ವಿಕಲಚೇತನರಿಗೆ ಕಾನೂನು ಅರಿವು ಅಗತ್ಯ : ನ್ಯಾಯಾಧೀಶರಾದ ಈಶ್ವರ್

ಸಿಡಿಎಸ್‌ ಭವನದಲ್ಲಿ ವಿಕಲಚೇತನರಿಗೆ ಕಾನೂನು ಅರಿವು ಕಾರ್ಯಾಗಾರ

ಚಾಮರಾಜನಗರ : ವಿಕಲಚೇತನರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಈಶ್ವರ್ ಹೇಳಿದರು.
ನಗರದ ಸಿಡಿಎಸ್‌ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನಗರಾಭಿವೃದ್ಧಿ ಕೋಶ.. ನಗರಸಭೆ, ಸಂಯುಕಾಶ್ರಯದಲ್ಲಿ ಶೇ. 5 ರ ಯೋಜನೆಯಡಿ ನಗರಸಭಾ ವ್ಯಾಪ್ತಿಯ ವಿಕಲಚೇತನರಿಗಾಗಿ ಅಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರ ಹಕ್ಕುಗಳ ಕಾಯ್ದೆ 2016 ಅಡಿಯಲ್ಲಿ ವಿಕಲಚೇತನರಿಗೆ ಶಿಕ್ಷಣ, ಉದ್ಯೋಗ, ಮತ್ತು ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶ. ತಾರತಮ್ಯ ರಹಿತ ಬದುಕು. ದೌರ್ಜನ್ಯ ವಿರುದ್ಧ ಕಾನೂನು ರಕ್ಷಣೆ ಪಡೆಯುವ ಹಕ್ಕು ಇದೆ ಎಂದರು.
ದೇಶದ ಸಂವಿಧಾನ ಎಲ್ಲರಿಗೂ ಸಮಾನತೆ, ಸಮಾನವಾಗಿ ಬದುಕುವ ಹಕ್ಕು ನೀಡಿದೆ. ವಿಕಲಚೇತನರಿಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಇರಬೇಕು. ವಿಕಲಚೇತನರಿಗೆ ಯಾವುದೇ ರೀತಿಯ ಮಾನಸಿಕ, ದೈಹಿಕ ದೌರ್ಜನ್ಯ ಶೋಷಣೆ, ತೊಂದರೆ ಆದಲ್ಲಿ ಕಾನೂನು ಸೇವಾ ಪ್ರಾಧಿಕಾರ ನೆರವು ನೀಡಲಿದೆ ಎಂದರು.
 ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೆಂಕಟೇಶ್, ಕಾರ್ಯಪಾಲಕ ಅಭಿಯಂತರ ರಾಮಚಂದ್ರ, ಮಾಜಿ ಸದಸ್ಯ ಅಬ್ರಾರ್ ಪೌರಾಯುಕ್ತ ಪರಶುರಾಮ ಛಲವಾದಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ, ಪರಿಸರ ಅಭಿಯಂತರ ರೂಪ, ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *