ ಸ್ಪರ್ಧೆಗಳ ಆಯೋಜನೆಯ ಮೂಲಕ ಸ್ಪೂರ್ತಿಯನ್ನು ತುಂಬಿದರು.

ಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ನಾಗರಾಜು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಗೀತಾ ಶಿಕ್ಷಕರಾದ ಮಂಗಳಮ್ಮ ಮಧುರ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮತ್ತು ವಿವಿಧ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಸುರೇಶ್ಎನ್ ಋಗ್ವೇದಿ
ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *